Rohith Sharma: ಕಳಪೆ ಫಾರ್ಮ್ ನಲ್ಲಿ ಇರುವ ಕೊಹ್ಲಿ ಬಗ್ಗೆ ಖಡಕ್ ಹೇಳಿಕೆ ನೀಡಿದ ಶರ್ಮ, ಇದು ಕ್ಯಾಪ್ಟನ್ ಮಾತು.

ಕಳಪೆ ಫಾರ್ಮ್ ನಲ್ಲಿ ಇರುವ ಕೊಹ್ಲಿ ಬಗ್ಗೆ ಖಡಕ್ ಹೇಳಿಕೆ ನೀಡಿದ ಶರ್ಮ

Rohith Sharma About Virat Kohli: ಸದ್ಯ T20 ವಿಶ್ವಕಪ್ ಟೂರ್ನಿಯಲ್ಲಿ Team India ಫೈನಲ್ ತಲುಪಿದೆ. ಜೂನ್ 27 ರಂದು ನಡೆದ India v/s England ಪಂದ್ಯದಲ್ಲಿ ರೋಹಿತ್ ಪಡೆ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಸದ್ಯ ಟೀಮ್ ಇಂಡಿಯಾ ಫೈನಲ್ ನ ಗೆಲುವಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಟೀಮ್ ಇಂಡಿಯಾ ಫೈನಲ್ ತಲುಪಿರುವುದು ಭಾರತೀಯರಿಗೆ ಖುಷಿ ನೀಡಿದೆ. ಇನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸಿಕ್ಕ ಗೆಲುವಿನಲ್ಲಿ ರೋಹಿತ್ ಶರ್ಮ ಮುಖ್ಯ ಪಾತ್ರ ವಹಿಸಿದ್ದು ಈ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಅಷ್ಟು ಚೆನ್ನಾಗಿರಲಿಲ್ಲ. ಸದ್ಯ ಕಳಪೆ ಫಾರ್ಮ್ ನಲ್ಲಿ ಇರುವ ಕೊಹ್ಲಿ ಬಗ್ಗೆ ರೋಹಿತ್ ಶರ್ಮ ಹೇಳಿಕೆಯನ್ನು ನೀಡಿದ್ದಾರೆ.

Rohit Sharma And Virat Kohli
Image Credit: The Cricket Lounge

ಕಳಪೆ ಫಾರ್ಮ್ ನಲ್ಲಿ ಇರುವ ಕೊಹ್ಲಿ ಬಗ್ಗೆ ಖಡಕ್ ಹೇಳಿಕೆ ನೀಡಿದ ಶರ್ಮ
ಪ್ರಸ್ತುತ T20 ವಿಶ್ವಕಪ್‌ ಗೆ ರೋಹಿತ್ ಶರ್ಮಾ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಯ್ಕೆಯಾಗಿದ್ದರು. ಆದರೆ, ಜೈಸ್ವಾಲ್ ಸಂಪೂರ್ಣ ಔಟಾಗಿದ್ದು, ವಿರಾಟ್ ಕೊಹ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ. ಆದರೆ, ರನ್ ಮಷಿನ್ ಕೊಹ್ಲಿಯಿಂದ ರನ್ ಬರುತ್ತಿಲ್ಲ. ಈ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 37 ರನ್ ಗಳಿಸಿದ್ದ ಕೊಹ್ಲಿ ಉಳಿದೆಲ್ಲ ಪಂದ್ಯಗಳಲ್ಲಿ ವಿಫಲರಾಗಿದ್ದರು. ಅಲ್ಲದೆ ಅವರು ಎರಡು ಬಾರಿ ಡಕ್ ಆಗಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಗಣನೀಯವಾಗಿ ವಿಫಲರಾಗಿದ್ದರು. ಕೊಹ್ಲಿ ಕೇವಲ 9 ರನ್ ಗಳಿಸಿ ಪೆವಿಲಿಯನ್ ತಲುಪಿದರು.

ಇದು ಕ್ಯಾಪ್ಟನ್ ಮಾತು
ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಯನ್ನು ಬೆಂಬಲಿಸುತ್ತೀರಾ ಎಂದು ನಿರೂಪಕರು ರೋಹಿತ್ ಶರ್ಮಾ ಅವರನ್ನು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ರೋಹಿತ್, ಖಂಡಿತಾ, ವಿರಾಟ್ ಕ್ಲಾಸ್ ಪ್ಲೇಯರ್, ದೊಡ್ಡ ಮ್ಯಾಚ್ ಪ್ಲೇಯರ್. ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿಜೀವನದಲ್ಲಿ ಈ ರೀತಿಯ ಹಂತವನ್ನು ಹೊಂದಿದ್ದಾನೆ. ಆದರೆ, ಕೊಹ್ಲಿಗೆ ಫಾರ್ಮ್ ದೊಡ್ಡ ವಿಷಯವಲ್ಲ. ಅವರು ಫೈನಲ್ (ರನ್) ಗಾಗಿ ಕಾಯುತ್ತಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದರು.

Join Nadunudi News WhatsApp Group

ತಮ್ಮ ತಂಡದ ಪ್ರಮುಖ ಆಟಗಾರನಿಗೆ ನಾಯಕನಾಗಿ ರೋಹಿತ್ ನೀಡಿದ ಬೆಂಬಲವನ್ನು ಕ್ರಿಕೆಟ್ ಅಭಿಮಾನಿಗಳು ಹೊಗಳುತಿದ್ದಾರೆ. ಕೊಹ್ಲಿ ಒಮ್ಮೆ ರನ್ ಗಳಿಸಲು ಆರಂಭಿಸಿದರೆ ಅವರು ಹೇಗೆ ಆಡುತ್ತಾರೆ ಎನ್ನುವುದನ್ನು ಹೇಳಬೇಕಾಗಿಲ್ಲ ಎನ್ನುವುದು ಕೊಹ್ಲಿ ಅಭಿಮಾನಿಗಳ ಅಭಿಪ್ರಾಯವಾಗಿದೆ.

Rohit Sharma About Virat Kohli
Image Credit: Telegraphindia

Join Nadunudi News WhatsApp Group