Kantara 2 Latest News: ಜನರು ನೋಡಿದ್ದು ಕಾಂತಾರ ಪಾರ್ಟ್ 2, ದೊಡ್ಡ ಟ್ವಿಸ್ಟ್ ಕೊಟ್ಟ ರಿಷಬ್.

Rishabh Shetty About Kantara 2: ರಿಷಬ್ ಶೆಟ್ಟಿ (Rishabh Shetty) ನಟಿಸಿ ನಿರ್ದೇಶಿಸಿರುವ ಕಾಂತಾರ (Kantara) ಚಿತ್ರ ಇದೀಗ ಎಲ್ಲೆಡೆ ಪ್ರಸಿದ್ದಿ ಪಡೆದಿದೆ. ಅದೆಷ್ಟೋ ಸಿನಿಮಾಗಳ ದಾಖಲೆಯನ್ನು ಕಾಂತಾರ ಚಿತ್ರ ಬ್ರೇಕ್ ಮಾಡಿದೆ.

ಕಾಂತಾರ ಚಿತ್ರ ಕನ್ನಡದ ಜೊತೆಗೆ ಪರ ಭಾಷೆಯಲ್ಲೂ ಕೂಡ ಸಾಕಷ್ಟು ಹೆಸರು ಗಳಿಸಿದೆ. ಕನ್ನಡದ ಹೆಮ್ಮೆಯ ಚಿತ್ರ ಕಾಂತಾರ ಹೊಸ ಹೊಸ ದಾಖಲೆಯನ್ನು ಬರೆದಿದೆ.

Rishabh Shetty About Kantara 2
Image Credit: instagram

ಇದೀಗ ಸಿನಿಪ್ರಿಯರ ಆಸೆಯಂತೆ ಕಾಂತಾರ 2 (Kantara 2) ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ರಿಷಬ್ ಶೆಟ್ಟಿ ಅವರ ಮಾತು ಕೇಳಿದವರು ಅಚ್ಚರಿ ಪಟ್ಟಿದ್ದಾರೆ. ಕಾಂತಾರ ಚಿತ್ರದ 100 ದಿನದ ಸಂಭ್ರಮದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕಾಂತಾರ 2 ಬಗ್ಗೆ ಮಾಹಿತಿ ನೀಡಿದ್ದಾರೆ.

Actor Rishabh Shetty told how the second part of Kantara will be
Image Credit: instagram

ಕಾಂತಾರ 2 ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ
ಕನ್ನಡದ ಕಾಂತಾರ ಚಿತ್ರ ಅದೆಷ್ಟೋ ಕನ್ನಡಿಗರ ಮನ ಗೆದ್ದಿದೆ. ಕಾಂತರಾದ ಕ್ಲೈಮ್ಯಾಕ್ಸ್ ನೋಡಿದ ವೀಕ್ಷಕರಲ್ಲಿ ಕಾಂತಾರ 2 ಬಗ್ಗೆ ನಿರೀಕ್ಷೆ ಹೆಚ್ಚಿದೆ.

Join Nadunudi News WhatsApp Group

ಕಾಂತಾರ 2 ಬಗ್ಗೆ ರಿಷಬ್ ಶೆಟ್ಟಿ ಅವರ ಬಳಿ ಅದೆಷ್ಟೋ ಬಾರಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಬಗ್ಗೆ ಮಾಹಿತಿ ನೀಡಿದ್ದಾರೆ.

Actor Rishabh Shetty gave another information about the movie Kantara
Image credit: instagram

ನೀವು ನೋಡಿದ್ದು ಕಾಂತಾರ 2
ಕಾಂತಾರ ಚಿತ್ರದ 100 ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕಾಂತಾರ ಚಿತ್ರದ 100 ದಿನದ ಸಂಭ್ರಮದ ಕಾರ್ಯಕ್ರಮ ಬಗ್ಗೆ ಮಾತನಾಡಿದ್ದಾರೆ.

“ಕಾಂತಾರ 2 ಯಾವಾಗ ಬರುತ್ತದೆ ಎಂದು ಎಲ್ಲರು ಕೇಳುತ್ತಿದ್ದಾರೆ. ಸಿನಿಮಾ ನೋಡಲು ಕಾಯುತ್ತಿದ್ದಾರೆ. ಆದರೆ ನೀವು ನೋಡಿದ್ದು ಕಾಂತಾರ 2 ಮುಂದೆ ಬರುವುದು ಕಾಂತಾರ ಪಾರ್ಟ್ 1 . ಶೀಘ್ರದಲ್ಲೇ ಕಾಂತಾರ ಪಾರ್ಟ್ 1 ಕೆಲಸ ಶುರು ಮಾಡುತ್ತೇವೆ” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Join Nadunudi News WhatsApp Group