RRB Group D Recruitment: ಜೀವನದಲ್ಲಿ ಸ್ಥಿರ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಂದೊಳ್ಳೆ ಸಿಹಿ ಸುದ್ದಿ ಲಭಿಸಿದೆ. ಇದೀಗ SSLC ಪಾಸ್ ಆದವರಿಗೆ ರೈಲ್ವೆ ನೇಮಕಾತಿ ಮಂಡಳಿ (RRB) CEN 09/2025 ಅಡಿಯಲ್ಲಿ ನೇಮಕಾತಿಯನ್ನು ಘೋಷಣೆ ಮಾಡಿದೆ. ಒಟ್ಟು 22,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಹತೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ರೈಲ್ವೆ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾದ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆ ನೇಮಕಾತಿ
ಇದೀಗ ಸರ್ಕಾರೀ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್. ಸುಮಾರು 22,000 ಗ್ರೂಪ್ D (ಲೆವೆಲ್-1) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ ಮತ್ತು ಇದು Pointsman, Track maintainer ಮತ್ತು ಇತರ ತಾಂತ್ರಿಕ ಹುದ್ದೆಗಳನ್ನು ಒಳಗೊಂಡಿದೆ, ಇದಕ್ಕೆ ಕನಿಷ್ಠ 10 ನೇ ತರಗತಿ ಅಥವಾ ITI ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆ ಸಂಖ್ಯೆ CEN 09/2025 ಅಡಿಯಲ್ಲಿ ಈ ನೇಮಕಾತಿ ನೆಡೆಯಲಿದೆ.
ಹುದ್ದೆಗಳು ಮತ್ತು ಹುದ್ದೆಗಳ ಸಂಖ್ಯೆ
- Assistant (Track Machine) – 600 ಹುದ್ದೆಗಳು
- Assistant (Bridge) – 600 ಹುದ್ದೆಗಳು
- Track Maintainer Grade – IV – 11,000 ಹುದ್ದೆಗಳು
- Assistant (P-Way) – 300 ಹುದ್ದೆಗಳು
- Assistant (T.R.D) – 800 ಹುದ್ದೆಗಳು
- Assistant Loco Shed (Electrical) – 200 ಹುದ್ದೆಗಳು
- Assistant Operations (Electrical) – 500 ಹುದ್ದೆಗಳು
- Assistant (T.L. & A.C) – 500 ಹುದ್ದೆಗಳು
- Assistant (C. & W) – 1,000 ಹುದ್ದೆಗಳು
- Pointsman-B – 5,000 ಹುದ್ದೆಗಳು
- Assistant (S. & T.) – 1,500 ಹುದ್ದೆಗಳು
ಅರ್ಹತೆ
- ಭಾರತೀಯ ನಾಗರಿಕರು ಅಥವಾ ನಿರ್ದಿಷ್ಟ ನಿಯಮಗಳಡಿ ನೇಪಾಳ, ಭೂತಾನ್ ಅಥವಾ ಟಿಬೆಟ್ ನಿರಾಶ್ರಿತರು ಅರ್ಜಿ ಸಲ್ಲಿಸಬಹುದಾಗಿದೆ.
- ಮಾನ್ಯತೆ ಪಡೆದ ಬೋರ್ಡ್ ನಿಂದ 10 ನೇ ತರಗತಿ ಪಾಸ್ ಆಗಿರಬೇಕು, National Apprenticeship Certificate, ಅಥವಾ ITI ಪ್ರಮಾಣ ಪತ್ರವನ್ನು ಪಡೆದುಕೊಂಡಿರಬೇಕು.
- ಜನವರಿ 1, 2026 ರಂತೆ 18 ರಿಂದ 33 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ( SC / ST ಗೆ 5 ವರ್ಷ, OBC ಗೆ 3 ವರ್ಷ ಸಡಿಲಿಕೆ ಇದೆ )
ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಮೊದಲು https://www.rrbapply.gov.in/#/auth/landing ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
- ಅಗತ್ಯ ವಿವರವನ್ನು ಭರ್ತಿ ಮಾಡಬೇಕು
- ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
- ಕೊನೇದಾಗಿ ಶುಲ್ಕವನ್ನು ಪಾವತಿ ಮಾಡಬೇಕು
ಶುಲ್ಕ ಮತ್ತು ಸಂಬಳ
ಸಾಮಾನ್ಯ ವರ್ಗಕ್ಕೆ 500 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಹಾಗೆ ಮೀಸಲಾತಿ ವರ್ಗದವರು 250 ರೂ ಶುಲ್ಕ ಪಾವತಿಸಬೇಕು. 7ನೇ ವೇತನ ಆಯೋಗದ ಲೆವೆಲ್-1 ಪ್ರಕಾರ 18,000 ಮೂಲ ವೇತನದಿಂದ ಆರಂಭವಾಗುತ್ತದೆ. DA, HRA ಸೇರಿ ಉತ್ತಮ ಪ್ಯಾಕೇಜ್ ನೀಡಲಾಗುತ್ತದೆ. ಇನ್ನು ಜನವರಿ 21, 2026 ರಿಂದ ಅರ್ಜಿ ಆರಂಭವಾಗಿ ಫೆಬ್ರವರಿ 20, 2026 ಕ್ಕೆ ಕೊನೆಗೊಳ್ಳಲಿದೆ.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ / ಪಾನ್ ಕಾರ್ಡ್
- ವರ್ಗ ಪ್ರಮಾಣ ಪತ್ರ ( OBC , SC / ST )
- ಭಾವಚಿತ್ರ
- ಸಿಗ್ನೇಚರ್
- SSLC ಅಂಕಪಟ್ಟಿ
- ವೈದ್ಯಕೀಯ ಪ್ರಮಾಣಪತ್ರ ( PwBD ಅಭ್ಯರ್ಥಿಗಳಿಗೆ )
ಆಯ್ಕೆ ಪ್ರಕ್ರಿಯೆ
- ಮೊದಲನೇದಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ( CBT ) ಮಾಡಲಾಗುತ್ತದೆ.
- ಇದಾದ ನಂತರ Physical Efficiency Test (PET) ಮಾಡಲಾಗುತ್ತದೆ. ಇದರಲ್ಲಿ ಓಡುವುದು, ತೂಕ ಎತ್ತುವುದು ಇರುತ್ತದೆ.
- ಡಾಕ್ಯುಮೆಂಟ್ ವೆರಿಫಿಕೇಷನ್
- ಕೊನೆಯದಾಗಿ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

