Rishab Shetty: ದೇವರಕೊಂಡ ಜೊತೆ ನಟಿಸಲಿದ್ದಾರೆ ರಿಷಬ್ ಶೆಟ್ಟಿ, ಸುದ್ದಿ ವೈರಲ್ ಆಗಿದೆ.
Rishab Shetty And Vijay Devarakonda New Movie: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಿಷಬ್ ಶೆಟ್ಟಿ (Rishab Shetty) ಅವರು ಇದೀಗ ಸುದ್ದಿಯಲ್ಲಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಅಲ್ಲದೆ ಡಿವೈನ್ ಸ್ಟಾರ್ ಎಂಬ ಖ್ಯಾತಿ ಕೂಡ ಪಡೆದಿದ್ದಾರೆ.
ಇನ್ನು ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಸಹ ಸಾಕಷ್ಟು ಸಿನಿಮಾಗಳನ್ನು ಮಾಡಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಟಾಲಿವುಡ್ ನಲ್ಲಿ ನಟ ವಿಜಯ್ ದೇವರಕೊಂಡ (Vijay Devarakonda)ತಮ್ಮ ನಟನೆಯ ಮೂಲಕ ಹೊಸ ಹೊಸ ಛಾಪು ಮೂಡಿಸಿದ್ದಾರೆ. ಇದೀಗ ರಿಷಬ್ ಶೆಟ್ಟಿ ಮತ್ತು ನಟ ವಿಜಯ್ ದೇವರಕೊಂಡ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಹರಡಿದೆ.
ಜೊತೆಯಾಗಿ ನಟಿಸಲಿರುವ ರಿಷಬ್ ಶೆಟ್ಟಿ ಮತ್ತು ವಿಜಯ್ ದೇವರಕೊಂಡ
ಭಾರತೀಯ ಚಿತ್ರರಂಗದಲ್ಲಿ ಸೌತ್, ಬಾಲಿವುಡ್ ಎನ್ನುವ ಭೇದಭಾವ ಇಲ್ಲ. ಈಗ ರಿಷಬ್ ಶೆಟ್ಟಿ ಜೊತೆ ತೆಲುಗು ನಟ ವಿಜಯ್ ದೇವರಕೊಂಡ ಕೈ ಜೋಡಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಇಬ್ಬರು ಸೆನ್ಸೇಷನ್ ಸ್ಟಾರ್‌ಗಳೇ. ಇಬ್ಬರು ಒಟ್ಟಿಗೆ ಸೇರಿದರೆ ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವುದು ಗ್ಯಾರೆಂಟಿ. ಸದ್ಯ ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮುಂದೆ ಒಟ್ಟಿಗೆ ಕೆಲಸ ಮಾಡುತ್ತಾರೆ ಎನ್ನಲಾಗುತ್ತಿದೆ.
ರಿಷಬ್ ಶೆಟ್ಟಿ ಮತ್ತು ವಿಜಯ್ ದೇವರಕೊಂಡ
ಸದ್ಯ ನಟ ವಿಜಯ್ ದೇವರಕೊಂಡ ಸಮಂತಾ ಜೊತೆಗಿನ ಖುಷಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ನಂತರ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ಕೈ ಜೋಡಿಸಲಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ.
ಈ ವಿಚಾರ ತಿಳಿದ ರಿಷಬ್ ಮತ್ತು ವಿಜಯ್ ದೇವರಕೊಂಡ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಆದಷ್ಟು ಬೇಗ ಇಬ್ಬರು ಜೊತೆಸೇರಿ ಸಿನಿಮಾ ಮಾಡಿ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ.