Rishab At United Nations: ವಿಶ್ವಸಂಸ್ಥೆ ಕಛೇರಿಯಲ್ಲಿ ಕನ್ನಡದಲ್ಲಿ ಭಾಷಣ ಮಾಡಲಿರುವ ನಟ ರಿಷಬ್ ಶೆಟ್ಟಿ.
Actor Rishab Shetty Speech Kannada In Wolrd Institute: ಕಳೆದ ವರ್ಷ ಬಿಡುಗಡೆಯಾದ ಕಾಂತಾರ (Kantara) ಸಿನಿಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿತ್ತು. ಪ್ಯಾನ್ ಇಂಡಿಯಾ ಲೇವಲ್ ನಲ್ಲಿ ತೆರೆಗೆ ಅಪ್ಪಳಿಸಿ ಸಂಚಲನ ಮೂಡಿಸಿತ್ತು ಕಾಂತಾರ ಸಿನಿಮಾ.
ಬೇರೆ ಭಾಷೆಯವರು ಸಹ ಈ ಸಿನಿಮಾವನ್ನು ನೋಡಿ ಫಿದಾ ಆಗಿದ್ದರು. ಇದೀಗ ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರಕ್ಕೆ ಮತ್ತೊಂದು ಗೌರವ ಸಿಗುತ್ತಿದೆ.
ವಿಶ್ವಸಂಸ್ಥೆ ಕಛೇರಿಯಲ್ಲಿ ಕನ್ನಡದಲ್ಲಿ ಭಾಷಣ ಮಾಡಲಿರುವ ನಟ ರಿಷಬ್ ಶೆಟ್ಟಿ
ಕಾಂತಾರ ಸಿನಿಮಾ ಸಮೇತ ರಿಷಬ್ ಶೆಟ್ಟಿ (Rishab Shetty) ವಿಶ್ವಸಂಸ್ಥೆ ಕಛೇರಿ ತಲುಪಿದ್ದಾರೆ. ಕಾಡಂಚಿನ ಜನರ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಯಲ್ಲಿ ರಿಷಬ್ ಮಾತನಾಡಿದ್ದಾರೆ. ಕೆಲವು ದಿನಗಳಿಂದ ಜಾಗತಿಕ ಸಮಸ್ಯೆಗಳ ಕುಯಿತು ವಿಶ್ವಸಂಸ್ಥೆ ತನ್ನ ವಾರ್ಷಿಕ ಸಭೆಯಲ್ಲಿ ಚರ್ಚಿಸುತ್ತಿದೆ.
ವಿವಿಧ ದೇಶಗಳ ನಾಯಕರು ಈ ಸಭೆಯಲ್ಲಿ ಭಾಗಿ ಆಗಿದ್ದಾರೆ. ಜಾಗತಿಕ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಡುತ್ತಿದ್ದಾರೆ. ಅದೇ ರೀತಿ ಕರ್ನಾಟಕದಿಂದ ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಲಿದ್ದಾರೆ ನಟ ರಿಷಬ್ ಶೆಟ್ಟಿ
ಇನ್ನು ಪುನೀತ್ ರಾಜಕುಮಾರ್ ಅವರು ಹುಟ್ಟಿದ ದಿನವೇ ವಿಶ್ವಸಂಸ್ಥೆಯು ಕಛೇರಿಯಲ್ಲಿ ಕಾಂತಾರ ಸಿನಿಮಾ ಪ್ರದರ್ಶನ ಕೂಡ ಆಗಲಿದೆಯಂತೆ. ಕರ್ನಾಟಕದ ಖ್ಯಾತ ನಟ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕನ್ನಡದಲ್ಲಿ ಮಾತನಾಡುತ್ತಾರೆ.
ಈ ವಿಚಾರ ಈಗ ಸುದ್ದಿಯಾಗುತ್ತಿದೆ. ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ ಅಡವಿ ಅಂಚಿನ ಜನರ ಜೊತೆ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದೆ ಇಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ.
ಸಮಸ್ಯೆಗೆ ಸ್ಪಂದಿಸಿದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಕೂಡ ಟ್ವೀಟ್ ಮಾಡಿದ್ದಾರೆ. ಇದೀಗ ರಿಷಬ್ ಶೆಟ್ಟಿ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.