Rishab Shetty Salary: ವೈರಲ್ ಆಯಿತು ಕಾಂತಾರ ಚಿತ್ರಕ್ಕೆ ನಟ ರಿಷಬ್ ಶೆಟ್ಟಿ ಪಡೆದ ಸಂಭಾವನೆ.

Rishab Shetty Salary: ಕಾಂತಾರ ಕನ್ನಡದ ಹೆಮ್ಮೆಯ ಚಿತ್ರ. ರಿಷಬ್ ಶೆಟ್ಟಿ (Rishab Shetty) ನಟನೆಯ ಕಾಂತಾರ ಸಿನಿಮಾ ತೆರೆ ಕಂಡ ಮೊದಲ ದಿನವೇ ಸಾಕಷ್ಟು ಜನರನ್ನು ಮೋಡಿ ಮಾಡಿತ್ತು. ಕಾಂತಾರ ತುಳು ನಾಡಿನ ದೈವದ ಬಗ್ಗೆ ಇರುವ ಸಿನಿಮಾ. ತುಳುನಾಡಿನ ಜನರ ಸಂಸ್ಕಾರ, ದೈವಶಕ್ತಿಯ ಪ್ರತೀಕ ಕಾಂತಾರ ಸಿನಿಮಾ.

ಈ ಸಿನಿಮಾದಲ್ಲಿ ರಿಷಬ್ ನಾಯಕ ನಟನಾಗಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ರಿಷಬ್ ಕಾಂತಾರ ಸಿನಿಮಾದಿಂದ ಪಡೆದ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಸುದ್ದಿ ಆಗುತ್ತಿದೆ.

Actor Rishabh Shetty's remuneration for the film Kantara has gone viral.
Image Credit: hindustantimes

ಕಾಂತಾರ ಸಿನಿಮಾದಿಂದ ರಿಷಬ್ ಶೆಟ್ಟಿ ಪಡೆದ ಸಂಭಾವನೆ
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಕಾಂತಾರ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡುವುದರ ಜೊತೆಗೆ ಹಲವು ದಾಖಲೆಗಳನ್ನು ಮಾಡಿದೆ. ಜಗತ್ತಿನಾದ್ಯಂತ 400 ಕ್ಕೂ ಹೇಚ್ಚು ಕೋಟಿ ಗಳಿಸಿ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡ್ದ ಚಿತ್ರದ ಪಟ್ಟಿಯಲ್ಲೂ ಸೇರ್ಪಡೆಯಾಗಿದೆ.

Actor Rishabh Shetty got expensive remuneration for the film Kantara
Image Credit: koimoi

ಈ ಚಿತ್ರದ ಬಜೆಟ್ 16 ಕೋಟಿ ರೂ. ಗಳಾಗಿದ್ದು,ಅದರಲ್ಲಿ ರಿಷಬ್ ಶೆಟ್ಟಿ ಸಂಭಾವನೆ ಕಾಲು ಭಾಗದಷ್ಟಿದೆ ಎಂದು ಹೇಳಲಾಗಿದೆ. ಈ ಚಿತ್ರದ ಕಥೆ ಮತ್ತು ಚಿತ್ರಕಥೆ, ನಟನೆ ಮತ್ತು ನಿರ್ದೇಶನಕ್ಕೆ ರಿಷಬ್ ಶೆಟ್ಟಿ 4 ಕೋಟಿ ಸಂಭಾವನೆ ಪಡೆದಿದ್ದಾರಂತೆ. ನಟ ಕಿಶೋರ್ (Actor Kishor) ಅವರಿಗೆ ಒಂದು ಕೋಟಿ ರೂ. ಗಳನ್ನೂ ಸಂಭಾವನೆಯನ್ನಾಗಿ ನೀಡಲಾಗಿದೆಯಂತೆ.

ಇನ್ನು ಅಚ್ಯುತ್ ಕುಮಾರ್ (Achyuth Kumar) ಅವರಿಗೆ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮಿಕ್ಕ ಬಜೆಟ್ ಚಿತ್ರದ ಮೇಕಿಂಗ್, ಸಂಭಾವನೆ ಮತ್ತು ಪ್ರಚಾರಕ್ಕೆ ಖರ್ಚಾಗಿದೆಯಂತೆ. ಸದ್ಯ ಕಾಂತಾರ 2 ಚಿತ್ರಕ್ಕೆ ದೈವದ ಒಪ್ಪೋಗೆ ಸಿಕ್ಕಿದ್ದು ಕಾಂತಾರ 2 ಚಿತ್ರವನ್ನ ನಟ ರಿಷಬ್ ಶೆಟ್ಟಿ ಅವರು ದೊಡ್ಡ ಬಜೆಟ್ ನಲ್ಲಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

Rishabh Shetty received Rs 40 crore for Kantara
Image Credit: gqindia

4 ಕೋಟಿಗಿಂತ ಹೆಚ್ಚು ಸಂಭಾವನೆ ಪಡೆದಿರುವ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರ ಕೆಲಸದಿಂದ ಖುಷಿ ಆಗಿರುವ ನಿರ್ಮಾಪಕರು ಅವರಿಗೆ ಸಂಭಾವನೆ ಜೊತೆಗೆ ಒಂದಿಷ್ಟು ಪರ್ಸೆಂಟ್ ಹಣವನ್ನು ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಪರ್ಸೆಂಟೇಜ್ ಎಷ್ಟು ಮತ್ತು ಅದನ್ನು ಸೇರಿಸಿದರೆ ಕಾಂತಾರ ಚಿತ್ರದಿಂದ ರಿಷಬ್ 4 ಕೋಟಿ ಗಿಂತ ಹೆಚ್ಚು ಗಳಿಸಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group