RRR ಚಿತ್ರ ಬಿಡುಗಡೆಗೂ ಮುನ್ನವೇ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ, ಶಾಕಿಂಗ್ ಕಲೆಕ್ಷನ್.

ಸದ್ಯ ಭಾರತದಲ್ಲಿ ಭಾರಿ ಸುದ್ದಿಯಲ್ಲಿ ಇರುವ ಒಬ್ಬ ನಿರ್ದೇಶಕ ಅಂದರೆ ಎದ್ದು ರಾಜಮೌಳಿ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾಜಮೌಳಿ ಅವರ ಸಿನಿಮಾ ಅಂದರೆ ಜನರಿಗೆ ಬಹಳ ಇಷ್ಟವೆಂದು ಹೇಳಿದರೆ ತಪ್ಪಾಗಲ್ಲ. ಇನ್ನು ರಾಜಮೌಳಿ ಅವರು ನಿರ್ದೇಶನ ಮಾಡಿದ ಮಗಧೀರ, ಬಾಹುಬಲಿ ಚಿತ್ರಗಳು ಮಾಡಿದ ಕೆಲವು ದಾಖಲೆಯನ್ನ ಇನ್ನೂ ಕೂಡ ಯಾರಿಂದಲೂ ಮೀರಿಸಲು ಸಾಧ್ಯವಾಗಿಲ್ಲ ಎಂದು ಹೇಳಬಹುದು. ಇನ್ನು ದೇಶದಲ್ಲಿ ಒಬ್ಬ ನಟನಿಗೆ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳು ಇರುತ್ತಾರೆ ಎಂದು ನಾವು ಕೇಳಿರುತ್ತೇವೆ, ಆದರೆ ನಮ್ಮ ದೇಶದಲ್ಲಿ ಒಬ್ಬ ನಿರ್ದೇಶಕನಿಗೆ ಬಹಳ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಅದೂ ನಿರ್ದೇಶಕ ರಾಜಮೌಳಿ ಅವರಿಗೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಸದ್ಯ ಎರಡು ವರ್ಷಗಳಿಂದ ರಾಜಮೌಳಿ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ ಎಂದು ಹೇಳಬಹುದು, ಆದರೆ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಹೆಚ್ಚಿನ ಜನರು ಕಾಯುತ್ತಿರುವ ಸಿನಿಮಾ ಅಂದರೆ ಅದು RRR ಸಿನಿಮಾ ಎಂದು ಹೇಳಿದರೆ ತಪ್ಪಾಗಲ್ಲ.ಹಲವು ದಿಗ್ಗಜ ನಟರು ಇರುವ ಈ ಸಿನಿಮಾವನ್ನು ನೋಡಲು ಬರಿ ಭಾರತ ಮಾತ್ರವಲ್ಲದೆ ಬೇರೆ ದೇಶದ ಜನರು ಕಾಯುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಸದ್ಯ ಕೆಲವು RRR ಚಿತ್ರ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರು ಚಿತ್ರದ ಫೋಟೋ ಮತ್ತು ವಿಡಿಯೋಗೆ ಫಿದಾ ಆಗಿದ್ದಾರೆ ಎಂದು ಹೇಳಬಹುದು.

RRR movie collection

ಇನ್ನು ಈಗ RRR ಚಿತ್ರ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು ಜನರಿಗೆ ಶಾಕ್ ಆಗುವಂತೆ ಮಾಡಿದೆ ಎಂದು ಹೇಳಬಹುದು. ಹಾಗಾದರೆ RRR ಚಿತ್ರ ಬಿಡುಗಡೆಗೂ ಮುನ್ನವೇ ಮಾಡಿದ ಕಲೆಕ್ಷನ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ RRR ಚಿತ್ರದ, ಚಿತ್ರದ ವಿತರಣೆ, ಸ್ಯಾಟಲೈಟ್ ರೈಟ್ಸ್ ಮತ್ತು ಡಿಜಿಟಲ್ ಹಕ್ಕುಗಳನ್ನ ಪಡೆಯುವುದಕ್ಕೆ ದೊಡ್ಡ ದೊಡ್ಡ ಪೈಪೋಟಿಗಳು ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಇನ್ನು ಅಂತಿಮವಾಗಿ ಚಿತ್ರದ ಎಲ್ಲಾ ಪ್ರದೇಶಗಳ ವಿತರಣಾ ಹಕ್ಕುಗಳನ್ನ ಬರೋಬ್ಬರಿ 570 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆಯಂತೆ. ಇನ್ನು ಚಿತ್ರದ ಎಲ್ಲಾ ಅವತರಣಿಕೆಗಳ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನ 300 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆಯಂತೆ, ಇನ್ನು ಇದರ ಜೊತೆಗೆ ಆಡಿಯೋ ಸೇರಿದಂತೆ ಬೇರೆ ಹಕ್ಕುಗಳಿಂದ ಇನ್ನಷ್ಟು ಕೋಟಿಗಳು ಬಂದಿದ್ದು RRR ಚಿತ್ರ ಬಿಡುಗದೆಗೂ ಮುನ್ನವೇ ಸುಮಾರು 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಇನ್ನು ಜನರ ಅಭಿಪ್ರಾಯದ ಪ್ರಕಾರ ಚಿತ್ರ ಬಿಡುಗಡೆಗೂ ಮುನ್ನವೇ ಇಷ್ಟು ಕಲೆಕ್ಷನ್ ಮಾಡಿದೆ ಅಂದಮೇಲೆ ಚಿತ್ರ ಬಿಡುಗಡೆಯ ನಂತರ ಎಷ್ಟು ಕಲೆಕ್ಷನ್ ಮಾಡಬಹುದು ಎಂದು ನೀವೇ ಯೋಚನೆ ಮಾಡಿ. ಸ್ನೇಹಿತರೆ RRR ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

RRR movie collection

Join Nadunudi News WhatsApp Group