Ads By Google

Roopesh Shetty Marriage: ಮದುವೆಯ ವಿಷಯದಲ್ಲಿ ರೂಪೇಶ್ ರಾಜಣ್ಣನನ್ನು ಹೊಗಳಿದ ರೂಪೇಶ್ ಶೆಟ್ಟಿ.

Rupesh Shetty praised Rupesh Rajanna for marriage.

Image Source: Colours Kannada

Ads By Google

Bigg Boss Season 9: ಕನ್ನಡ ಕಿರುತೆರೆಯ ಬಿಗ್ ಶೋ ಎಂದರೆ ಅದು ಬಿಗ್ ಬಾಸ್ (Bigg Boss). ಬಿಗ್ ಬಾಸ್ ಸತತ 8 ಸೀಸನ್ ಗಳನ್ನೂ ಮುಗಿಸಿ ಇದೀಗ 9 ನೇ ಸೀಸನ್ ಅಲ್ಲಿ ಕೊನೆಯ ಹಂತದಲ್ಲಿ

ಇದೆ. ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Reality Show Bigg Boss) ಇದೀಗ ಕೊನೆಯ ಹಂತದಲ್ಲಿದೆ. ಶುಕ್ರವಾರ ಮತ್ತು ಶನಿವಾರದಂದು ಬಿಗ್ ಬಾಸ್ ಸೀಸನ್ 9 ನ ಗ್ರಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಆಸೆಯನ್ನು ಕೇಳಿ ಈಡೇರಿಸಿದ್ದಾರೆ.

Imagge Source: Colours Kannada

ಬಿಗ್ ಬಾಸ್ ಕೊನೆಯ ಹಂತದಲ್ಲಿ ಸ್ಪರ್ಧಿಗಳ ಮನದಾಳದ ಮಾತು
ಬಿಗ್ ಬಾಸ್ ಸೀಸನ್ 9 ಇಂದು ಗ್ರಾಂಡ್ ಫಿನಾಲೆ (Grand Finale) ನಡೆಯಲಿದ್ದು ಸ್ಪರ್ಧಿಗಳ ಆಟಕ್ಕೆ ಬ್ರೇಕ್ ಬೀಳಲಿದೆ. ಈ ವೇಳೆ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ರಾಜಣ್ಣ ಬಗ್ಗೆ ರೂಪೇಶ್ ಶೆಟ್ಟಿ (Roopesh shetty) ಮಾತನಾಡಿದ್ದಾರೆ. ನಾನು ಫ್ಯೂಚರ್ ನಲ್ಲಿ ಮದುವೆ ಆದರೆ ರಾಜಣ್ಣನ (Rupesh Rajanna) ತರ ಇರುತ್ತೀನಿ ಎಂದು ಮಾತನಾಡಿದ್ದಾರೆ.

ರಾಜಣ್ಣನ ಜೊತೆ ಮನದಾಳದ ಮಾತುಗಳನ್ನು ಹಂಚಿಕೊಂಡ ರೂಪೇಶ್ ಶೆಟ್ಟಿ
ಈಗಾಗಲೇ ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದೆ. ಹೀಗಿರುವಾಗ ಅಂತಿಮ ಘಟ್ಟದಲ್ಲಿ ರೂಪೇಶ್ ರಾಜಣ್ಣ ಬಗ್ಗೆ ತಮ್ಮ ಮನದಾಳದ ಮಾತನ್ನು ರೂಪೇಶ್ ಶೆಟ್ಟಿ (Roopesh Shetty) ಹೇಳಿಕೊಂಡಿದ್ದಾರೆ. ಈ ಸೀಸನ್ ಅಲ್ಲಿ ತನ್ನ ಜರ್ನಿಯಲ್ಲಿ ಎರಡು ಹಾಫ್ ಅಂತ ಮಾಡಿದರೆ, ಸೆಕೆಂಡ್ ಹಾಫ್ ನಲ್ಲಿ ರಾಜಣ್ಣ ಅವರು ಆವರಿಸಿಕೊಂಡಿದ್ದಾರೆ.

Image Source: India Today

ಸಾನಿಯಾ ಎಲಿಮಿನೇಷನ್ ನಂತರ ಗುರೂಜಿ ಇಲ್ಲದೆ ನನ್ನ ಮಾತು ಕಂಪ್ಲೀಟ್ ಆಗುವುದಿಲ್ಲ. ಈ ಸೆಕೆಂಡ್ಸ್ ಇನ್ನಿಂಗ್ಸ್ ಅಲ್ಲಿ ಇದ್ದಂತಹ ಫನ್ ಅಲ್ಲಿ ರಾಜಣ್ಣ ಪಾತ್ರ ತುಂಬಾ ದೊಡ್ಡದ್ದೇ ಎಂದು ಹೇಳಿದ್ದಾರೆ.

ತನ್ನ ಮನಸ್ಸಿನ ಮಾತುಗಳನ್ನು ಆಡಿದ ರೂಪೇಶ್ ಶೆಟ್ಟಿ
ನನಗೆ ಅಂದು ಕೊಟ್ಟ ಆ ಒಂದು ಲೆಟರ್ ಬಿಟ್ಟರೆ ಬೇರೇನೂ ಬೇಸರ ಇಲ್ಲ. ಬಹುಶಃ ಬೇರೆ ಅವರು ಆ ಲೆಟರ್ ನೀಡಿದ್ದಾರೆ ನಾನು ಬದಲಾಗುತ್ತ ಇರಲಿಲ್ಲ. ಅದಾದ ಬಳಿಕ ನೀವು ತೋರಿಸಿದ ಕೇರ್ ನಿಂದಾಗಿ, ನಾನು ಮತ್ತೆ ಫ್ರೆಂಡ್ ಶಿಪ್ ಮುಂದುವರೆಸಿದ್ದೀನಿ. ನೀವು ಮನಸ್ಸಿನಲ್ಲಿ ಏನನ್ನು ಇಟ್ಟುಕೊಳ್ಳಬೇಡಿ.

ನಾನು ಆ ಒಂದು ದಿನವನ್ನು ಈಗಾಗಲೇ ಡಿಲೀಟ್ ಮಾಡಿದ್ದೀನಿ. ಇನ್ನೊಂದು ವಿಚಾರ ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ಶಿಪ್ ಅಂದರೆ ಏನು ಅಂತ ಗೊತ್ತಾಯಿತು. ಲವ್ ಅಂದರೆ ಏನು ಅಂತ ಗೊತ್ತಿತ್ತು, ಆದರೆ ಮದುವೆ ಆದ ಮೇಲೆ ಒಬ್ಬ ಗಂಡ ಹೇಗೆ ಇರಬೇಕು ಅಂತ ಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

Source: Voot

ಮದುವೆ ಆದ ಮೇಲೆ ಒಬ್ಬ ಗಂಡ ಹೇಗಿರಬೇಕು ಅನ್ನೋದಕ್ಕೆ ಉದಾಹರಣೆ ಸಿಕ್ಕಿದೆ. ನಾನು ಫ್ಯೂಚರ್ ನಲ್ಲಿ ಮದುವೆ ಆದರೆ ನಿಮ್ಮ ತರಾ ಇರುತ್ತೇನೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಈ ಮಾತಿನಿಂದ ರಾಜಣ್ಣನಿಗೆ ತುಂಬಾ ಖುಷಿ ಆಯಿತು.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field