Rishabh Shetty About Politics: ಮೂರೂ ಪಕ್ಷಗಳಿಂದ ಆಫರ್ ಬಂದಿದೆ, ರಾಜಕೀಯ ಅಖಾಡದಲ್ಲಿ ನಟ ರಿಷಬ್ ಶೆಟ್ಟಿ.

Rishabh Shetty About Politics Entry: ವಿಧಾನಸಭಾ ಚುನಾವಣಾ ಹತ್ತಿರವಾಗುತ್ತಿದ್ದಂತೆ ಇದೀಗ ರಾಜಕೀಯ ಸಂಬಂದಿತ ಕೆಲವು ವಿಷಯಗಳ ಚರ್ಚೆ ನಡೆಯುತ್ತಲೇ ಇದೆ.

ಇನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟರ ರಾಜಕೀಯ ಪ್ರವೇಶದ ಕುರಿತು ಸಾಕಷ್ಟು ವದಂತಿಗಳು ಹರಡಿದ್ದವು.

ಕಾಂತಾರ (Kantara) ನಟ ರಿಷಬ್ ಶೆಟ್ಟಿ (Rishabh Shetty) ಅವರ ರಾಜಕೀಯ ಪ್ರವೇಶದ ಕುರಿತು ಸಾಕಷ್ಟು ವದಂತಿಗಳು ಹಬ್ಬಿವೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟ ರಿಷಬ್ ಶೆಟ್ಟಿ ತಮ್ಮ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಯಿಸಿದ್ದಾರೆ.

Actor Rishabh Shetty talked about entering politics
Image Credit: instagram

ಕನ್ನಡದಲ್ಲಿ ಕಾಂತಾರ ಚಿತ್ರ ಬಿಡುಗಡೆಯ ಬಳಿಕ ರಿಷಬ್ ಶೆಟ್ಟಿ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಹಾಗಾಗಿ ರಿಷಬ್ ಶೆಟ್ಟಿ ಚುನಾವಣೆಗೆ ಸ್ಪರ್ದಿಸಲಿದ್ದಾರೆ ಎನ್ನುವ ವರದಿಗಳು ಕೂಡ ಕೇಳಿ ಬಂದಿದ್ದವು.

ರಿಷಬ್ ಶೆಟ್ಟಿ ಅವರಿಗೆ ರಾಜಕೀಯ ಪಕ್ಷದಿಂದ ಆಫರ್ ಬಂದಿದ್ದು, ರಿಷಬ್ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ನಟ ರಿಷಬ್ ಶೆಟ್ಟಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Join Nadunudi News WhatsApp Group

Actor Rishabh Shetty talked about receiving offers from all three parties
Image Credit: instagram

ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಸಿದ ರಿಷಬ್ ಶೆಟ್ಟಿ
ಒಂದು ಮಾಧ್ಯಮದವರ ಪ್ರಕಾರ ನನಗೆ ಮೂರು ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಬದಲಾವಣೆ ತರಬೇಕೆಂದರೆ ರಾಜಕೀಯ ಸೇರಬೇಕೆಂದಿಲ್ಲ. ಒಂದು ಸಮಾಜ ಬದಲಾಗಬೇಕಾದರೆ ನಮ್ಮೆಲ್ಲರ ಕೊಡುಗೆ ಬೇಕು. ಸದ್ಯ ಸಿನಿಮಾದಲ್ಲಿ ಬ್ಯುಸಿ ಆಗಿದ್ದೇನೆ. ಸಮಾಜ ಸುಧಾರಣೆಗೆ ರಾಜಕಾರಣವೇ ಆಗಬೇಕೆಂದಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Actor Rishabh Shetty said that I am currently working on Kantara, I will vote
Image credit: instagram

ವಿಧಾನಸಭಾ ಚುನಾವಣೆಯಲ್ಲಿ  ಭಾಗಿ ಆಗುತ್ತೀರಾ
ನಟ ರಿಷಬ್ ಶೆಟ್ಟಿ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಭಾಗಿ ಆಗುತ್ತೀರಾ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.

“ಕಾಂತಾರ ಸಿನಿಮಾದ ಕೆಲಸದಲ್ಲಿ ಇರುವೆ. ಮತದಾನ ನಮ್ಮೆಲ್ಲರ ಹಕ್ಕು. ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವೆ” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಈ ಮೂಲಕ ರಿಷಬ್ ಶೆಟ್ಟಿ ರಾಜಕೀಯ ಪ್ರವೇಶದ ಊಹಾಪೋಹಗಳಿಗೆ ಬ್ರೆಕ್ ಬಿದ್ದಿದೆ.

Join Nadunudi News WhatsApp Group