Roopesh Rajanna Politic Entry: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ .
ಇದೀಗ ಬಿಗ್ ಬಾಸ್ ಮುಗಿದ ಬಳಿಕ ರೂಪೇಶ್ ರಾಜಣ್ಣ ರಾಜಕೀಯ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
Roopesh Rajanna: ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ (Roopesh Rajanna) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಸೀಸನ್ 9 ರಲ್ಲಿ ನವೀನರ ಪೈಕಿ ಮನೆಗೆ ಎಂಟ್ರಿ ಕೊಟ್ಟಿದ್ದ ರೋಪೇಶ್ ರಾಜಣ್ಣ ಫೈನಲ್ ತನಕ ಬಂದು ಕನ್ನಡಿಗರ ಮನ ಗೆದ್ದಿದ್ದರು. ಇನ್ನು ಇದೀಗ ಬಿಗ್ ಬಾಸ್ ಮುಗಿದ ಬಳಿಕ ರೂಪೇಶ್ ರಾಜಣ್ಣ ರಾಜಕೀಯ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ರಾಜಕೀಯ ಪ್ರವೇಶದತ್ತ ರೂಪೇಶ್ ರಾಜಣ್ಣ
ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯಗಳು ನಡೆಯುತ್ತಲೇ ಇವೆ. ಇನ್ನು ಸಾಕಷ್ಟು ಸ್ಯಾಂಡಲ್ ವುಡ್ ನ ಸ್ಟಾರ್ ನಟರ ರಾಜಕೀಯ ಪ್ರವೇಶದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಇನ್ನು ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ಕೂಡ ತೊಡಗಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ದಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರಿಗೆ ಕೂಡ ರಾಜಕೀಯಕ್ಕೆ ಎಂಟ್ರಿ ನೀಡಲು ಆಫರ್ ಬಂದಿದೆಯಂತೆ. ಈ ಬಗೆ ಸ್ವತಃ ರೂಪೇಶ್ ರಾಜಣ್ಣ ಅವರೇ ಹೇಳಿಕೊಂಡಿದ್ದಾರೆ.
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದಿದ್ದರು. ಬಿಗ್ಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ದಿಸಿ ಟಾಪ್ 5 ರಲ್ಲಿ ರೂಪೇಶ್ ರಾಜಣ್ಣ ಕೂಡ ಒಬ್ಬರಾಗಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಕೂಡ ರೂಪೇಶ್ ರಾಜಣ್ಣ ಸದಾ ನ್ಯಾಯದ ಪರ ಹೋರಾಟ ನಡೆಸುತ್ತಿದ್ದರು. ಮನೆಯಲ್ಲಿ ಜಗಳ ನಡೆದರೆ ಬಿಡಿಸಲು ರೂಪೇಶ್ ರಾಜಣ್ಣ ಸಿದ್ಧರಾಗಿದ್ದರು.
ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರೂಪೇಶ್ ರಾಜಣ್ಣ
ಇದೀಗ ರಾಜಕೀಯಕ್ಕೆ ಪ್ರವೇಶ ಮಾಡುವಂತೆ ನನಗೆ ಆಫರ್ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. “ನಾನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಪ್ರಖ್ಯಾತ ದೊಡ್ಡ ಪಕ್ಷದಿಂದ ನನಗೆ ಅಹ್ವಾನ ಬಂದಿದೆ. ನಿಮ್ಮ ಅಭಿಪ್ರಾಯ ಏನು ತಿಳಿಸಿ ಗೆಳೆಯರೇ ಎಂದು ರೂಪೇಶ್ ರಾಜಣ್ಣ ಕೇಳಿದ್ದಾರೆ”. ಇನ್ನು ರೂಪೇಶ್ ರಾಜಣ್ಣ ರಾಜಕೀಯ ಪ್ರವೇಶಕ್ಕೆ ಕೆಲವರು ಸಲಹೆ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ರೂಪೇಶ್ ರಾಜಣ್ಣ ರಾಜಕೀಯ ಪ್ರವೇಶ ಮಾಡ್ತಾರಾ ಎನ್ನುವ ಬಗ್ಗೆ ಕಾದು ನೋಡಬೇಕಿದೆ.