Rohit Sharma: ಶರ್ಮ ಅಭಿಮಾನಿಗಳಿಗೆ ಬೇಸರದ ಸುದ್ದಿ, MI ತಂಡದಿಂದ ರೋಹಿತ್ ಶರ್ಮ ಔಟ್.

ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್‌ ನಿಂದ ರೋಹಿತ್ ಶರ್ಮ ಔಟ್.

Rohit Sharma Latest Update: ಮುಂಬೈ ಇಂಡಿಯನ್ಸ್ IPL ಹರಾಜು 2024 ರ ಮೊದಲು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಹಠಾತ್ ತೆಗೆದುಹಾಕುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಈ ನಿರ್ಧಾರದ ನಂತರ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಹಾರ್ದಿಕ್ ಪಾಂಡ್ಯ ಅವರನ್ನು MI ತಂಡಕ್ಕೆ ನಾಯಕರನ್ನಾಗಿ ಮಾಡಿದ ವಿಷಯ ಬಾರಿ ಚರ್ಚೆಗೆ ಕಾರಣವಾಗಿತ್ತು.

ಅಷ್ಟೇ ಅಲ್ಲ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತೀವ್ರ ವಿರೋಧ ಎದುರಿಸಿದ್ದರು. IPL 2024 ರಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮ ಅವರ ನಡುವೆ ಬಾರಿ ಮನಸ್ತಾಪ ಏರ್ಪಟ್ಟಿದೆ ಎನ್ನುವ ಬಗ್ಗೆ ಕೂಡ ಮಾಹಿತಿ ಲಭಿಸಿದೆ. ಇವೆಲ್ಲದರ ಮದ್ಯೆ ರೋಹಿತ್ ಶರ್ಮಾ ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್‌ ನಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ ಎನ್ನುವ ವದಂತಿ ಕೂಡ ಕೇಳಿ ಬರುತ್ತಿದೆ.

Rohit Sharma Latest Update
Image Credit: The Indian Express

ಶರ್ಮ ಅಭಿಮಾನಿಗಳಿಗೆ ಬೇಸರದ ಸುದ್ದಿ
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿದಾಗಿನಿಂದ ಅವರು ತಂಡವನ್ನು ತೊರೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ. IPL ನ ಸಮಯದಲ್ಲಿ ಡ್ರೆಸ್ಸಿಂಗ್ ರೂಮ್ ನಲ್ಲಿ ತಂಡದ ನಡುವೆ ಸಾಕಷ್ಟು ಅಸಮಾಧಾನ ಉಂಟಾಗಿತ್ತು. ಮುಂಬೈ ತಂಡದ ಸ್ಟಾರ್ ಆಟಗಾರ ಮುಂದಿನ ಋತುವಿನಲ್ಲಿ ತವರಿನ ತಂಡದಲ್ಲಿ ಆಡುವುದು ಅನುಮಾನ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

MI ತಂಡದಿಂದ ರೋಹಿತ್ ಶರ್ಮ ಔಟ್
ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ. ಪ್ರಸಕ್ತ ಐಪಿಎಲ್‌ ನಲ್ಲಿ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅವರು 32.07 ರ ಸರಾಸರಿಯಲ್ಲಿ ಮತ್ತು 150 ರ ಸ್ಟ್ರೈಕ್ ರೇಟ್‌ ನಲ್ಲಿ 417 ರನ್ ಗಳಿಸಿದ್ದಾರೆ. ಇದು ಒಂದು ಶತಕ ಮತ್ತು ಅರ್ಧ ಶತಕವನ್ನು ಒಳಗೊಂಡಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮುಂದಿನ ಐಪಿಎಲ್ ಹರಾಜಿಗೂ ಮುನ್ನ ಇಶಾನ್ ಕಿಶನ್ ಅವರನ್ನು ಉಳಿಸಿಕೊಳ್ಳುವುದು ಅನುಮಾನ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಇಶಾನ್ ಬೇಕಾದರೆ ಮುಂಬೈ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಅವರನ್ನು ಪಡೆಯಬಹುದಾಗಿದೆ.

rohit sharma mi team
Image Credit: The Indian Express

Join Nadunudi News WhatsApp Group

Join Nadunudi News WhatsApp Group