River Indie: 120 Km ಮೈಲೇಜ್ ಕೊಡುವ ಈ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಗೆ ಜನರು ಫಿದಾ, ಕುಸಿತ ಕಂಡ ಓಲಾ ಬುಕಿಂಗ್.
ಒಂದೇ ಚಾರ್ಜ್ ನಲ್ಲಿ 120km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಈ Electric Scooter.
River Indie Electric Scooter Launch In India: ದೇಶದಲ್ಲಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಕಚ್ಚಾ ತೈಲಗಳ ಬೆಲೆಯ ಏರಿಕೆಯ ನಂತರ Electric ವಾಹನಗಳ ಮೇಲಿನ ಬೇಡಿಕೆ ದುಪ್ಪಟ್ಟಾಗಿದೆ ಎನ್ನಬಹುದು. ಯಾರೇ ವಾಹನವನ್ನು ಖರೀದಿಸಲು ಬಯಸಿದರು ಮೊದಲು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನಬಹುದು.
ಇದೀಗ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಾಕ ಕಂಪೆನಿಯಾದ Indie River ತನ್ನ ನೂತನ ಮಾದರಿಯ Electric Scooter ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಸದ್ಯದಲ್ಲೇ ಈ ಎಲೆಕ್ಟ್ರಿಕ್ ಮಾದರಿ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರ ಎಲೆಕ್ಟ್ರಿಕ್ ಮಾದರಿಗಳಿಗೆ ನೇರ ಸ್ಪರ್ಧೆ ನೀಡಲಿದೆ.
River Indie Electric Scooter Launch
ಇಂಡೀ ರಿವರ್ ಕಂಪನಿಯು ನೂತನ ವಿನ್ಯಾಸದ River Indie Electric Scooter ಲಾಂಚ್ ಗೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಂಪನಿಯು ಗ್ರಾಹಕರಿಗೆ ಟೆಸ್ಟ್ ರೇಡ್ ಮತ್ತು ಬುಕಿಂಗ್ ನೀಡುತ್ತಿದೆ. ಈ ಸ್ಕೂಟರ್ ನಲ್ಲಿ ಮೂರು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದೆ. ಈ ಮೋಡ್ ಗಳು ಬೈಕ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಈ ಬೈಕ್ ನಲ್ಲಿ 33 ಲೀಟರ್ ಸೀಟ್ ಸ್ಟೋರೇಜ್ ಜೊತೆಗೆ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಲೈಟ್ ಗಳನ್ನೂ ನೀಡಲಾಗಿದೆ.
River Indie Electric Scooter ಮಾರುಕಟ್ಟೆಯ ಬೆಲೆ
ಈ ಸ್ಕೂಟರ್ ನಲ್ಲಿ ಸವಾರರ ಅನುಕೂಲಕ್ಕಾಗಿ ಮುಂಭಾಗದಲ್ಲಿ 12 ಲೀಟರ್ ಸ್ಟೋರೇಜ್ ನೀಡಲಾಗಿದೆ. ಸೆಪ್ಟೆಂಬರ್ ನಲ್ಲಿಯೇ ಈ ಸ್ಕೂಟರ್ ನ ವಿತರಣೆ ಆಗಲಿದೆ ಎನ್ನುವ ಬಗ್ಗೆ ಕಂಪನಿ ಹೇಳಿಕೊಂಡಿದೆ. ಇನ್ನು ನೂತನ ಸುಧಾರಿತ ವೈಶಿಷ್ಟ್ಯಗಳಿರುವ ಈ ಇಂಡೀ ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಗೆ 1,25,000 ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ. ವಿಭಿನ್ನ ವೈಶಿಷ್ಟ್ಯಗಳಿರುವ ಈ ಸ್ಕೂಟರ್ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರಣ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.
ಒಂದೇ ಚಾರ್ಜ್ ನಲ್ಲಿ ನೀಡಲಿದೆ 120 ಕಿಲೋಮೀಟರ್ ಮೈಲೇಜ್
ಇಂಡೀ ರಿವರ್ ಎಲೆಕ್ಟ್ರಿಕ್ ಸ್ಕೂಟರ್ 4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 8 .99bhp ಪವರ್ ಮತ್ತು 26Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಮೋಟಾರ್ ಗೆ ವಿದ್ಯುತ್ ಪೂರೈಸಲು ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ 4kWh NMC ಅಲ್ಯೂಮಿನಿಯಂ ಕೇಸ್ಡ್ ಬ್ಯಾಟರಿ ಪ್ಯಾಕ್ ನ್ನು ಹೊಂದಿದೆ. ಇನ್ನು ECO ಮೋಡ್ ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್ ನಲ್ಲಿ 120km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಫಾಸ್ಟ್ ಚಾರ್ಜರ್ ನ ಮೂಲಕ ನೀವು 3 ರಿಂದ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಈ ಸ್ಕೂಟರ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು.