500 Rupes Notes Discontinuation Clarification: 2026 ರ ವರ್ಷ ಆರಂಭವಾಗುತ್ತಿದಂತೆ ಅನೇಕ ಹೊಸ ಹೊಸ ನಿಯಮಗಳು ದೇಶದಲ್ಲಿ ಜಾರಿಗೆ ಬಂದಿದೆ. ಈ ವರ್ಷದ ಮಾರ್ಚ್ ವೇಳೆಗೆ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಒಂದು ವದಂತಿ ಹಬ್ಬಿತ್ತು. ಈ ಮಾಹಿತಿಗೆ ಸಂಬಂಧಪಟ್ಟಂತೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ 500 ರೂಪಾಯಿ ನೋಟಿನ ಬಗ್ಗೆ ಹೊಸ ಆದೇಶ ಒಂದನ್ನು ಹೊರಡಿಸಿದೆ. ಹಾಗಾದರೆ ಮಾರ್ಚ್ ತಿಂಗಳಿಂದ 500 ರೂ ನೋಟುಗವು ರದ್ದಾಗುತ್ತಾ? ಈ ಕುರಿತಂತೆ RBI ಹೊರಡಿಸಿದ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
500 ರೂಪಾಯಿ ಬ್ಯಾನ್
2026 ರ ಹೊಸ ವರ್ಷದ ಆರಂಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಾರ್ಚ್ ವೇಳೆಗೆ 500 ರೂಪಾಯಿ ಬ್ಯಾನ್ ಆಗಲಿದೆ ಎಂದು ಒಂದು ಸುದ್ದಿ ವೈರಲ್ ಆಗಿತ್ತು. 2026 ರ ಮಾರ್ಚ್ ನಿಂದ ATM ಗಳಲ್ಲಿ 500 ರೂಪಾಯಿ ನೋಟುಗಳು ಸಿಗುವುದಿಲ್ಲ, 500 ರೂಪಾಯಿ ನೋಟುಗಳು ಚಲಾವಣೆ ನಿಲ್ಲಿಸಲಿದೆ ಎಂದು ಜನರು ಆತಂಕವನ್ನು ಹೊರಹಾಕುತ್ತಿದ್ದರು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಈ ಆತಂಕಕಾರಿ ಸುದ್ದಿಗೆ ಸ್ಪಷ್ಟನೆಯನ್ನು ಕೊಟ್ಟಿದೆ.
PIB ಸ್ಪಷ್ಟನೆ
ಪತ್ರಿಕಾ ಮಾಹಿತಿ ಬ್ಯೂರೋ ದ ಫ್ಯಾಕ್ಟ್ ಚೆಕ್ ಘಟಕವು ಈ ಹೇಳಿಕೆ ನಕಲಿ ಮತ್ತುRBI ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ ಎಂದು ಹೇಳಿಕೆ ನೀಡಿದೆ. 500 ರೂಪಾಯಿ ನೋಟುಗಳು ಇನ್ನೂ ಕಾನೂನುಬದ್ಧ ಚಲಾವಣೆಯಲ್ಲಿವೆ ಎಂದು ಫ್ಯಾಕ್ಟ್ ಚೆಕ್ ಘಟಕವು ಮಾಹಿತಿ ನೀಡಿದೆ. 2025 ರಲ್ಲಿ ಹಲವು ಬಾರಿ ಇದೇ ರೀತಿಯ ವದಂತಿಗಳು ಹರಡಿದ್ದವು. ಆದರೆ ಇದು ಸಂಪೂರ್ಣ ಸುಳ್ಳು ಎಂದು PIB ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಇದೀಗ PIB ತನ್ನ X ಅಕೌಂಟ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸ್ಫಷ್ಟನೆಯನ್ನು ನೀಡಿದೆ.
ಹಣಕಾಸು ಸಚಿವಾಲಯದ ಸ್ಪಷ್ಟನೆ
2025 ರಲ್ಲಿ RBI ಬ್ಯಾಂಕುಗಳಲ್ಲಿ ಮತ್ತು ATM ಗಳಲ್ಲಿ 100 ಮತ್ತು 200 ರೂ. ನೋಟುಗಳ ಲಭ್ಯತೆಯನ್ನು ಹೆಚ್ಚಿಸುವಂತೆ ಆದೇಶವನ್ನು ನೀಡಿತ್ತು. ಈ ಆದೇಶವನ್ನು ತಿರುತಿ 500 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆದುಹಾಕಲಾಗುತ್ತದೆ ಎಂದು ವದಂತಿಯನ್ನು ಹಬ್ಬಿಸಲಾಗಿದೆ. ಈ ಹಿಂದೆ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವರು ಕೂಡ ಸಂಸತ್‌ನಲ್ಲಿ 500 ರೂ ನೋಟುಗಳನ್ನು ಅಮಾನ್ಯಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿಕೆ ನೀಡಿದ್ದರು.
ಸಲಹೆ
ಇನ್ನು ಬಹುದಿನಗಳ ಕಾಲ 500 ರೂಪಾಯಿ ನೋಟು ನಮ್ಮ ದೈನಂದಿನ ಜೀವನದಲ್ಲಿ ಇರುತ್ತದೆ. ಸೋಶಿಯಲ್ ಮೀಡಿಯಾ ದಲ್ಲಿ ಬಂದಂತ ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ ಮತ್ತು ಬೇರೆಯವರಿಗೆ ಫೋರ್ವರ್ಡ್ ಮಾಡಬೇಡಿ. ಅಧಿಕೃತ ಮೂಲಗಳಾದ https://www.rbi.org.in/ ಅಥವಾ https://www.pib.gov.in/indexd.aspx?reg=3&lang=2 ವೆಬ್ ಸೈಟ್ ಗಳನ್ನು ಮಾತ್ರ ಪರಿಶೀಲಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

