Rohith Sharma: ಕಣ್ಣೀರು ಹಾಕಿದ ಹಿಟ್ ಮ್ಯಾನ್ ರೋಹಿರ್ ಶರ್ಮ, ಅಷ್ಟಕ್ಕೂ ಆಗಿದ್ದೇನು ಗೊತ್ತಾ…?

Rohith Sharma ತಮ್ಮ ಬೇಸರ ಹೊರಹಾಕಲು ಕಾರಣವೇನು...?

Rohith Sharma Emotion: ಸದ್ಯ ನಡೆಯುತ್ತಿರುವ T20 ವಿಶ್ವಕಪ್ ನಲ್ಲಿ ಜಯ ಸಾಧಿಸಲು ಪಣ ತೊಟ್ಟಿದೆ. ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ ಎದುರಾಳಿ ತಂಡವನ್ನು ಮಣಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇಂದು (ಜೂನ್ 05) ಐರ್ಲೆಂಡ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ರೋಹಿತ್ ದೊಡ್ಡ ಗೆಲುವು ದಾಖಲಿಸಲು ಎದುರು ನೋಡುತ್ತಿದ್ದಾರೆ.

ಇದಕ್ಕಾಗಿ ಅವರು ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಫಿಟ್ನೆಸ್ ಹೆಚ್ಚಿಸುವುದರ ಜತೆಗೆ ಬ್ಯಾಟಿಂಗ್ ನಲ್ಲೂ ಸುಧಾರಿಸಿಕೊಳ್ಳುತ್ತಿದ್ದಾರೆ. ಎದುರಾಳಿ ಬೌಲರ್‌ ಗಳ ಮೇಲೆ ದಾಳಿ ನಡೆಸಲು ನಿರ್ಧರಿಸಿದ್ದಾರೆ. ಸದ್ಯ ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ ದೊಡ್ಡ ಹೇಳಿಕೆಯ್ನನು ನೀಡಿದ್ದಾರೆ. ಅಷ್ಟಕು Rohith Sharma ತಮ್ಮ ಬೇಸರ ಹೊರಹಾಕಲು ಕಾರಣವೇನು…? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

Rohit Sharma Emotional
Image Credit: NDTV

ಕಣ್ಣೀರು ಹಾಕಿದ ಹಿಟ್ ಮ್ಯಾನ್ ರೋಹಿರ್ ಶರ್ಮ
ಇಂದಿನ ಪಂದ್ಯ ನ್ಯೂಯಾರ್ಕ್‌ ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಮಹತ್ವದ ಹೇಳಿಕೆ ನೀಡಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಕೇಳುವುದಿಲ್ಲ, ಬೇರೇನೂ ಮಾಡಲು ಸಾಧ್ಯವಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಷ್ಟಕ್ಕೂ ಹಿಟ್ ಮ್ಯಾನ್ ಹೀಗೆ ಹೇಳಲು ಕಾರಣ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್.

ಹೌದು, ಈ ಮೆಗಾ ಟೂರ್ನಮೆಂಟ್ ಬಳಿಕ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯ ಅವಧಿಯನ್ನು ಪೂರ್ಣಗೊಳಿಸಿ ಟೀಂ ಇಂಡಿಯಾ ತೊರೆಯಲಿದ್ದಾರೆ. ಅವರ ಬದಲಿಗೆ ಹೊಸ ಕೋಚ್‌ ಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಕೋಚ್ ಆಗುವ ಅವಕಾಶವಿದ್ದರೂ, ತಾನು ಅರ್ಜಿ ಸಲ್ಲಿಸುವುದಿಲ್ಲ ಟಿ20 ವಿಶ್ವಕಪ್ ಕೋಚ್ ಆಗಿ ಕೊನೆಯ ಟೂರ್ನಿಯಾಗಲಿದೆ ಎಂದು ದ್ರಾವಿಡ್ ಅವರು ಸ್ಪಷ್ಟಪಡಿಸಿದ್ದಾರೆ.

Rohit Sharma Latest News
Image Credit: Original Source

ಅಷ್ಟಕ್ಕೂ ಆಗಿದ್ದೇನು ಗೊತ್ತಾ…?
ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, ದ್ರಾವಿಡ್ ಅವರ ಬಳಿ ತಂಡದಲ್ಲಿ ಇನ್ನೂ ಕೆಲವು ವರ್ಷಗಳ ಕಾಲ ಇರುವಂತೆ ಕೇಳಿಕೊಂಡಿದ್ದರು, ಅವರು ಮನಸ್ಸು ಬದಲಾಯಿಸುತ್ತಿಲ್ಲ ಎಂದಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರು ನನ್ನ ಮೊದಲ ಕ್ಯಾಪ್ಟನ್. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಆಡಿದ್ದೇನೆ.

Join Nadunudi News WhatsApp Group

ದ್ರಾವಿಡ್ ನನಗೆ ಮಾತ್ರವಲ್ಲ ತಂಡದ ಎಲ್ಲ ಆಟಗಾರರಿಗೂ ಉತ್ತಮ ಮಾದರಿ. ಇನ್ನೂ ಕೆಲವು ವರ್ಷಗಳ ಕಾಲ ತಂಡದಲ್ಲಿಯೇ ಇದ್ದು ನಮ್ಮನ್ನು ಕೋಚ್ ಆಗಿ ಮುನ್ನಡೆಸುವಂತೆ ಮನವಿ ಮಾಡಿದ್ದೇನೆ. ತಂಡವನ್ನು ತೊರೆಯದಂತೆ, ಕೋಚ್ ಆಗಿ ಮುಂದುವರಿಯುವಂತೆ ಮನವರಿಕೆ ಮಾಡಿದರು, ಅದಕ್ಕೆ ದ್ರಾವಿಡ್ ಒಪ್ಪಲಿಲ್ಲ ಎಂದು ರೋಹಿತ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

Rohit Sharma Team India
Image Credit: NDTV

Join Nadunudi News WhatsApp Group