Hostel Hudugaru: ಕೇಸ್ ಹಾಕಿ ಸೋತ ರಮ್ಯಾಗೆ ಮುಲಾಜಿಲ್ಲದೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ, ನ್ಯಾಯ ಅಂದರೆ ನ್ಯಾಯ.

ಲೀಗಲ್ ನೋಟಿಸ್ ಕಳುಹಿಸಿದ ನಟಿ ರಮ್ಯಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ ಹಾಗು ರಾಜ್ ಬಿ ಶೆಟ್ಟಿ.

Rishab Shetty Tweet: ಸ್ಯಾಂಡಲ್ ವುಡ್ ಸ್ಟಾರ್ ನಟಿ ರಮ್ಯಾ (Ramya) ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. ಕನ್ನಡದ ಖ್ಯಾತ ನಟರಾದ ಡಾಲಿ ಧನಂಜಯ್ ಅವರ ಜೊತೆ ಉತ್ತರಾಖಂಡ ಚಿತ್ರದಲ್ಲಿ ರಮ್ಯಾ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನು ಇದೀಗ ನಟಿ ರಮ್ಯಾ ಹಾಸ್ಟೆಲ್ ಹುಡುಗರು ಸಿನಿಮಾದಿಂದ ಟ್ರೊಲ್ ಗೆ ಒಳಗಾಗಿದ್ದಾರೆ.

Actress ramya latest news
Image Credit: Ottplay

ಹಾಸ್ಟೆಲ್ ಹುಡುಗರು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ನಟಿ ರಮ್ಯಾ
ಇತ್ತೀಚೆಗೆ ಬಿಡುಗಡೆಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್ ನಲ್ಲಿ ನಟಿ ರಮ್ಯಾ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ಟೀಚರ್ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನೋಡುಗರ ಗಮನ ಸೆಳೆದಿದ್ದರು. ನಟಿ ರಮ್ಯಾ ಟ್ರೈಲರ್ ನಲ್ಲಿ ಇದ್ದ ಕಾರಣ ಚಿತ್ರದ ಟ್ರೈಲರ್ ಬಾರಿ ವೈರಲ್ ಆಗಿತ್ತು.ಇನ್ನು ಚಿತ್ರದ ಟ್ರೈಲರ್ ನೋಡಿ ಅಭಿಮಾನಿಗಳು ಚಿತ್ರ ನೋಡಲು ಕುತೂಹಲರಾಗಿದ್ದರು.

ಆದರೆ ಕೆಲವು ದಿನಗಳ ಹಿಂದೆ ಟ್ರೈಲರ್ ಬಿಡುಗೆಡೆಯಾಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡಕ್ಕೆ ನಟಿ ರಮ್ಯಾ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ ನಟಿ ರಮ್ಯಾ ಕಾಣಿಸಿಕೊಂಡಿದ್ದರು. ಆದರೆ ಈ ದ್ರಶ್ಯವನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ರಮ್ಯಾ ಅವರು ಚಿತ್ರತಂಡಕ್ಕೆ ನೋಟಿಸ್ ನೀಡಿದ್ದರು. ಇದೀಗ ಲೀಗಲ್ ನೋಟಿಸ್ ಕಳುಹಿಸಿದ ನಟಿ ರಮ್ಯಾಗೆ ಪರೋಕ್ಷವಾಗಿ ರಿಷಬ್ ಶೆಟ್ಟಿ ಹಾಗು ರಾಜ್ ಬಿ ಶೆಟ್ಟಿ ಟಾಂಗ್ ಕೊಟ್ಟಿದ್ದಾರೆ.

Actress ramya latest news
Image Credit: Thesouthfirst

ನಟಿ ರಮ್ಯಾಗೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ ಹಾಗು ರಾಜ್ ಬಿ ಶೆಟ್ಟಿ
ನಟಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ಕಮರ್ಷಿಯಲ್ ಕೋರ್ಟ್ ವಜಾ ಮಾಡಿದೆ. ಹೀಗಾಗಿ ಈ ಸಿನಿಮಾ ಇಂದು ರಿಲೀಸ್ ಆಗಿದೆ. ತೀರ್ಪು ಬರುತ್ತಿದ್ದಂತೆ ರಿಷಬ್ ಶೆಟ್ಟಿ ಹಾಗು ರಾಜ್ ಬಿ ಶೆಟ್ಟಿ ಸಂತೋಷ ಹೊರ ಹಾಕಿದ್ದಾರೆ. ನ್ಯಾಯ ಅಂದರೆ ನ್ಯಾಯ ಜೈ ಆಂಜನೇಯ ಎಂದು ನಟ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರು ಬನ್ನಿ ಬನ್ನಿ ಎಲ್ಲೆಲ್ಲಿ ಬೆಂಕಿ ಬೀಳುತ್ತೆ ನೋಡೋಣ ಎಂದಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

Join Nadunudi News WhatsApp Group

Join Nadunudi News WhatsApp Group