Renukaswamy Message: ರೇಣುಕಾಸ್ವಾಮಿ ಮೆಸೇಜ್ ಗೆ ಪವಿತ್ರಾ ಕೊಟ್ಟ ರೀಪ್ಲೇ ಏನು ಗೊತ್ತಾ…? ಬಿಗ್ ಅಪ್ಡೇಟ್
ಪೋಲೀಸರ ಕೈಗೆ ಸಿಕ್ತು ರೇಣುಕಾಸ್ವಾಮಿ ಮೊಬೈಲ್...!
Renukaswamy Message To Pavitra Gowda: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇನ್ನು ಬಾರಿ ಚರ್ಚೆಯಲ್ಲಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟನಿಂದಾಗಿ ರೇಣುಕಾಸ್ವಾಮಿ ಹತ್ಯೆ ನಡೆದಿರುವ ಆರೋಪವಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಗಸ್ಟ್ 1 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಮತ್ತೆ ಆರೋಪಿಗಳಿಗೆ 14 ದಿನಗಳು ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಅಂದರೆ ದರ್ಶನ್ ಮತ್ತು 16 ಮಂದಿ ಆರೋಪಿಗಳು ಆಗಸ್ಟ್ 14 ರವರೆಗೆ ಜೈಲಿನಲ್ಲಿರಬೇಕಾಗಿದೆ. ಸದ್ಯ ಈ ಪ್ರಕರಣದ ತನಿಖೆ ಕೂಡ ಜೋರಾಗಿಯೇ ನಡೆಯುತ್ತಿದೆ. ಸದ್ಯ ಪೊಲೀಸರು ರೇಣುಕಾಸ್ವಾಮಿ ಪವಿತ್ರ ಗೌಡಗೆ ಕಳುಹಿಸಿದ ಸಂದೇಶದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಪೋಲೀಸರ ಕೈಗೆ ಸಿಕ್ತು ರೇಣುಕಾಸ್ವಾಮಿ ಮೊಬೈಲ್…!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಪವಿತ್ರಾ ಗೌಡ, ಎ2 ದರ್ಶನ್ ಮತ್ತು ತಂಡದ ವಿರುದ್ಧ ಪ್ರಬಲ ಸಾಕ್ಷಿ ಸಿಕ್ಕಿದೆ. ತನಿಖೆ ನಡೆಸಿದ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕೊಲೆಯ ನಂತರ ರೇಣುಕಾ ಸ್ವಾಮಿ ಅವರ ಮೊಬೈಲ್ ಅನ್ನು ಡಿ ಗ್ಯಾಂಗ್ ಮೋರಿಯಲ್ಲಿ ಎಸೆದಿದ್ದರು. ಆ ಮೊಬೈಲ್ ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕೊನೆಗೆ ಆ ಮೊಬೈಲ್ ನಲ್ಲಿ ಸಿಕ್ಕುದ್ದು, ಇದೀಗ ಪೊಲೀಸರಿಗೆ ಸಂಪೂರ್ಣ ಮಾಹಿತಿ ಸಿಕ್ಕಿದೆ. ಈ ವೇಳೆ ರೇಣುಕಾಸ್ವಾಮಿ ಪವಿತ್ರ ಗೌಡಗೆ ಯಾವ ರೀತಿಯ ಅಶ್ಲೀಶ ಸಂದೇಶಗಳನ್ನು ಕಳುಹಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ರೇಣುಕಾಸ್ವಾಮಿ ಮೆಸೇಜ್ ಗೆ ಪವಿತ್ರಾ ಕೊಟ್ಟ ರೀಪ್ಲೇ ಏನು ಗೊತ್ತಾ…?
ರೇಣುಕಾ ಸ್ವಾಮಿ ಮೊಬೈಲ್ ಫೋನ್ ರಿಟ್ರೀವ್ ನಿಂದಾಗಿ ದರ್ಶನ್ ಗೆ ಮತ್ತೊಂದು ಕಂಟಕ ಎದುರಾದಂತಿದೆ. ರೇಣುಕಾ ಸ್ವಾಮಿ ಅವರು ಬಳಸುತ್ತಿದ್ದ ಅದೇ ನಂಬರ್ ನಿಂದ ಹೊಸ ಸಿಮ್ ಪಡೆದು ಡೇಟಾ ಪಡೆಯಲಾಗಿದೆ. ಆತ ಬಳಸುತ್ತಿದ್ದ ವಾಟ್ಸ್ ಆಪ್, ಇನ್ ಸ್ಟಾಗ್ರಾಂ, ಫೇಸ್ ಬುಕ್ ಮುಂತಾದ ಆಪ್ ಗಳ ಮಾಹಿತಿ ಇದೀಗ ಪೊಲೀಸರ ಕೈ ಸೇರಿದೆ. ಅವನು ಯಾರಿಗೆ ಸಂದೇಶವನ್ನು ಕಳುಹಿಸಿದ್ದಾರೆ…? ಪವಿತ್ರ ಗೌಡರಿಗೆ ರೇಣುಕಾ ಸ್ವಾಮಿ ಕಳುಹಿಸಿದ ಸಂದೇಶವೇನು…? ಪವಿತ್ರಾ ಕೊಟ್ಟ ರೀಪ್ಲೇ ಏನೆಂಬುದು ಪೊಲೀಸರಿಗೆ ತಿಳಿದು ಬಂದಿದೆ.
ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ. ಅಲ್ಲದೇ ವಾಹನದಲ್ಲಿ ಮೃತದೇಹ ಸಾಗಿಸಿದವರ ಫಿಂಗರ್ ಪ್ರಿಂಟ್ ತಾಳೆಯಾಗಿದೆ. ಕೊಲೆಯ ಮೂರು ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆಯಲಾಗಿದೆ. ಜೂನ್ 8, 9 ಮತ್ತು 10 ರಂದು ದರ್ಶನ್ ಅವರ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಅಳಿಸಿದ ಎಲ್ಲಾ ದೃಶ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಎಲ್ಲ ಸಾಕ್ಷ್ಯಗಳು ಪ್ರಕರಣವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ.