RRR 2: RRR ಪಾರ್ಟ್ 2 ಹೇಗಿರಲಿದೆ, RRR ಪಾರ್ಟ್ 2 ಸೀಕ್ರೆಟ್ ಹೇಳಿಕೊಂಡ ರಾಜಮೌಳಿ ತಂದೆ.
RRR ಪಾರ್ಟ್ 2 ಹೇಗಿರಲಿದೆ ಅನ್ನುವುದರ ಬಗ್ಗೆ ಮಾಹಿತಿ ನೀಡಿದ ವಿಜಯೇಂದ್ರ ಪ್ರಸಾದ್.
RRR Movie Part 2: ತೆಲುಗಿನ ಆರ್ ಆರ್ ಆರ್ ಸಿನಿಮಾ (RRR Movie) ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ರಾಮ್ ಚರಣ್ ಮತ್ತು ಜೂನಿಯರ್ ಏನ್ ಟಿ ಆರ್ ಅಭಿನಯದ ಎಸ್ ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಸಖತ್ ಹಿಟ್ ಆಗಿ ಬೇರೆ ಬೇರೆ ಭಾಷೆಯಲ್ಲಿಯೂ ಸಹ ಬಿಡುಗಡೆ ಆಗಿತ್ತು. ಆರ್ ಆರ್ ಆರ್ ಸಿನಿಮಾದ ಒಂದನೇ ಭಾಗವನ್ನು ನೋಡಿದ ಜನರು ಎರಡನೇ ಭಾಗದ ವೀಕ್ಷಣೆಗಾಗಿ ಕಾಯುತ್ತಿದ್ದಾರೆ.
ಆರ್ ಆರ್ ಆರ್ ಸಿನಿಮಾ 2
ಆರ್ ಆರ್ ಆರ್ ಸಿನಿಮಾದ ಬ್ಲಾಕ್ ಬ್ಲಸ್ಟರ್ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಒಂದು ಸಿನಿಮಾ ಸೂಪರ್ ಹಿಟ್ ಆದರೆ ಅದರ ಎರಡನೇ ಭಾಗ ಸಿದ್ದವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಆರ್ ಆರ್ ಆರ್ ಸಿನಿಮಾಗೆ ಸೀಕ್ವೆಲ್ ರೆಡಿ ಆಗಲಿದೆ ಎಂದು ಇತ್ತೀಚಿಗಷ್ಟೇ ಚಿತ್ರತಂಡ ಹೇಳಿತ್ತು. ಅದರ ಬಗ್ಗೆ ಈ ಸಿನಿಮಾದ ಲೇಖಕ ವಿಜಯೇಂದ್ರ ಪ್ರಸಾದ್ ಅವರು ಆರ್ ಆರ್ ಆರ್ ಚಿತ್ರದ ಸೀಕ್ವೆಲ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾದ ನಂತರ ನಾನು ಸೀತಾರಾಮ ರಾಜು ಮತ್ತು ಕೋರಂ ಭೀಮ್ ಜೊತೆಗೆ ಆಫ್ರಿಕಾದಲ್ಲಿ ಕಥೆಯನ್ನು ಮುಂದುವರೆಸುವ ಮುಂದಿನ ಭಾಗದ ಕಲ್ಪನೆಯನ್ನು ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.
ಆರ್ ಆರ್ ಆರ್ ಸಿನಿಮಾ ಎರಡನೇ ಭಾಗದ ಬಗ್ಗೆ ಮಾಹಿತಿ ಹಂಚಿಕೊಂಡ ವಿಜಯೇಂದ್ರ ಪ್ರಸಾದ್
RRR ಸಿನಿಮಾ 2022 ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭಿಸಿತು. ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಈ ಕಾರಣದಿಂದಲೇ ಎಲ್ಲರೂ ಆರ್ ಆರ್ ಆರ್ 2 ಸಿನಿಮಾವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
ಎಸ್ ಎಸ್ ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಅವರ ಎಸ್ ಎಸ್ ಎಂ ಬಿ 29 ನಲ್ಲಿ ನಿರತರಾಗಿದ್ದಾರೆ ಮತ್ತು ಅವರು ಚಿತ್ರವನ್ನು ಪೂರ್ಣಗೊಳಿಸಿದ ನಂತರ ಮಾತ್ರ ಮುಂದಿನ ಯೋಜನೆಯ ಬಗ್ಗೆ ಯೋಚಿಸುವುದಾಗಿ ಅವರು ತಿಳಿಸಿದ್ದಾರೆ. RRR ಸಿನಿಮಾದ ಮೊದಲ ಭಾಗದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಏನ್ ಟಿ ಆರ್ ಪ್ರಮುಖ ಪಾತ್ರ ನಿರ್ವಹಿಸುವಂತೆ ಸೀಕ್ವೆಲ್ ಬರೆಯಲಾಗಿದೆಯಂತೆ.
ಆರ್ ಆರ್ ಆರ್ ಚಿತ್ರಕ್ಕೆ ಹೋಲಿಸಿದರೆ ಮಹೇಶ್ ಬಾಬು ಅವರೊಂದಿಗಿನ ರಾಜಮೌಳಿ ಅವರ ಮುಂದಿನ ಸಿನಿಮಾ ಹೆಚ್ಚಿನ ಸಾಹಸಮಯ ಸಿನಿಮಾ ಎಂದು ವಿಜಯೇಂದ್ರ ಬಹಿರಂಗಪಡಿಸಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾಗೆ SSMB 29 ಎಂದು ಹೆಸರಿಡಲಾಗಿದೆ. ಈ ಚಿತ್ರದ ನಿರ್ಮಾಣ ಡಿಸೇಂಬರ್ 2023 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಈ ಹಿಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದರು.