RRR 2: RRR 2 ನಿರೀಕ್ಷೆಯಲ್ಲಿ ಇದ್ದವರಿಗೆ ಬೇಸರದ ಸುದ್ದಿ, ದೊಡ್ಡ ನಿರ್ಧಾರ ತಗೆದುಕೊಂಡ ರಾಜಮೌಳಿ.
RRR ಪಾರ್ಟ್ 2 ಬರುವುದು ಖಚಿತ, RRR ಪಾರ್ಟ್ 2 ನಿರ್ದೇಶನ ಯಾರು ಮಾಡುತ್ತಾರೆ.
RRR Part 2: ರಾಮ್ ಚರಣ್ ತೇಜ್ (Ram Charan Teja) ಹಾಗೂ ಜೂನಿಯರ್ ಏನ್ ಟಿಆರ್ (Jr. NTR) ಅಭಿನಯದ ಆರ್.ಆರ್.ಆರ್ ಚಿತ್ರ (RRR Movie) ಭಾರತೀಯ ಚಿತ್ರರಂಗದಲ್ಲಿ ವಿಶೇಷ ದಾಖಲೆಯನ್ನು ಬರೆದಿದೆ.
ಅತ್ಯಂತ ಶ್ರೇಷ್ಠ ಪ್ರಶಸ್ತಿಯಾದ ಆಸ್ಕರ್ ಅವಾರ್ಡ್ ಅನ್ನು ತ್ರಿಬ್ಬಲ್ ಆರ್ ಚಿತ್ರ ತನ್ನದಾಗಿಸಿಕೊಂಡಿದೆ. ಇನ್ನು RRR ಚಿಂತರದ ಎರಡನೇ ಭಾಗ ಬರುವಿಕೆಯ ಬಗ್ಗೆ ಈಗಾಗಲೇ ಸುದ್ದಿಗಳು ವೈರಲ್ ಆಗಿದ್ದವು. ಇದೀಗ RRR ಪಾರ್ಟ್ 2 ಬಗ್ಗೆ ಬಹುದೊಡ್ಡ ಅಪ್ಡೇಟ್ ಲಭಿಸಿದೆ.
RRR ಪಾರ್ಟ್ 2 ಬರುವುದು ಖಚಿತ
ರಾಜಮೌಳಿ (Rajamouli) ನಿರ್ದೇಶನದ ಆರ್. ಆರ್. ಆರ್ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೊಬ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇನ್ನು ಕೀರವಾಣಿ ನಿರ್ದೇಶನದ ಸಂಗೀತಕ್ಕೆ ಆಸ್ಕರ್ ಪಡೆದು ಹೊಸ ದಾಖಲೆ ಸೃಷ್ಟಿಸಿದೆ. ಇನ್ನು RRR ಚಿತ್ರವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದು RRR ಎರಡನೇ ಭಾಗದ ನಿರೀಕ್ಷೆಯಲ್ಲಿದ್ದರು. ಇನ್ನು RRR ಚಿತ್ರದ ಮುಂದಿನ ಭಾಗ ಬರುವ ಬಗ್ಗೆ ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಅವರು ಮಾಹಿತಿ ನೀಡಿದ್ದರು.
RRR ಪಾರ್ಟ್ 2 ನಿರ್ದೇಶನ ಯಾರು ಮಾಡಲಿದ್ದಾರೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆದ RRR ಚಿತ್ರದ ಮುಂದುವರೆದ ಭಾಗವನ್ನು ನೋಡಲು ಸಿನಿಪ್ರಿಯರು ಕುತೂಹಲರಾಗಿದ್ದರೆ. ಇದೀಗ ವಿಜೇಂದ್ರ ಪ್ರಸಾದ್ ಅವರು RRR ಪಾರ್ಟ್ 2 ಬರುವಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
“RRR ಮುಂದುವರೆದ ಭಾಗದ ಕಥೆ ಸಿದ್ಧವಾಗಿದೆ. ಆದರೆ ಈ ಸಿನಿಮಾವನ್ನು ರಾಜಮೌಳಿ ಮಾಡುತ್ತಾರಾ ಅಥವಾ ಹಾಲಿವುಡ್ ನ ನಿರ್ದೇಶಕ ಮಾಡಲಿದ್ದಾರೆ ಎನ್ನುವುದು ಅಂತಿಮವಾಗಿಲ್ಲ. ದೊಡ್ಡ ಮಟ್ಟದಲ್ಲಿಯೇ ಈ ಸಿನಿಮಾದ ನಿರ್ಮಾಣ ಮಾಡುವ ತಯಾರಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಸಿನಿಪ್ರಿಯರು RRR ಪಾರ್ಟ್ 2 ಬಗ್ಗೆ ಕುತೂಹಲರಾಗಿದ್ದು ಹೆಚ್ಚಿನ ಅಪ್ಡೇಟ್ ಗಾಗಿ ಎದುರುನೋಡುತ್ತಿದ್ದಾರೆ. ಇನ್ನು ರಾಜಮೌಳಿ ಅವರು ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಮಹೇಶ್ ಬಾಬು ಅವರ ಚಿತ್ರಕ್ಕೆ ರಾಜಮೌಳಿ ಆಕ್ಷನ್ ಕಟ್ ಹೇಳಬೇಕಿದೆ. ಈ ಕಾರಣದಿಂದ RRR ಪಾರ್ಟ್ 2 ನಿರ್ದೇಶನ ಕಷ್ಟವಾಗಿದೆ. ಹಾಲಿವುಡ್ ನಿರ್ದೇಶಕರಿಗೆ RRR ಪಾರ್ಟ್ 2 ನಿರ್ದೇಶನಕ್ಕೆ ಅವಕಾಶ ಸಿಕ್ಕರೆ ಈ ಸಿನಿಮಾದ ನಿರ್ದೇಶಕ ಬಗ್ಗೆ ಅಪ್ಡೇಟ್ ಸಿಗಲಿದೆ.