Yash: ಯಶ್ ಗೆ ಬಂತು ದುಬಾರಿ ಬೆಲೆಯ ಚಿನ್ನದ ಬಿಸ್ಕತ್, ಬೆಲೆ ಊಹಿಸಲು ಅಸಾಧ್ಯ
ರಾಕಿ ಬಾಯ್ ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಗೋಲ್ಡನ್ ಬಿಸ್ಕೆಟ್.
Rockey Bai Golden Biscuit: ಕನ್ನಡದ ಖ್ಯಾತ ನಟ ಯಶ್ (Yash) ರಾಕಿ ಬಾಯ್ ಎಂದೇ ಖ್ಯಾತಿ ಪಡೆದಿದ್ದಾರೆ. ನಟ ಯಶ್ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಎನ್ನಬಹುದು.
ಇನ್ನು ಯಶ್ ನಟನೆಯ ಕೆಜಿಎಫ್ 2 (KGF 2)ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆದರು ಯಶ್ ಮುಂದಿನ ಸಿನಿಮಾದ ಬಗ್ಗೆ ಎಲ್ಲೂ ಸಹ ಘೋಷಣೆ ಮಾಡಿಲ್ಲ. ಯಶ್ ಅಭಿಮಾನಿಗಳು ಮುಂದಿನ ಸಿನಿಮಾದ ಘೋಷಣೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಬಿಡುಗಡೆ
ಇದೆ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಟನೊಬ್ಬನ ಗೋಲ್ಡ್ ಕಾಯಿನ್ ಮತ್ತು ಗೋಲ್ಡ್ ಬಿಸ್ಕೆಟ್ ರಿಲೀಸ್ ಆಗಿದೆ. ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾಗೆ ಪ್ರವಾಸ ಬೆಳೆಸಿದ್ದರು. ಅಲ್ಲಿ ಬಂಗಾರದ ಅಂಗಡಿಯ ಉದ್ಘಾಟನೆಯನ್ನು ಮಾಡಿದ್ದರು. ಅದೇ ಅಂಗಡಿಯವರು ರಾಕಿ ಬಾಯ್ ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಮತ್ತು ಬಿಸ್ಕೆಟ್ ಬಿಡುಗಡೆ ಮಾಡಿದ್ದಾರೆ.
ಇನ್ನು ಅಂಗಡಿಯವರು ಯಶ್ ನೀಡಿದ ಚಿನ್ನದ ಬಿಸ್ಕೆಟ್ ಬೆಲೆ ಸುಮಾರು 5 ಲಕ್ಷಕ್ಕೂ ಅಧಿಕ ಎಂದು ಹೇಳಲಾಗುತ್ತಿದೆ. ಸದ್ಯ ಈ ಚಿನ್ನದ ಬಿಸ್ಕೆಟ್ ಬೆಲೆಯ ಬಗ್ಗೆ ನಿಖರವದ ಮಾಹಿತಿ ಇನ್ನು ಕೂಡ ಲಭಿಸಿಲ್ಲ. ಸದ್ಯ ರಾಕಿ ಬಾಯಿ ಹೆಸರಿನ ಬಿಸ್ಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂದಿನ ಸಿನಿಮಾ ಬಗ್ಗೆ ಮಾತನಾಡಿನ ನಟ ಯಶ್
ಮಲೇಷ್ಯಾಗೆ ಹೋಗಿರುವ ಸಂದರ್ಭದಲ್ಲಿಯೇ ಯಶ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ ನೀಡಿದ್ದಾರೆ. ಮಲೇಷ್ಯಾದಲ್ಲಿ ಹೊಸ ಸಿನಿಮಾ ಕುರಿತು ಯಶ್ ಮಾತನಾಡಿದ್ದಾರೆ. ದೊಡ್ಡ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತೇನೆ.
ಅದೊಂದು ಮಾಸ್ ಸಿನಿಮಾ ಆಗಿರಲಿದೆ. ಸದ್ಯದಲ್ಲಿಯೇ ಮಾಹಿತಿ ನೀಡುತ್ತೇನೆ ಎಂದು ಮಾತನಾಡಿದ್ದಾರೆ. ಇದೀಗ ನಟ ಯಶ್ ಅವರ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಬಿಡುಗಡೆಯಾಗಿರುವುದು ಅಭಿಮಾನಿಗಳ ಹೆಮ್ಮೆಗೆ ಕಾರಣವಾಗಿದೆ. ನಟ ಯಶ್ ಅಭಿಮಾನಿಗಳು ಈ ವಿಚಾರ ಕೇಳಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಯಶ್ ಸಿನಿಮಾಗಳ ಜೊತೆ ತಮ್ಮ ಕುಟುಂಬಕ್ಕೂ ಸಮಯವನ್ನು ಕಳೆಯುತ್ತಾರೆ. ಫ್ಯಾಮಿಲಿ ಜೊತೆ ಆಗಾಗ ಟ್ರಿಪ್ ಗೆ ಹೋಗುತ್ತಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ನಟ ಯಶ್ ಹೆಂಡತಿ ಮಕ್ಕಳು ಅಂತ ಸಿನಿಮಾ ಜೊತೆ ಕುಟುಂಬಕ್ಕೂ ಸಮಯ ನೀಡುತ್ತಾರೆ.