Rohit Sharma T20: ವಿಶ್ವಕಪ್ ಸೋಲಿನ ಬೆನ್ನಲ್ಲೇ ದೊಡ್ಡ ನಿರ್ಧಾರ ತಗೆದುಕೊಂಡ ರೋಹಿತ್, ಕ್ರಿಕೆಟ್ ಗೆ ಗುಡ್ ಬೈ.

ವಿಶ್ವಕಪ್ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದ ರೋಹಿತ್ ಶರ್ಮಾ.

Rohith Sharma Retirement: ಸದ್ಯ ಬಹುನಿರೀಕ್ಷಿತ ICC World Cup 2023 ಪಂದ್ಯಾವಳಿ ಮುಕ್ತಗೊಂಡಿದೆ. 2023 ರ ವಿಶ್ವಕಪ್ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ತನ್ನ ಮುಡಿಗೇರಿಸಿಕೊಂಡಿದೆ. ಟೀಮ್ ಇಂಡಿಯಾದ ವಿರುದ್ಧ ಆಸ್ಟ್ರೇಲಿಯಾ 6 ವಿಕೆಟ್ ಗಳ ಮೂಲಕ ಜಯ ಸಾಧಿಸಿದೆ.

ಈ ಬಾರಿ ಕೂಡ ಭಾರತಕ್ಕೆ ವಿಶ್ವಕಪ್ ಕೈತಪ್ಪಿ ಹೋಗಿದೆ. ಇಡೀ ಭಾರತೀಯರು ಬೇಸರದಲ್ಲಿದ್ದಾರೆ ಎನ್ನಬಹುದು. ಸದ್ಯ ಭಾರತೀಯರಿಗೆ ವಿಶ್ವಕಪ್ ಸೋಲಿನ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮುಂಬರಲಿರುವ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತ ತಂಡದ ಈ ಶ್ರೇಷ್ಠ ಆಟಗಾರ ಹೊರಗುಳಿಯಲಿದ್ದಾರೆ.

rohit sharma retirement t20
Image Credit: abplive

ವಿಶ್ವಕಪ್ ಸೋಲಿನ ಬೆನ್ನಲ್ಲೇ ದೊಡ್ಡ ನಿರ್ಧಾರ ತಗೆದುಕೊಂಡ ರೋಹಿತ್
ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ (Rohit Sharma) ಮುಂಬರುವ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ. 50 ಓವರ್‌ ಗಳ ವಿಶ್ವಕಪ್‌ ನ ಆರಂಭಕ್ಕೂ ಮುನ್ನ ಅವರ ಭವಿಷ್ಯದ ಸಂಕ್ಷಿಪ್ತ ಸ್ವರೂಪದ ಕುರಿತು ಚರ್ಚೆಗಳು ನಡೆದಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನವೆಂಬರ್ 2022 ರಲ್ಲಿ ಭಾರತದ T20 ವಿಶ್ವಕಪ್ ಸೆಮಿಫೈನಲ್ ನಿರ್ಗಮನದ ನಂತರ, ರೋಹಿತ್ ಒಂದೇ ಒಂದು T20 ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಈ ಋತುವಿನ ಟಿ20 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದ್ದಾರೆ. 148 ಟಿ20 ಪಂದ್ಯಗಳಲ್ಲಿ ಪ್ರಭಾವಿ ದಾಖಲೆಯೊಂದಿಗೆ, 36 ವರ್ಷದ ರೋಹಿತ್ ನಾಲ್ಕು ಶತಕಗಳು ಸೇರಿದಂತೆ ಸುಮಾರು 140 ಸ್ಟ್ರೈಕ್ ರೇಟ್‌ ನಲ್ಲಿ 3853 ರನ್ ಗಳಿಸಿದ್ದಾರೆ.

rohit sharma announce of his t20 retirement
Image Credit: ndtv

ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ ರೋಹಿತ್
“ಇದು ಹೊಸ ಬೆಳವಣಿಗೆಯಲ್ಲ, ಏಕದಿನ ವಿಶ್ವಕಪ್‌ ನಲ್ಲಿ ಗಮನಹರಿಸಿರುವ ರೋಹಿತ್ ಕಳೆದ ಒಂದು ವರ್ಷದಲ್ಲಿ ಯಾವುದೇ ಟಿ20 ಪಂದ್ಯಗಳನ್ನು ಆಡಿಲ್ಲ. ಈ ನಿಟ್ಟಿನಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರೊಂದಿಗೆ ಅವರು ವ್ಯಾಪಕ ಚರ್ಚೆ ನಡೆಸಿದ್ದಾರೆ.  ಅವರೇ ಸ್ವಯಂಪ್ರೇರಣೆಯಿಂದ T20 ಪಂದ್ಯಗಳಿಂದ ದೂರ ಉಳಿದಿದ್ದಾರೆ. ಇದು ಸಂಪೂರ್ಣವಾಗಿ ರೋಹಿತ್ ಅವರ ನಿರ್ಧಾರ” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group