Rohit Sharma: ಕೊಹ್ಲಿ ಜೊತೆ ಡೇಟಿಂಗ್ ಮಾಡಿದ ರೋಹಿತ್ ಪತ್ನಿ, ವಿರಾಟ್ ಗೆ ಮ್ಯಾನೇಜರ್ ಆಗಿದ್ದ ಶರ್ಮಾ ಪತ್ನಿ.

ವಿರಾಟ್ ಕೊಹ್ಲಿ ಅವರಿಗೆ ಮ್ಯಾನೇಜರ್ ಆಗಿ ಕೆಲಸವನ್ನ ಮಾಡಿದ ರೋಹಿತ್ ಶರ್ಮಾ ಪತ್ನಿ ರಿತಿಕಾ.

Rohit Sharma Wife Rikika Sajdeh: ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ 16 ನೇ ಆವೃತ್ತಿಯ ಐಪಿಎಲ್ ನಲ್ಲಿ ನಿರತರಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರು ಭಾರತದ ಪ್ರಮುಖ ಕ್ರಿಕೆಟ್ ಆಟಗಾರರಾಗಿದ್ದಾರೆ.

ಇದೀಗ ರೋಹಿತ್ ಶರ್ಮಾ ಅವರ ಪತ್ನಿ ವಿರಾಟ್ ಕೊಹ್ಲಿ ಜೊತೆ ಡೇಟಿಂಗ್ ಮಾಡಿದ ವಿಚಾರ ಹೊರ ಬಿದ್ದಿದೆ. ನಾಯಕ ರೋಹಿತ್​ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್​ ಕೊಹ್ಲಿ, ಟೀಮ್​ ಇಂಡಿಯಾದ ಎರಡು ಪಿಲ್ಲರ್​ಗಳಿದ್ದಂತೆ. ದಾಖಲೆಗಳ ಮೇಲೆ ದಾಖಲೆಗಳ ಬರೆಯುವ ಸರದಾರರಾಗಿದ್ದಾರೆ.

Rohit Sharma's wife Ritika worked as manager for Virat Kohli
Image Credit: indianexpress

ವಿರಾಟ್ ಕೊಹ್ಲಿ ಜೊತೆ ಡೇಟಿಂಗ್ ಮಾಡಿದ ರೋಹಿತ್ ಶರ್ಮಾ ಪತ್ನಿ
ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ದೇಹ್ ಅವರು ಭಾರತದ ಅತ್ಯಂತ ಸುಂದರ ಜೋಡಿಯಾಗಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರು ಮೋಸ್ಟ್​ ಬ್ಯೂಟಿಫುಲ್​ ಕಪಲ್ಸ್​ ಆಗಿದ್ದಾರೆ.

ವಿರಾಟ್ ಕೊಹ್ಲಿ ಮದುವೆ ಆಗುವುದಕ್ಕೂ ಮೊದಲು 6 ಮಂದಿಯ ಜೊತೆ ಡೇಟಿಂಗ್ ಮಾಡಿದ್ದಾರಂತೆ. ಅದರಲ್ಲಿ ಒಬ್ಬರು ರೋಹಿತ್​ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್. ರಿತಿಕಾ ಅವರು ಕೊಹ್ಲಿ ಸ್ಪೋರ್ಟ್ಸ್ ಮ್ಯಾನೇಜರ್ ಆಗಿ ಐಪಿಎಲ್ 2010 ರಿಂದ ಕಾರ್ಯ ನಿರ್ವಹಿಸುತ್ತಿದ್ದರು.

Virat Kohli's manager is Rohit Sharma's wife who he dated
Image Credit: rewariyasat

ರಿತಿಕಾ ಸಜ್ದೇಹ್ 2013 ರಲ್ಲಿ ವಿರಾಟ್ ಕೊಹ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಆ ವರ್ಷ ಜಿಂಬಾಬ್ವೆಗೆ ಭೇಟಿ ನೀಡಿದ ನಂತರ ಕೊಹ್ಲಿ ಭಾರತಕ್ಕೆ ಹಿಂತಿರುಗಿದಾಗ ರಿತಿಕಾ ಜೊತೆ ಕಾಣಿಸಿಕೊಂಡಿದ್ದರು.

Join Nadunudi News WhatsApp Group

ರೋಹಿತ್ ಶರ್ಮಾ ಅವರನ್ನು ವಿವಾಹವಾದ ರಿತಿಕಾ
ಒಂದು ಸಲ ಸಿನಿಮಾಗೆ ಹೋಗಿದ್ದಾಗ ಈ ಜೋಡಿ ಛಾಯಾಗ್ರಾಹಕರ ಕಣ್ಣಿಗೆ ಸಿಕ್ಕು ಬಿದ್ದಿದ್ದರು. ಆದರೆ ಈ ಜೋಡಿ ನಾವಿಬ್ಬರು ಉತ್ತಮ ಸ್ನೇಹಿತರು ಅಂತ ಹೇಳಿದ್ದಾರೆ. ನಂತರ ರೋಹಿತ್​ಗೆ ರಿತಿಕಾ ಕ್ರೀಡಾ ಮ್ಯಾನೇಜರ್ ಆಗಿ ನೇಮಕವಾದರು. ಮ್ಯಾನೇಜರ್ ಆಗಿದ್ದ ರಿತಿಕಾ, ರೋಹಿತ್​ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿತು. ಬಳಿಕ ಸ್ನೇಹ ಪರಸ್ಪರ ಪ್ರೀತಿಗೆ ತಿರುಗಿತ್ತು. ಕೊನೆಗೂ ಇಬ್ಬರು ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ವಿವಾಹವಾದರು.

Join Nadunudi News WhatsApp Group