Rishabh Shetty Politics Entry: ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ, ಮೂರೂ ಪಕ್ಷದಿಂದ ಆಫರ್ ಬಂದಿದೆ.

Rishabh Shetty About Politics Entry: ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯ ಹೆಚ್ಚು ನಡೆಯುತ್ತಿದೆ. ಈ ನಡುವೆ ಕನ್ನಡದ ಸ್ಟಾರ್ ನಟರು ಚುನಾವಣೆಗೆ ಸ್ಪರ್ದಿಸುತ್ತಿದ್ದಾರೆ ಎನ್ನುವ ವದಂತಿ ಹರಡುತ್ತಿವೆ.

ಈ ಹಿಂದೆ ಕನ್ನಡದ ಖ್ಯಾತ ನಟ ರಿಷಬ್ ಶೆಟ್ಟಿ ಅವರು ಚುನಾವಣೆಗೆ ಸ್ಪರ್ದಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದೀಗ ರಿಷಬ್ ಶೆಟ್ಟಿ (Rishabh Shetty) ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Rishabh Shetty clarified about political entry.
Image Credit: instagram

ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ರಿಷಬ್ ಶೆಟ್ಟಿ
ಕನ್ನಡಲ್ಲಿ ಕಾಂತಾರ (Kantara) ಚಿತ್ರ ಬಿಡುಗಡೆಯ ಬಳಿಕ ರಿಷಬ್ ಶೆಟ್ಟಿ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಹಾಗಾಗಿ ರಿಷಬ್ ಶೆಟ್ಟಿ ಚುನಾವಣೆಗೆ ಸ್ಪರ್ದಿಸಲಿದ್ದಾರೆ ಎನ್ನುವ ವರದಿಗಳು ಕೂಡ ಕೇಳಿ ಬಂದಿದ್ದವು.

ರಿಷಬ್ ಶೆಟ್ಟಿ ಅವರಿಗೆ ರಾಜಕೀಯ ಪಕ್ಷದಿಂದ ಆಫರ್ ಬಂದಿದ್ದು, ರಿಷಬ್ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ನಟ ರಿಷಬ್ ಶೆಟ್ಟಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Actor Rishabh Shetty responded to rumors of joining politics
Image Credit: instagram

ರಾಜಕೀಯ ಪ್ರವೇಶದ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ
ರಿಷಬ್ ಶೆಟ್ಟಿ ರಾಜಕೀಯ ಪ್ರವೇಶದ ಬಗ್ಗೆ ಮಾಧ್ಯಮದ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group

“ಒಂದು ಮಾಧ್ಯಮದವರ ಪ್ರಕಾರ ನನಗೆ ಮೂರು ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಬದಲಾವಣೆ ತರಬೇಕೆಂದರೆ ರಾಜಕೀಯ ಸೇರಬೇಕೆಂದಿಲ್ಲ. ಒಂದು ಸಮಾಜ ಬದಲಾಗಬೇಕಾದರೆ ನಮ್ಮೆಲ್ಲರ ಕೊಡುಗೆ ಬೇಕು” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Actor Rishabh Shetty clarified that he will not join politics
Image Credit: instagram

ಇನ್ನು ರಿಷಬ್ ಶೆಟ್ಟಿ ಅವರ ಕಾಂತಾರ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಸಿನಿಪ್ರಿಯರು ಕಾಂತಾರ ಚಿತ್ರದ ಮುಂದಿನ ಭಾಗದ ನಿರೀಕ್ಷೆಯಲ್ಲಿದ್ದಾರೆ.

ಜೂನ್ ತಿಂಗಳಿಂದ ಕಾಂತಾರ ಮುಂದಿನ ಭಾಗದ ಚಿತ್ರೀಕರಣ ಆರಂಭವಾಗುತ್ತದೆ ಎಂದು ಕಾಂತಾರ ಚಿತ್ರ ತಂಡ ಹೇಳಿಕೊಂಡಿದೆ. ಇನ್ನು ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಬರುವಿಕೆಯಲ್ಲಿ ಕನ್ನಡಿಗರು ಕಾಯುತ್ತಿದ್ದಾರೆ.

Join Nadunudi News WhatsApp Group