Revolt RV 400: 85 ಕಿಲೋಮೀಟರ್ ಮೈಲೇಜ್ ಅಗ್ಗದ ಬೈಕ್ ಲಾಂಚ್, ಬೈಕ್ ಖರೀದಿಸಲು ಜನಸಂದಣಿ.
85 Km ಮೈಲೇಜ್ ಕೊಡುವ ಈ ಬೈಕ್ ಖರೀದಿಸಲು ಜನರು ಫಿದಾ, ಅಗ್ಗದ ಬೆಲೆಗೆ ಮಾರಾಟ.
Revolt RV 400 Electric Bike: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ (Electric Vehicle) ಮಾದರಿಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆ ಒಂದು ವಿಧದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಎಂದರೆ ತಪ್ಪಾಗಲಾರದು. ಕಾರ್, ಬೈಕ್ ಖರೀದಿಗೆ ಬಜೆಟ್ ಹೊಂದಿಸಿ ಖರೀದಿಸಿದರು ಕೂಡ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕುವುದೇ ದೊಡ್ಡ ಸಮಸ್ಯೆಯಾಗುತ್ತಿದೆ.
ಈ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಹೆಚ್ಚಿನ ಸೆಲ್ ಕಾಣುತ್ತಿದೆ.ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಾಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತವೆ.
ಇದೀಗ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಾಕ ಕಂಪನಿಯದ ರಿವೋಲ್ಟ್ ಮೋಟರ್ಸ್ (Revolt) ತನ್ನ ನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ನೂತನ ರಿವೋಲ್ಟ್ ಎಲೆಕ್ಟ್ರಿಕ್
ಇದೀಗ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿರುವ ರಿವೋಲ್ಟ್ ಕಂಪನಿ ತನ್ನ RV400 ಎಲೆಕ್ಟ್ರಿಕ್ ಬೈಕ್ (Revolt RV 400 Electric Bike) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ನೂತನ ಮಾದರಿಯ ಬೈಕ್ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ.
ಇನ್ನು ಕಂಪನಿಯು ತನ್ನ ಬೈಕ್ ಬುಕಿಂಗ್ ಅನ್ನು ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಗೆ ಸಹಭಾಗಿತ್ವವನ್ನು ನೀಡಿದೆ. ನೀವು ಇ ಬೈಕ್ ಖರೀದಿಗೆ ಮನಸ್ಸು ಮಾಡಿದೆ ಫ್ಲಿಪ್ ಕಾರ್ಟ್ ನಲ್ಲಿ ಕೆಲ ಆಫರ್ ಅನ್ನು ಪಡೆಯುವ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದು.
ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ಬೆಲೆ
ಹೊಸ ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ಅ ನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹೊಸ ಬೈಕ್ ನ ವಿತರಣೆಯು ಅಕ್ಟೋಬರ್ ನಿಂದ ಆರಂಭವಾಗುತ್ತದೆ. ಹಾಗೇ LED ಹೆಡ್ ಲ್ಯಾಂಪ್, ರೈಡ್ ಮೂಡ್ ಗಳು, ಮೊಬೈಲ್ ಅಪ್ಲಿಕೇಶನ್ ಕನೆಕ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ಇ ಬೈಕ್ ಮಾರುಕಟ್ಟೆಯಲ್ಲಿ 1.17 ಲಕ್ಷದಲ್ಲಿ ಲಭ್ಯವಾಗಲಿದೆ.
ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ಮೈಲೇಜ್
ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್ ನಾ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುದಾದರೆ 3.24 kWh ಲಿಥಿಯಂ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಮತ್ತು ಈ ಬೈಕ್ ನಲ್ಲಿ
3kW ಮಿಡ್ ಡ್ರೈವ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಬೈಕ್ ಸಂಪೂರ್ಣವಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆಗಳು ಬೇಕಾಗಬಹುದು. ಇನ್ನು ಫ್ಸ್ಟ್ ಚಾರ್ಜಿಂಗ್ ನ ಮೂಲಕ 2 ಗಂಟೆಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. ಒಂದೇ ಚಾರ್ಜ್ ನಲ್ಲಿ ಈ ಎಲೆಕ್ಟ್ರಿಕ್ ಬೈಕ್ 85 ಕಿಲೋಮೀಟರು ಮೈಲೇಜ್ ಅನ್ನು ನೀಡುತ್ತದೆ.