Darshan And Rishab Shetty: ರಿಷಬ್ ಮಗಳ ಹುಟ್ಟು ಹಬ್ಬದಲ್ಲಿ ಡಿ ಬಾಸ್, ರಾಧ್ಯ ಹುಟ್ಟುಹಬ್ಬಕ್ಕೆ ಶುಭ ಕೋರಿದ ದರ್ಶನ್.
Challenging Star Darshan In Rishab Shetty Daughter Birthday: ಕಾಂತಾರ (Kantara) ಚಿತ್ರ ರಿಷಬ್ ಶೆಟ್ಟಿ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ಮಹತ್ತರ ತಿರುವನ್ನು ತಂದುಕೊಟ್ಟಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಂಡಿದೆ.
ಇನ್ನು ರಿಷಬ್ ಶೆಟ್ಟಿ ಅವರು ಇದೀಗ ಕಾಂತಾರ 2 ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರವನ್ನು ರಿಷಬ್ ಶೆಟ್ಟಿ ಅವರು ಆಚರಿಸಿದ್ದರು.
ರಿಷಬ್ ಶೆಟ್ಟಿ ತಮ್ಮ ಮಗಳ ಹುಟ್ಟುಹಬ್ಬದ ಸಲುವಾಗಿ ಇನ್ಸ್ಟಾಗ್ರಾಮ್ (Rishabh Shetty) ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುದರ ಮೂಲಕ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ರಿಷಬ್ ಶೆಟ್ಟಿ ಅವರ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಭಾಗಿಯಾಗಿದ್ದಾರೆ. ಇದೀಗ ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.
View this post on Instagram
ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ ದರ್ಶನ್
ನಟ ದರ್ಶನ್ ಅವರು ಸಾಮಾನ್ಯವಾಗಿ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗುವುದಿಲ್ಲ. ಆದರೆ ಇದೀಗ ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಿರುವುದು ಅಚ್ಚರಿ ಮೂಡಿಸುತ್ತಿದೆ. ಬ್ಲಾಕ್ ಕಲರ್ ಶರ್ಟ್ ಧರಿಸಿ ದರ್ಶನ್ ಹುಟ್ಟುಹಬ್ಬಕ್ಕೆ ಹಾಜರಾಗಿದ್ದಾರೆ.
ರಿಷಬ್ ಹಾಗೂ ಅವರ ಪತ್ನಿ ಪ್ರಗತಿ ಅವರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಇದೀಗ ಇವರ ಫೋಟೋಗಳು ಬಾರಿ ವೈರಲ್ ಆಗಿದೆ.
ಮಗಳ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಡಿಯೋ ಹಂಚಿಕೊಂಡ ರಿಷಬ್
ಕಾಂತಾರ ಸ್ಟಾರ್ ರಿಷಬ್ ಅವರ ಮಗಳು ರಾಧ್ಯ ಗೆ ಒಂದು ವರ್ಷದ ಹುಟ್ಟು ಹಬ್ಬದ ಸಂಭ್ರಮ. ತಮ್ಮ ಮಗಳ ಹುಟ್ಟುಹಬ್ಬದ ಸಲುವಾಗಿ ಮಗಳ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಬಿಳಿ ಹಾಗೂ ಹಸಿರು ಬಣ್ಣದ ಡ್ರೆಸ್ ನಲ್ಲಿ ರಾಧ್ಯಳ ಫೋಟೋಶೂಟ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಅವರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ರಿಷಬ್ ಅಭಿಮಾನಿಗಳು ರಾದ್ಯಾಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.