Flex Fuel Bike: ಇನ್ನುಮುಂದೆ ಬುಲೆಟ್ ಬೈಕ್ ಓಡಿಸಲು ಪೆಟ್ರೋಲ್ ಅಗತ್ಯ ಇಲ್ಲ, ಈ ಇಂಧನದ ಮೂಲಕ ಚಲಿಸಲಿದೆ ಬುಲೆಟ್.

Flex Fuel ನಿಂದ ಚಲಿಸುವ ಮೋಟಾರ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಈಗ ರಾಯಲ್ enfield ಮುಂದಾಗಿದೆ.

Royal Enfield Flex Fuel Motor Bike: ಭಾರತೀಯ ಆಟೋ ವಲಯದಲ್ಲಿ Royal Enfield ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಹೊಸ ಹೆಜ್ಜೆ ಇಡುತ್ತಿದೆ. ಮಾರುಕಟ್ಟೆಯಲ್ಲಿ Royal Enfield ಈಗಾಗಲೇ ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಪರಿಚಯಿಸಿದೆ.

ಇತ್ತೀಚಿಗೆ ಬಿಡುಗಡೆಗೊಂಡ ರಾಯಲ್ ಏನ್ ಫೀಲ್ಡ್ ಬುಲೆಟ್ ಬ್ಲಸ್ಟ್ , ರಾಯಲ್ ಏನ್ ಫೀಲ್ಡ್ ಹಿಮಾಲಯನ್ 450, ರಾಯಲ್ ಏನ್ ಫೀಲ್ಡ್ ಶಾರ್ಟ್ ಗನ್ 650 ಸೇರಿದಂತೆ ಇನ್ನಿತರ ನೂತನ ಮಾದರಿಯ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ.

Royal Enfield Flex Fuel Motor Bike
Image Credit: Drivespark

Royal Enfield Electric
ಇನ್ನು ಮಾರುಕಟ್ಟೆಯ್ಲಲಿ ಇತ್ತೀಚಿಗೆ ಎಲೆಕ್ಟ್ರಿಕ್ ಮಾದರಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇವೆ. ಈ ನಿಟ್ಟಿನಲ್ಲಿ ಕಂಪನಿಯು Royal Enfield Electric ಮಾದರಿಯನ್ನು ಸಹ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಹೊರಡಿಸಿದೆ. ರಾಯಲ್ ಏನ್ ಫೀಲ್ಡ್ ಬುಲೆಟ್ ಬೈಕ್ ಗಳು ಹೆಚ್ಚಿನ ಮೈಲೇಜ್ ನೀಡುತ್ತದೆ. ಯುವಕರು ಹೊಸ ಬೈಕ್ ಖರೀದಿಗೆ ಮನಸ್ಸು ಮಾಡಿದರೆ ಮೊದಲ ಆಯ್ಕೆ ರಾಯಲ್ ಏನ್ ಫೀಲ್ಡ್ ಆಗಿರುತ್ತದೆ.

ಇನ್ನು ಎಲೆಕ್ಟ್ರಿಕ್ ಮಾದರಿಯ ಕ್ರೇಜ್ ಹೆಚ್ಚಿರುವ ಕಾರಣ ಕಂಪನಿಯು ಎಲೆಕ್ಟ್ರಿಕ್ ರೂಪಾಂತರದಲ್ಲಿ ತನ್ನ ನೂತನ ಮಾದರಿಯನ್ನು ಪರಿಚಯಿಸಲು ನಿರ್ಧರಿಸಿದೆ. ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ ರೂಪಾಂತರದ ತಯಾರಿಕೆಗೆ ಕಂಪನಿ ಸಿದ್ಧತೆ ನಡೆಸುತ್ತಿದೆ. ಇನ್ನು Royal Enfield Electric ಮಾದರಿಯ ಬಿಡುಗಡೆಯ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದ್ದಂತೆ ಇದೀಗ ಕಂಪನಿಯು ಹೊಸ ಇಂಧನದೊಂದಿಗೆ ನೂತನ ಬೈಕ್ ಪರಿಚಯಿಸಲಿದೆ ಎನ್ನುವ ಬಗ್ಗೆ ವರದಿಯಾಗಿದೆ.

Royal Enfield Flex Fuel Motorcycle Launched
Image Credit: Zigwheels

Royal Enfield Flex Fuel Motor ಸೈಕಲ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Royal Enfield ಇದೀಗ Flex Fuel ಚಾಲಿತ ಮೋಟಾರ್ ವಾಹನವನ್ನು ಪರಿಚಯಿಸಲಿದೆ ಎನ್ನುವ ಬಗ್ಗೆ ವರದಿಯಾಗಿದೆ. Flex Fuel ಇಂಧನದಲ್ಲಿ ಚಲಿತವಾಗುವಂತೆ ಮಾರ್ಪಡಿಸಲಿ ಕಂಪನಿಯು Royal Enfield Classic 350 ಬೈಕ್ ಗೆ ಮೊದಲ ಆಧ್ಯತೆ ನೀಡಲಿದೆ ಎನ್ನಲಾಗುತ್ತಿದೆ.

Join Nadunudi News WhatsApp Group

ಸದ್ಯದಲ್ಲೇ Royal Enfield Flex Fuel ಚಾಲಿತ ಮೋಟಾರ್ ಬೈಕ್ ಬಿಡುಗಡೆ
ಇನ್ನು ಈ ಮೊದಲು TVS Motor ಕಂಪನಿ ಭಾರತಿಯಾ ಮಾರುಕಟ್ಟೆಯಲ್ಲಿ ತನ್ನ ಮೊದಲ Flex ಚಾಲಿತ ಇಂಧವನ್ನು ಪರಿಚಯಿಸಿದೆ. ಇದಾದ ಬಳಿಕ Honda ಕೂಡ Flex ಇಂಧನ ಚಾಲಿತ ವಾಹನವನ್ನು ಬಿಡುಗಡೆಗಡೆಗೊಳಿಸುವುದಾಗಿ ಘೋಷಿಸಿದೆ. ಈ ಇಂಧನದ ಬೆಲೆ ಕೂಡ ಕಡಿಮೆ ಆಗಿದೆ ನ್ಮಟ್ಟು ಈ ಇಂಧನದಲ್ಲಿ ಬೈಕ್ ಸುಮಾರು 45 ಕಿಲೋಮೀಟರು ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ.

Royal Enfield Flex Fuel Motor Bike
Image Credit: Hindustantimes

ಇನ್ನು ಮಾರುಕಟ್ಟೆಯಲ್ಲಿ ಸಧ್ಯದಲ್ಲೆ Royal Enfield Flex Fuel ಚಾಲಿತ ಮೋಟಾರ್ ಸೈಕಲ್ ಅನ್ನು ಕೂಡ ಪರಿಚಯಿಸಲಿದೆ. ಇನ್ನು Royal Enfield ನ Flex Fuel ಚಾಲಿತ ಮೋಟಾರ್ ಸೈಕಲ್ ಬಗ್ಗೆ ಗ್ರಾಹಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಕಂಪನಿಯು Flex Fuel ಚಾಲಿತ ಮೋಟಾರ್ ಬೈಕ್ ಬಿಡುಗಡೆಯ ಬಗ್ಗೆ ಸದ್ಯದಲ್ಲೇ ಮಾಹಿತಿ ಬಹಿರಂಗಪಡಿಸಲಿದೆ.

Join Nadunudi News WhatsApp Group