Rohith Sharma: ಶರ್ಮ ಪಿಚ್ ಮೇಲಿನ ಮಣ್ಣು ತಿಂದಿದ್ದು ಯಾಕೆ ಗೊತ್ತಾ…? ಅಸಲಿ ಕಾರಣ ತಿಳಿಸಿದ ಶರ್ಮ.

ಶರ್ಮ ಪಿಚ್ ಮೇಲಿನ ಮಣ್ಣು ತಿಂದಿದ್ದು ಯಾಕೆ ಗೊತ್ತಾ...?

Rohith Sharma Eat Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್ ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 11 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಐಸಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಈ ಗೆಲುವಿನ ನಂತರ, ರೋಹಿತ್ ಶರ್ಮಾ ಬಾರ್ಬಡೋಸ್‌ ನ ಪಿಚ್‌ ನಲ್ಲಿ ಮಣ್ಣು ತಿನ್ನುತ್ತಿರುವುದು ಕಂಡುಬಂದಿದೆ. ಇದರ ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆಗುತ್ತಿದೆ. ಸದ್ಯ ವೈರಲ್ ಸುಡಿಯ ಬಗ್ಗೆ ರೋಹಿತ್ ಶರ್ಮಾ ಕಾರಣವನ್ನು ಬಹಿರಂಗಪಡಿಸಿದ್ದಾರೆ. 

Rohith Sharma Ate Soil From Pitch
Image Credit: OneCricket

ಶರ್ಮ ಪಿಚ್ ಮೇಲಿನ ಮಣ್ಣು ತಿಂದಿದ್ದು ಯಾಕೆ ಗೊತ್ತಾ…?
ಇಡೀ ಭಾರತೀಯರು T2o ವಿಶ್ವಕಪ್ ನಲ್ಲಿ India ವಿಶ್ವ ಚಾಂಪಿಯನ್ ಆಗಿರುವ ಬಗ್ಗೆ ಖುಷಿಯಲ್ಲಿದ್ದಾರೆ. ಹಲವು ವರ್ಷಗಳ ಭಾರತೀಯರ ಕನಸು ಸದ್ಯ 2024 ರಲ್ಲಿ ನೆರವೇರಿದೆ. ಟೀಮ್ ಇಂಡಿಯಾ ತನ್ನ ಗೆಲುವನ್ನು ವಿಶೇಷವಾಗಿ ಆಚರಿಸಿದೆ. ಇನ್ನು ನಾಯಕ ರೋಹಿತ್ ಶರ್ಮ ವಿಶ್ವಕಪ್ ಪಡೆಯಲು ಹೋದಾಗ ವಿಭಿನ್ನ ನಡಿಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ರೋಹಿತ್ ಶರ್ಮ ಕಪ್ ತೆಗೆದುಕೊಳ್ಳಲು ಹೋಗುವದ ನಡೆದ ರೀತಿ ಎಲ್ಲರಿಗು ಆಶ್ಚರ್ಯ ಮೂಡಿಸಿತ್ತು. ಇದರ ಬೆನ್ನಲ್ಲೇ 2024 ರ ಟಿ 20 ವಿಶ್ವಕಪ್ ಗೆದ್ದ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮ ಮಣ್ಣು ತಿನ್ನುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೀಗ ಈ ನಡೆಯ ಬಗ್ಗೆ ರೋಹಿತ್ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.

Rohit Sharma Ate Soil From Pitch
Image Credit: prabhatkhabar

ಅಸಲಿ ಕಾರಣ ತಿಳಿಸಿದ ಶರ್ಮ
ಬಾರ್ಬಡೋಸ್ ವಿಕೆಟ್‌ ನಲ್ಲಿ ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಗೆದ್ದಿತು, ಆದ್ದರಿಂದ ಈ ಪಿಚ್ ನನಗೆ ತುಂಬಾ ವಿಶೇಷವಾಗಿದೆ. ಈ ಗೆಲುವಿನ ಜೊತೆಗೆ, ಈ ಪಿಚ್ ನನ್ನ ನೆನಪಿನಲ್ಲಿ ಉಳಿಯುತ್ತದೆ. ಪಿಚ್ ಅನ್ನು ನನ್ನ ಭಾಗವಾಗಿಸಲು ನಾನು ಮಣ್ಣು ತಿಂದಿದ್ದೇನೆ. ಈ ಗೆಲುವಿನ ಕ್ಷಣಗಳು ತುಂಬಾ ವಿಶೇಷ. ನಮ್ಮ ಹಲವು ವರ್ಷಗಳ ಕನಸು ಇಲ್ಲಿ ನನಸಾಗಿದೆ. ಹೀಗಾಗಿ ಈ ಮೈದಾನದ ಮತ್ತು ಪಿಚ್ ನಮಗೆ ವಿಶೇಷವಾಗಿದೆ ಎಂದು ರೋಹಿತ್ ಶರ್ಮ ಹೇಳಿದ್ದಾರೆ.

Join Nadunudi News WhatsApp Group

Rohit Sharma Latest News Update
Image Credit: Aajtak

Join Nadunudi News WhatsApp Group