Rohit Sharma: ವಿಶ್ವಕಪ್ ಗೆದ್ದ ಬೆನ್ನಲ್ಲೇ ಬೇಸರದ ಸುದ್ದಿ ನೀಡಿದ ರೋಹಿತ್ ಶರ್ಮ, ಅಂತಿಮ ನಿರ್ಧಾರ

ನಿವೃತ್ತಿ ವಿಷಯ ಘೋಷಿಸಿದ ಶವಿಶ್ವಕಪ್ ಗೆದ್ದ ಬೆನ್ನಲ್ಲೇ ಬೇಸರದ ಸುದ್ದಿ ನೀಡಿದ ರೋಹಿತ್ ಶರ್ಮ

Rohit Sharma Says Final Goodbye For International T20 Cricket: ICC ಪುರುಷರ T20 ವಿಶ್ವಕಪ್ 2024 ನಿನ್ನೆ 29 ಜೂನ್ 2024 ರಂದು ಮುಕ್ತಾಯಗೊಂಡಿದೆ. ಜೂನ್ 29 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್‌ ಗಳಿಂದ ಕಪ್ ಅನ್ನು ಗೆದ್ದುಕೊಂಡಿದೆ.

ಭಾರತ T20 ವಿಶ್ವಕಪ್ ಗೆದ್ದುಕೊಂಡಿದ್ದು ಇದು ಎರಡನೇ ಬಾರಿ. ಇದೆ ವೇಳೆ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ನಾಯಕ ರೋಹಿತ್ ಶರ್ಮ T20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

T20 ವಿಶ್ವಕಪ್ ಗೆ ವಿದಾಯ ಹೇಳಿದ ಶರ್ಮಾ ಹಾಗೂ ಕೊಹ್ಲಿ
ನಿನ್ನೆ ನೆಡೆದ ICC ಪುರುಷರ T20 ವಿಶ್ವಕಪ್ 2024 ರ ಪಂದ್ಯದ ಗೆಲುವಿನ ಬಳಿಕ ಭಾರತ ತಂಡದ ನಾಯಕ ಹಾಗೂ ಸ್ಟಾರ್ ಬ್ಯಾಟರ್ Rohit Sharma T20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ T20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆ ಬಳಿಕ Rohit Sharma ಕೂಡ ವಿದಾಯ ಹೇಳಿದ್ದಾರೆ.

ಮೊದಲು ವಿದಾಯ ಹೇಳಿದ ಕೊಹ್ಲಿ
ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ “ಇದು ನನ್ನ ಕೊನೆಯ T20 ವಿಶ್ವಕಪ್. ಇಲ್ಲಿಯವರೆಗೆ ಇದನ್ನೇ ಸಾಧಿಸಲು ನಾವು ಬಯಸುತ್ತಿದ್ದೆವು ಎಂದು ಹೇಳಿದರು. ಇದು ಭಾರತಕ್ಕಾಗಿ ಆಡುತ್ತಿರುವ ನನ್ನ ಕೊನೆಯ T20 ಪಂದ್ಯ, ಹೊಸ ಪೀಳಿಗೆಯ ಆಟಗಾರರಿಗೆ ನಾನು ಸ್ಥಳಾವಕಾಶ ಮಾಡಿಕೊಡಲೇಬೇಕು”. ಈ ಮೂಲಕ ಕೊಹ್ಲಿ T20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

Join Nadunudi News WhatsApp Group

ನಿವೃತ್ತಿ ವಿಷಯ ಘೋಷಿಸಿದ ಶರ್ಮ
ರೋಹಿತ್ ಶರ್ಮಾ ಗೆಲುವಿನ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅದು ನನ್ನ ಕೊನೆಯ ಪಂದ್ಯವೂ ಆಗಿತ್ತು. ಪ್ರಾಮಾಣಿಕವಾಗಿ, ನಾನು ಈ ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ನಾನು ಸಿಕ್ಕಾಪಟ್ಟೆ ಖುಷಿಯಲ್ಲಿದ್ದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ.

ನಾನು ಈ ಮಾದರಿಯ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಈ ಸ್ವರೂಪದಲ್ಲಿ ಆಡುವ ಮೂಲಕ ನನ್ನ ಭಾರತ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಾನು ಈಗ ಏನು ಮಾಡಿದ್ದೇನೋ ಅದನ್ನೇ ಮಾಡಲು ಬಯಸಿದ್ದೆ. ಕಪ್ ಗೆದ್ದು ವಿದಾಯ ಹೇಳಿದೆ” ಎಂದು ಹೇಳಿಕೆ ನೀಡಿದ್ದಾರೆ.

Rohit Sharma Says Final Goodbye For International T20 Cricket
Image Credit: News 18

Join Nadunudi News WhatsApp Group