Himalayan Electric: ಬಂತು ರಾಯಲ್ Enfield ಹಿಮಾಲಯನ್ ಎಲೆಕ್ಟ್ರಿಕ್ ಬೈಕ್, ಕಡಿಮೆ ಬೆಲೆ ಮತ್ತು 350 Km ಗೂ ಅಧಿಕ ಮೈಲೇಜ್.

ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಎಲೆಕ್ಟ್ರಿಕ್ ರೂಪಾಂತರ.

Royal Enfield Himalayan Electric Bike : ಸದ್ಯ ಮಾರುಕಟ್ಟೆಯಲ್ಲಿ Royal Enfield ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಕಂಪನಿಯು ರಾಯಲ್ ಏನ್ ಫೀಲ್ಡ್ ಬುಲೆಟ್ 350 , ರಾಯಲ್ ಏನ್ ಫೀಲ್ಡ್ ಹಿಮಾಲಯನ್ 450, ರಾಯಲ್ ಏನ್ ಫೀಲ್ಡ್ ಶಾರ್ಟ್ ಗನ್ 650 ಸೇರಿದಂತೆ ಇನ್ನಿತರ ನೂತನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ Royal Enfield ಕಂಪನಿ ಹೊಸ ಅಲೆ ಸೃಷ್ಟಿಸಲು ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

Royal Enfield Himalayan Electric Bike
Image Credit: Zigwheels

ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾದ Royal Enfield
ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಚ್ಚಾ ತೈಲಗಳ ಬೆಲೆ ಗಣನೀಯ ಏರಿಕೆಯಾಗುತ್ತಿದ್ದು, ಒಂದು ವಿಧದಲ್ಲಿ ಈ ಕಚ್ಚಾ ತೈಲಗಳ ಬೆಲೆಯ ಏರಿಕೆಯ ಪರಿಣಾಮ ಇಂಧನ ಚಾಲಿತ ವಾಹನಗಳ ಮೇಲೆ ಬೀರುತ್ತಿದೆ. ಹೊಸ ವಾಹನವನ್ನು ಖರೀದಿಸಲು ಬಯಸುವವರು ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯ ವಾಹನವನ್ನು ಖರೀದಿಸುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Royal Enfield ಇದೀಗ ತನ್ನ ಮೊದಲ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಮಾರುಕಟ್ಟೆಯಲ್ಲಿ ರಾಯಲ್ ಏನ್ ಫೀಲ್ಡ್ ಎಲೆಕ್ಟ್ರಿಕ್ ರೂಪಾಂತರದ ಬರುವಿಕೆಯ ಬಗ್ಗೆ ಕಂಪನಿಯು ಮಾಹಿತಿ ನೀಡಿದೆ.

Royal Enfield Himalayan Electric Bike Mileage
Image Credit: Business Today

ಬಂತು ರಾಯಲ್ Enfield ಹಿಮಾಲಯನ್ ಎಲೆಕ್ಟ್ರಿಕ್ ಬೈಕ್
ಇತ್ತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಯ ಕ್ರೇಜ್ ಹೆಚ್ಚಿರುವಾ ಕಾರಣ ಕಂಪನಿಯು ಎಲೆಕ್ಟ್ರಿಕ್ ರೂಪಾಂತರದಲ್ಲಿ ತನ್ನ ನೂತನ ಹಿಮಾಲಯನ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಪರಿಚಯಿಸಲು ನಿರ್ಧರಿಸಿದೆ.

ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ ರೂಪಾಂತರದ ತಯಾರಿಕೆಗೆ ಕಂಪನಿ ಸಿದ್ಧತೆ ನಡೆಸುತ್ತಿದೆ. ಇನ್ನು ಕಂಪನಿಯು ತನ್ನ ರೂಪಾಂತರವನ್ನು ಬಿಡುಗಡೆ ಮಾಡಲು ಸುಮಾರು 1000 ಕೋಟಿ ರೂ. ಹೂಡಿಕೆ ಮಾಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಮುಂದಿನ 3 ವರ್ಷದಲ್ಲಿ 60 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಬೈಕ್ ಗಳನ್ನೂ ಪರಿಚಯಿಸುವ ಗುರಿಯನ್ನು ರಾಯಲ್ ಏನ್ ಫೀಲ್ಡ್ ಹೊಂದಿದೆ.

Join Nadunudi News WhatsApp Group

Royal Enfield Himalayan Electric Bike Price
Image Credit: Bikewale

350ಕ್ಕೂ ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್
ವಿಭಿನ್ನ ವಿನ್ಯಾಸದೊಂದಿಗೆ ಪರಿಚಯವಾಗಲಿರುವ Royal Enfield ಸಂಪೂರ್ಣ ವಿದ್ಯುತ್ ನಲ್ಲಿ ಚಲಿಸಲಿದೆ. ಗೋಲ್ಡನ್ ಅನ್ ಸೈಡ್ ಡೌನ್ ಫೋರ್ಕ್ ಸಸ್ಪೆನ್ಷನ್ ಮತ್ತು ಗ್ಯಾಸ್ ಚಾರ್ಜ್ಡ್ ಮೊನೊ ಸಸ್ಪೆನ್ಷನ್ ಹೊಂದಿದ್ದು, ಬೈಕ್ ನ ಎರಡೂ ಟೈರ್‌ ಗಳಲ್ಲಿ ಡಿಸ್ಕ್ ಬ್ರೇಕ್‌ ಗಳನ್ನು ನೋಡಬಹುದು. ಇನ್ನು ನೂತನ ಹಿಮಾಲಯನ್ ಎಲೆಕ್ಟ್ರಿಕ್ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲವಾದರೂ ವರದಿಯ ಮೂಲಕ ತಿಳಿದುಬಂದ ಮಾಹಿತಿಯ ಪ್ರಕಾರ ಹೊಚ್ಚ ಹೊಸ ಹಿಮಾಲಯನ್ ಎಲೆಕ್ಟ್ರಿಕ್ ಬೈಕ್ 350 ಕ್ಕೂ ಅಧಿಕ ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group