World Cup Medal: ವಿಶ್ವಕಪ್ ಗೆದ್ದ ಭಾರತದ ಆಟಗಾರರಿಗೆ ಸಿಕ್ಕ ಮೆಡಲ್ ನಲ್ಲಿ ಏನೆಂದು ಬರೆಯಲಾಗಿದೆ ಗೊತ್ತಾ…?

ವಿಶ್ವಕಪ್ ಗೆದ್ದ ಆಟಗಾರರ ಚಿನ್ನದ ಪದಕದ ಮೇಲೆ ಏನೆಂದು ಬರೆದಿದೆ ಗೊತ್ತಾ..?

Rishabh Pant Shared World Cup Gold Medal Photos: ಜೂನ್ 29 ರಂದು ರೋಹಿತ್ ಶರ್ಮ ನೇತ್ರತ್ವದ ಟೀಮ್ ಇಂಡಿಯಾ T20 World Cup ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಕಂಡಿದೆ. ಸದ್ಯ ಟೀಮ್ ಇಂಡಿಯಾದ ಗೆಲುವಲ್ಲಿ ಭಾರತೀಯರು ತೇಲುತ್ತಿದ್ದಾರೆ. ಹೌದು 14 ವರ್ಷಗಳ ಬಳಿಕ ಭಾರತ ತಂಡ ಮತ್ತೊಮ್ಮೆ ICC T20 ವಿಶ್ವಕಪ್ ಗೆದ್ದುಕೊಂದಿರುವುದು ಭಾರತೀಯರಿಗೆ ಎಲ್ಲಿಲದ ಖುಷಿ ನೀಡಿದೆ ಎನ್ನಬಹುದು.

ಇಂಡಿಯಾದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಹಲವು ವರ್ಷದಿಂದ ಕಾಯುತ್ತಿದ್ದರು. ಸದ್ಯ ಈ ವರ್ಷ ಭಾರತೀಯ ಕನಸು ನೆರವೇರಿದೆ. ಇನ್ನು ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತ ತಂಡಕ್ಕೆ ICC ಭರ್ಜರಿ ಬಹುಮಾನವನ್ನೇ ನೀಡಿದೆ. ಇದೀಗ ವಿಶ್ವಕಪ್ ಗೆದ್ದ ಆಟಗಾರರಿಗೆ ನೀಡಿರುವ ಚಿನ್ನದ ಪದಕದ ಮೇಲೆ ಏನೆಂದು ಬರೆದಿದೆ ಗೊತ್ತಾ…? ಇದರ ಬಗ್ಗೆ ವಿಕೆಟ್ ಕೀಪರ್ ರಿಷಬ್ ಪಂತ್ ವಿಶೇಷ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇದರ ಬಗ್ಗೆ ನಾವೀಗ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳೋಣ.

Rishabh Pant Shared World Cup Gold Medal Photos
Image Credit: Sportskeeda

ವಿಶ್ವಕಪ್ ಟ್ರೋಫಿ ಯೊಂದಿಗೆ ತಾಯಿನಾಡಿಗೆ ಮರಳಿದ ಆಟಗಾರರು
ಸದ್ಯ 2024 ರ ವಿಶ್ವಕಪ್ ಟ್ರೋಫಿ ಗೆದ್ದು ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ 2024 ವಿಶ್ವಕಪ್ ಗೆ ಮುತ್ತಿಟ್ಟಿದೆ. ಭಾರತ ತಂಡ ವಿಶ್ವಕಪ್ ಟ್ರೋಫಿ ಯೊಂದಿಗೆ ತಾಯಿನಾಡಿಗೆ ಮರಳಿ ಗೆಲುವಿನ ಸಂಭ್ರಮಾಚರಣೆಯನ್ನು ಅದ್ಧುರಿಯಾಗಿ ಮಾಡಿದೆ. ಇನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ತಂಡದ ಆಟಗಾರರಿಗೆ ವಿಶೇಷ ಆಥಿತ್ಯ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಟೀಮ್ ಇಂಡಿಯಾ ಗೆದ್ದ ಟ್ರೋಫಿ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.

ವಿಶ್ವಕಪ್ ಗೆದ್ದ ಆಟಗಾರರ ಚಿನ್ನದ ಪದಕದ ಮೇಲೆ ಏನೆಂದು ಬರೆದಿದೆ ಗೊತ್ತಾ..?
ಸದ್ಯ ಟೀಮ್ ಇಂಡಿಯಾ ಆಟಗಾರರಿಗೆ ನೀಡಿದ ಚಿನ್ನದ ಪದಕದ ಫೋಟೋವನ್ನು ವಿಕೆಟ್ ಕೀಪರ್ ರಿಷಬ್ ಪಂತ್ ಹಚ್ಚಿಕೊಂಡಿದ್ದಾರೆ. ಆಟಗಾರರಿಗೆ ವಯಕ್ತಿಕವಾಗಿ ನೀಡಿದ ಮೆಡಲ್ ನಲ್ಲಿ ICC Men’s T20 World Cup West Indies vs USA 2024 Winner ಎಂದು ಬರೆಯಲಾಗಿದೆ. ಇದರ ಜೊತೆಗೆ T20 ವರ್ಲ್ಡ್ ಕಪ್ ಲೋಗೋ ಅನ್ನು ಕೂಡ ಚಿತ್ರಿಸಲಾಗಿದೆ.

World Cup Gold Medal
Image Credit: Inshorts

Join Nadunudi News WhatsApp Group

Join Nadunudi News WhatsApp Group