Revolt: ಫ್ಲಿಪ್ಕಾರ್ಟ್ ನಲ್ಲಿ ಆಫರ್ ಬೆಲೆಗೆ ಖರೀದಿಸಿ 150 Km ಮೈಲೇಜ್ ಕೊಡುವ ರಿವೋಲ್ಟ್ RV400 EV, ಆಫರ್ ಕೆಲವು ದಿನ ಮಾತ್ರ.
ಜನಪ್ರಿಯ ಎಲೆಕ್ಟ್ರಿಕ್ ಬೈಕ್ ಮಾರಾಟ ಕಂಪನಿ ರಿವೋಲ್ಟ್ ನ RV400 ಎಲೆಕ್ಟ್ರಿಕ್ ಬೈಕ್ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಸಿಗುತ್ತಿದೆ.
Revolt RV400 Electric Bike: ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆ ಕಾಣುತ್ತಿರುದರಿಂದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬಾರಿ ಪ್ರಮಾಣದ ಬೇಡಿಕೆ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.
ಇದೀಗ ಎಲೆಕ್ಟ್ರಿಕ್ ಬೈಕ್ (Electric Bike) ಗಳ ಮಾರಾಟದಲ್ಲಿ ಮೇಲುಗೈ ಸಾಧಿಸುತ್ತಿರುವ ರಿವೋಲ್ಟ್ (Revolt )ಕಂಪನಿ ಇ-ಕಾಮರ್ಸ್ ಮಾರುಕಟ್ಟೆ ಮೂಲಕ ತನ್ನ ಬೈಕ್ ಗಳ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ರಿವೋಲ್ಟ್ ಕಂಪನಿ ಯಾವ ಇ-ಕಾಮರ್ಸ್ ವೆಬ್ ಸೈಟ್ ಮೂಲಕ ಯಾವ ಬೈಕ್ ಅನ್ನು ಮಾರಾಟ ಮಾಡುತ್ತಿದೆ ಎನ್ನುವ ಬಗ್ಗೆ ನಾವೀಗ ತಿಳಿಯೋಣ.
RV400 ಎಲೆಕ್ಟ್ರಿಕ್ ಬೈಕ್ ಬುಕಿಂಗ್
ರಿವೋಲ್ಟ್ ಕಂಪನಿ ಇ-ಕಾಮರ್ಸ್ ವೆಬ್ ಸೈಟ್ ಬಳಸಿಕೊಂಡು ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಜನಪ್ರಿಯ ಎಲೆಕ್ಟ್ರಿಕ್ ಬೈಕ್ ಮಾರಾಟ ಕಂಪನಿ ರಿವೋಲ್ಟ್ ತನ್ನ RV400 ಎಲೆಕ್ಟ್ರಿಕ್ ಬೈಕ್ ಅನ್ನು ಬುಕ್ ಮಾಡುವ ಸಲುವಾಗಿ ಪ್ರಸಿದ್ಧ ಇ-ಕಾಮರ್ಸ್ ಮಾರುಕಟ್ಟೆ ಸ್ಥಳವಾದ ಫ್ಲಿಪ್ ಕಾರ್ಟ್ ನ ಸಹಯೋಗವನ್ನು ಮಾಡಿದೆ.
ಆನ್ಲೈನ್ ಮಾರುಕಟ್ಟೆ ಅನುಭವದ ಮೂಲಕ ರಿವೋಲ್ಟ್ ಗ್ರಾಹಕರಿಗೆ ತನ್ನ ಎಲೆಕ್ಟ್ರಿಕ್ ಬೈಕ್ ಗಾಗಿ ತಡೆರಹಿತ ಖರೀದಿಯ ಅನುಭವವನ್ನು ನೀಡಲು ಸಾಧ್ಯವಾಗುತ್ತದೆ.ಗ್ರಾಹಕರು ಇ-ಕಾಮರ್ಸ್ ವೆಬ್ ಸೈಟ್ ಗಳ ಮೂಲಕ ಬೈಕ್ ಖರೀದಿ ಮಾಡಿದರೆ ವಿಶೇಷ ಕೊಡುಗೆಗಳ ಜೊತೆ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ರಿವೋಲ್ಟ್ RV400 ಬೈಕ್ ಫ್ಲಿಪ್ ಕಾರ್ಟ್ ನಲ್ಲಿ 1,38,950 ರೂ. ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತಿದೆ.
RV400 ಎಲೆಕ್ಟ್ರಿಕ್ ಬೈಕ್ ವಿಶೇಷತೆ
ರಿವೋಲ್ಟ್ RV400 ಬೈಕ್ 85 ಕಿಲೋಮೀಟರ್ ಟಾಪ್ ಸ್ಪೀಡ್ ನಲ್ಲಿ ಚಲಿಸುತ್ತದೆ. ಇಕೋ ಮೂಡ್ ನಲ್ಲಿ 150 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಬೈಕ್ ನ ಸ್ಪೆಕ್ಷನ್ ಸೆಟಪ್ ಬಗ್ಗೆ ನೋಡುದಾದರೆ, ಮುಂದೆ USD ಪೋಕ್ ಹಾಗೆ ಹಿಂದೆ ಮೊನೊಶಾಕ್ ಸೆಟಪ್ ಅನ್ನು ಪಡೆದುಕೊಂಡಿದೆ.
ಹಾಗೆ ಈ ಬೈಕ್ ನಲ್ಲಿ ಸುರಕ್ಷತೆಗಾಗಿ ಮುಂದೆ ಮತ್ತು ಹಿಂದೆ ಡಿಸ್ಕ್ ಬ್ರೇಕ್ ಗಳನ್ನೂ ನೀಡಲಾಗಿದೆ. ಇದರ ಚಾರ್ಜಿಂಗ್ ಬಗ್ಗೆ ಹೇಳುದಾದರೆ, 4 .5 ಗಂಟೆಗಲ್ಲಿ 0 ಇಂದ 100 ಪ್ರತಿಶತದಷ್ಟು ಚಾರ್ಜ್ ಅನ್ನು ಮಾಡುತ್ತದೆ. ಹಾಗೆ ಇದು ಉತ್ತಮ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ.