Ads By Google

RSV Virus: ಕರೋನ ಬೆನ್ನಲ್ಲೇ ಮಕ್ಕಳಲ್ಲಿ ಕಾಣಿಸಿದೆ ಹೊಸ RSV ಸೋಂಕು, ಲಕ್ಷಣಗಳ ಬಗ್ಗೆ ಎಚ್ಚರ ಇರಲಿ.

The health department has warned parents that RSV infection has now appeared in children.
Ads By Google

RSV Virus In India: ದೇಶದಲ್ಲಿ ಮತ್ತೆ ಕರೋನ ಆರ್ಭಟ ಹೆಚ್ಚಾಗಿದೆ. ಮತ್ತೆ ಕೆಲವು ಕರೋನ ಪ್ರಕರಣಗಳು ಬೆಳಕಿಗೆ ಬಂದಿವೆ. ಜನಸಾಮಾನ್ಯರು ಮತ್ತೆ ಕರೋನ ಭೀತಿಯನ್ನು ಎದುರಿಸಬೇಕಾಗಿದೆ. ಕರೋನ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ ಹೊಸ ವೈರಸ್ ಕಂಡುಬರುತ್ತಿದೆ. ಮಕ್ಕಳಲ್ಲಿ ಹೊಸ ಸೋಂಕಿನ ಲಕ್ಷಣ ಹೆಚ್ಚಾಗಿ ಕಂಡುಬರುತ್ತಿದೆ.

Image Credit: timesofindia.indiatimes

ದೇಶದಲ್ಲಿ ಕಾಣಿಸಿಕೊಂಡಿದೆ RSV ವೈರಸ್
ಚಿಕ್ಕ ಮಕ್ಕಳಲ್ಲಿ RSV ವೈರಸ್ ಕಾಣಿಸಿಕೊಳ್ಳುತ್ತಿದೆ. ಇದು ಉಸಿರಾಟದ ಸಿನ್ಸಿಟಿಯಾಲ್ ವೈರಸ್ ನ ಸಾಂಕ್ರಾಮಿಕ ವೈರಸ್ ಆಗಿದೆ. ಈ ಸೋಂಕು ಸೋಂಕಿತ ವ್ಯಕ್ತಿಯ ಮೂಗು ಅಥವಾ ಗಂಟಲಿನಿಂದ ಹನಿಗಳ ಸಂಪರ್ಕದ ಮೂಲಕ ಈ RSV ವೈರಸ್ ಹರಡುತ್ತದೆ. ಕಲುಷಿತವಾಗಿರುವ ಸ್ಪರ್ಶಗಳ ಮೇಲ್ಮೈಗಳಿಂದ ಕೂಡ ಈ ವೈರಸ್ ಹರಡಬಹುದು.

ಆರ್ ಎಸ್ ವಿ ವೈರಸ್ ನ ಲಕ್ಷಣಗಳು
ಆರ್ ಎಸ್ ವಿ ವೈರಸ್ ವೈರಸ್ ಚಳಿಗಾಲದ ವೈರಸ್ ಆಗಿದೆ. ಕೆಮ್ಮು ಮತ್ತು ಶೀತ ಈ ಆರ್ ಎಸ್ ವಿ ವೈರಸ್ ನ ಲಕ್ಷಣಗಳಾಗಿವೆ. ಜ್ವರ, ಕೆಮ್ಮು, ಉಸಿರುಕಟ್ಟಿಕೊಳ್ಳುವ ಮೂಗು, ಗಂಟಲು ನೋವು, ಕಿವಿ ನೋವು, ತಲೆನೋವು, ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗುತ್ತದೆ. ಈ ಲಕ್ಷಣಗಳು ಕಂಡುಬಂದಲ್ಲಿ ನಿಮ್ಮ ಆರೋಗ್ಯದ ಮೇಲೆ ನಿಗಾ ವಹಿಸಬೇಕು.

Image Credit: livemint

ಆರ್ ಎಸ್ ವಿ ವೈರಸ್ ಅನ್ನು ತಡೆಗಟ್ಟುವ ವಿಧಾನ ಹೇಗೆ
ಆರ್ ಎಸ್ ವಿ ವೈರಸ್ ನಿಂದ ಮುಕ್ತಿ ಪಡೆಯಲು ಈ ಹಿಂದೆ ಪಾಲಿಸಿದ ಕರೋನ ನಿಯಮಗಳನ್ನೇ ಪಾಲಿಸಬೇಕು. ಪದೇ ಪದೇ ಕೈ ತೊಳೆಯುವುದು, ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೂರ ಇರುವುದು, ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದರಿಂದ ಸೋಂಕಿನ ಪ್ರಮಾಣವನ್ನು ತಡೆಗಟ್ಟಬಹುದು. ಅಪಾಯದಲ್ಲಿರುವ ಸೋಂಕಿತರಿಗೆ ಲಸಿಕೆ ಹಾಕಬೇಕು.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field