ಪ್ರತಿನಿತ್ಯ ಊಟಕ್ಕೆ ಅಕ್ಕಿ ಬಳಸುವ ಎಲ್ಲರಿಗೂ ಶಾಕಿಂಗ್ ಸುದ್ದಿ, ಅಕ್ಕಿಯ ಬೆಲೆಯಲ್ಲಿ ಭಾರಿ ಏರಿಕೆ, ಬೆಲೆ ಎಷ್ಟು ನೋಡಿ.
ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಆಗುತ್ತಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಬಹುದು. ಹೌದು ಜನರು ಬಳಕೆ ಮಾಡುವ ಪ್ರತಿಯೊಂದು ವಸ್ತುವಿನ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಾಣುತ್ತಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಯ ಏರಿಕೆಯ ಕಾರಣ ಬೇಸತ್ತ ಜನರಿಗೆ ಈಗ ಇನ್ನೊಂದು ದೊಡ್ಡ ಶಾಕಿಂಗ್ ಸುದ್ದಿ ಎದುರಾಗಿದ್ದು ಇದು ದೇಶದ ಪ್ರತಿಯೊಂದು ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ಹೇಳಬಹುದು. ಹೌದು ಜನರು ಪ್ರತಿನಿತ್ಯ ಊಟಕ್ಕೆ ಬಳಕೆ ಮಾಡುವ ಅಕ್ಕಿಯ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಆಗಿದ್ದು ದೇಶದಲ್ಲಿ ಏರಿಕೆಯಾದ ಅಕ್ಕಿಯ ಬೆಲೆಯನ್ನ ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು.
ಹಾಗಾದರೆ ದೇಶದಲ್ಲಿ ಅಕ್ಕಿಯ ಬೆಲೆ ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ, ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಅಕ್ಕಿ ದರ ಶೇಕಡ 10 ರಷ್ಟು ಹೆಚ್ಚಳವಾಗಿದೆ. ಹೌದು ಜನರು ಪ್ರತಿನಿತ್ಯ ಬಳಕೆ ಮಾಡುವ ಅಕ್ಕಿಯ ಬೆಲೆಯಲ್ಲಿ 4 ರೂಪಾಯಿಯಿಂದ 10 ರೂಪಾಯಿಯ ತನಕ ಏರಿಕೆ ಆಗಿದೆ.
ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ತರಕಾರಿ ಮೊದಲಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಅಕ್ಕಿಯ ಬೆಲೆ ಕೂಡ ಏರಿಕೆ ಆಗಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಸ್ಟೀಮ್ ರೈಸ್ ದರದಲ್ಲಿ ಶೇಕಡ 10 ರಿಂದ 15 ರಷ್ಟು ಏರಿಕೆಯಾಗಿದೆ. ಕೆಲವು ಬಗೆಯ ಅಕ್ಕಿಗಳು ಕೆಜಿಗೆ 4 ರೂಪಾಯಿಯಿಂದ 10 ರೂಪಾಯಿಯವರೆಗೆ ಹೆಚ್ಚಳವಾಗಿದೆ. ಬಾಸ್ಮತಿ ಸ್ಟೀಮ್ ರೈಸ್ ಸಗಟು ದರ ಕೆಜಿಗೆ 10 ರೂಪಾಯಿ ಏರಿಕೆಯಾದರೆ ಚಿಲ್ಲರೆ ಮಾರಾಟ ದರ 15 ರೂಪಾಯಿ ತನಕ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.
ಇನ್ನು ದೇಶದ ಅಕ್ಕಿಯ ರಫ್ತು ಬೇಡಿಕೆ ಹೆಚ್ಚಾಗಿದ್ದು ದೇಶದಿಂದ ಅದೆಷ್ಟೋ ಪ್ರಮಾಣದ ಅಕ್ಕಿ ಬೇರೆಬೇರೆ ದೇಶಕ್ಕೆ ರಫ್ತಾಗುತ್ತಿದೆ. ಇನ್ನು ಇದರ ಜೊತೆಗೆ ದೇಶದಲ್ಲಿ ಕಾಣಿಸಿಕೊಂಡ ಅಕಾಲಿಕ ಮಳೆಯ ಕಾರಣ ಅದೆಷ್ಟೋ ಬೆಳೆಗಳು ಹಾನಿಯಾಗಿದ್ದು ಇದು ರೈತರ ಆರ್ಥಿಕ ಪರಿಸ್ಥಿತಿಯ ಮೇಲೆ ನೇರ ಪರಿಣಾಮ ಬಿರಿದ ಕಾರಣ ದೇಶದಲ್ಲಿ ಅಕ್ಕಿಯ ಬೆಲೆ ಭಾರಿ ಪ್ರಮಾಣದ ಏರಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಅಕಾಲಿಕ ಮಳೆಯ ಕಾರಣ ಅನೇಕ ಬೆಳೆಗಳು ಹಾನಿಯಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ದಿನಬಳಕೆಯ ವಸ್ತುವಿನ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಅಕ್ಕಿಯ ಬೆಲೆಯಲ್ಲಿ ಆಗಿರುವ ಈ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.