RBI: 1000 ರೂ ನೋಟುಗಳ ಮೇಲೆ ದೊಡ್ಡ ಘೋಷಣೆ, ಜನರ ಎಲ್ಲಾ ಪ್ರಶ್ನೆಗಳಿಗೆ ಕೊನೆಗೂ ಸಿಕ್ಕಿತು ಉತ್ತರ.
1000 ರೂಪಾಯಿ ನೋಟು ಬಿಡುಗಡೆ ಮಾಡುವ ಬಗ್ಗೆ RBI ಗವರ್ನರ್ ಮಹತ್ವದ ಮಾಹಿತಿ.
Reserve Bank Of India About 1000 Rupees Notes: ಇದೀಗ ಆರ್ ಬಿ ಐ (RBI) ಗವರ್ನರ್ 1,000 ನೋಟಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ನೋಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಆರ್ ಬಿ ಐ ಹಲವು ಬಾರಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇನ್ನು ಒಂದು ಸಾವಿರ ರೂಪಾಯಿ ನೋಟುಗಳ ಮೇಲೆ ದೇಶದಲ್ಲಿ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ.
ಮೊದಲ ವರ್ಷ 2016 ರಲ್ಲಿ ನೋಟಿ ಅಮಾನ್ಯಕರಣ ನಡೆಯಿತು. ನಂತರ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಯಿತು. ಈಗ ಮತ್ತೊಮ್ಮೆ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಆರ್ ಬಿ ಐ 2,000 ರೂಪಾಯಿ ನೋಟುಗಳನ್ನು ಠೇವಣಿ ಮಾಡಲು ಸೆಪ್ಟೆಂಬರ್ 30 ರ ವರೆಗೆ ಸಮಯ ನೀಡಿದೆ. ಈ ಮಧ್ಯೆ ಈಗ 1,000 ಮತ್ತು 500 ರೂಪಾಯಿ ನೋಟುಗಳ ಬಗ್ಗೆ ದೊಡ್ಡ ಸುದ್ದಿ ಹೊರ ಬೀಳುತ್ತಿದೆ. ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ 1000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.
2000 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆದ ನಂತರ ಇದೀಗ ಆರ್ ಬಿ ಐ 1000 ರೂಪಾಯಿಯ ಹೊಸ ನೋಟು ಬಿಡುಗಡೆ ಮಾಡಲಿದೆಯೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿತ್ತು. ಇಲ್ಲವಾದಲ್ಲಿ 500 ರೂಪಾಯಿ ನೋಟು ದೇಶದ ಅತಿ ದೊಡ್ಡ ನೋಟು ಆಗಲಿದೆ ಎಂದು ಹೇಳಲಾಗುತ್ತಿತ್ತು.
ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಹೊಸ ಮಾಹಿತಿ
ಆರ್ ಬಿ ಐ ಗವರ್ನರ್ ಈ ಬಾರಿ 1000 ರೂಪಾಯಿ ನೋಟು ಬಿಡುಗಡೆ ಮಾಡುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದು ಹೇಳಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಇತರೆ ಮುಖಬೆಲೆಯ ನೋಟುಗಳು ಸಾಕಷ್ಟಿದೆ. ಹೊಸ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಚನೆ ಇಲ್ಲ.
ಯಾವುದೇ ಹೊಸ ಕರೆನ್ಸಿ ಮಾರುಕಟ್ಟೆಗೆ ಬರುವುದು ಅನಿವಾರ್ಯವಲ್ಲ. ಇದಲ್ಲದೆ ಯಾವುದೇ ಕರೆನ್ಸಿಯನ್ನು ಮಾರುಕಟ್ಟೆಯಿಂದ ತೆಗೆದುಹಾಕುವುದರಿಂದ ಯಾವುದೇ ಹೊಸ ಕರೆನ್ಸಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಬೇಕು ಎಂದು ಅರ್ಥವಲ್ಲ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.