RTO Rules: ಹಳೆಯ ಹಾಗೂ ಹೊಸ ಹೀರೋ ಬೈಕ್ ಇದ್ದವರಿಗೆ ಸಿಹಿಸುದ್ದಿ ಕೊಟ್ಟ RTO.

Hero Splendor EV : ಈಗಾಗಲೇ ಪೆಟ್ರೋಲ್(Petrol) ಬೆಲೆ ಯಾವ ರೀತಿಯಲ್ಲಿ ಏರಿಕೆಯಾಗಿದೆ ಅನ್ನೋದು ದ್ವಿಚಕ್ರ ವಾಹನ ಬಳಕೆದಾರರಿಗೆ ತಿಳಿದಿದೆ. ಖರೀದಿ ಮಾಡೋದಕ್ಕೆ ದುಬಾರಿಯಾಗಿದ್ದರೂ ಕೂಡ ಖರೀದಿ ಮಾಡಿದ ನಂತರ ಎಲೆಕ್ಟ್ರಿಕ್ ಬೈಕುಗಳು ಅಥವಾ ಸ್ಕೂಟಿ ಗಳು ನಿಜಕ್ಕೂ ಕೂಡ ನಂತರ ಕಡಿಮೆ ಬೆಲೆಯಲ್ಲಿ ಓಡಾಡಿಸಬಹುದಾಗಿದೆ ಆದರೆ ಈಗಾಗಲೇ ಬೈಕನ್ನು ಹೊಂದಿರುವವರು ಏನು ಮಾಡುವುದು ಎಂಬುದಾಗಿ ಸಾಕಷ್ಟು ಜನರಿಗೆ ತಲೆಕೆಟ್ಟಿತ್ತು. ಆದರೆ ಈಗ ನಿಮ್ಮ ಹಳೆಯ ಬೈಕುಗಳನ್ನು ಕೂಡ ಎಲೆಕ್ಟ್ರಿಕ್ ಬೈಕುಗಳನ್ನಾಗಿ ಪರಿವರ್ತನೆ ಮಾಡಬಹುದಾಗಿದೆ.

Hero Splendor EV
Image Source: Drivespark

ಅದರಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡೋಕೆ ಹೊರಟಿರುವುದು Hero Splendor EV ಎಲೆಕ್ಟ್ರಿಕ್ ಕಿಟ್ ಬಗ್ಗೆ. ಬೈಕುಗಳಿಗೆ EV ಕಿಟ್ ಗಳನ್ನು ಅಳವಡಿಸುವಂತಹ ಕೆಲಸವನ್ನು ಪುಣೆ ಮೂಲದ GoGoA1 ಎಂತಹ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ಕಂಪನಿ, ಈ ಕೆಲಸವನ್ನು ಮಾಡಲು ಹೊರಟಿದೆ. RTO ಆಫೀಸ್ ನಿಂದ ಇದಕ್ಕೆ ಅಪ್ರುವಲ್ ಅನ್ನು ಕೂಡ ಈ ಸಂಸ್ಥೆ ಪಡೆದುಕೊಂಡಿರುವುದು ಮತ್ತೊಂದು ವಿಶೇಷವಾದ ಮಾಹಿತಿಯಾಗಿದೆ. ಈ ರೀತಿ ವಾಹನಗಳಲ್ಲಿ ಬದಲಾವಣೆಗಳನ್ನು ತರುವಂತಹ ಕೆಲಸಕ್ಕೂ ಮುಂಚೆ ಆರ್ ಟಿ ಓ ಆಫೀಸ್ ನಲ್ಲಿ ಪ್ರಮುಖವಾಗಿ ಒಪ್ಪಿಗೆಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.

GoGoA1 ಕಂಪನಿ ಈಗಾಗಲೇ 36 ಆರ್‌ಟಿಓ ಗಳಿಗಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಗಾಗಲೇ ಅಪ್ರುವಲ್ ಪಡೆದುಕೊಳ್ಳಲಾಗಿದ್ದು ಬಳಕೆ ಮಾಡುವಂತಹ ಒಪ್ಪಿಗೆಯನ್ನು ಕೂಡ ಪಡೆದುಕೊಂಡಾಗಿದೆ. ಇನ್ನು ಕನ್ವರ್ಟ್ ಆಗುವಂತಹ ಬೈಕುಗಳಿಗೆ ಗ್ರೀನ್ ನಂಬರ್ ಪ್ಲೇಟ್ ಅನ್ನು ಬಳಸಿಕೊಳ್ಳಬೇಕಾಗುತ್ತದೆ ಹಾಗೂ ನಿರ್ಧಾರವಾಗಿರುತ್ತದೆ. ಇನ್ನು ವಿಶೇಷವಾಗಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಹಾಗೂ ಮೈಲೇಜ್ ಬೈಕುಗಳ ರೂಪದಲ್ಲಿ ಕಾಣಿಸಿಕೊಳ್ಳುವಂತಹ Hero Splendor EV ಈ ತಂತ್ರಜ್ಞಾನದ ಮೂಲಕ 151 kmಗಳಿಗಿಂತಲೂ ಹೆಚ್ಚಿನ ರೇಂಜ್ ಅನ್ನು ಸಿಂಗಲ್ ಚಾರ್ಜ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ರೀತಿಯ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾಡುವಂತಹ ಈ ಕಿಟ್ ಮೂಲಕ ಕಡಿಮೆ ಬೆಲೆಯಲ್ಲಿ ವಾಹನಗಳನ್ನು ಚಲಾಯಿಸಬಹುದು ಮಾತ್ರವಲ್ಲದೆ ನಮ್ಮ ಪರಿಸರವನ್ನು ಕೂಡ ಯಾವುದೇ ಮಾಲಿನ್ಯ ಇಲ್ಲದೆ ಕಾಪಾಡಿಕೊಳ್ಳಬಹುದಾದಂತಹ ಸಾಧ್ಯತೆ ಹೆಚ್ಚಾಗುತ್ತಿದೆ.

Hero Splendor EV
Image Source: Bikewale

EV conversion kit ಅನ್ನು ಬೈಕುಗಳಲ್ಲಿ ಅಳವಡಿಸಿಕೊಳ್ಳಲು ನೀವು 35,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗಿರುತ್ತದೆ. ಇದರ ಜೊತೆಗೆ 6300 ರೂಪಾಯಿ ಜಿಎಸ್ಟಿ ಟ್ಯಾಕ್ಸ್ ಅನ್ನು ಕೂಡ ನೀವು ಕಟ್ಟಬೇಕಾಗುತ್ತೆ. ಇದರ ಜೊತೆಗೆ ನೀವು ಮೂರು ವರ್ಷಗಳ ವಾರಂಟಿಯನ್ನು ಕೂಡ ಪಡೆದುಕೊಳ್ಳುತ್ತೀರಿ. ಒಂದು ವೇಳೆ ನೀವು ಕಂಪ್ಲೀಟ್ ಬ್ಯಾಟರಿ ಪ್ಯಾಕ್ ಅನ್ನು ಕೂಡ ಅಳವಡಿಸುತ್ತೀರಿ ಎನ್ನುವಂತಹ ಆಯ್ಕೆಯನ್ನು ಹೊಂದಿದ್ದರೆ ಆ ಸಂದರ್ಭದಲ್ಲಿ ನೀವು ಇನ್ನೂ ಹೆಚ್ಚಿನ ಹಣವನ್ನು ಅಂದರೆ 95,000 ವರೆಗೂ ಕೂಡ ಖರ್ಚು ಮಾಡಬೇಕಾಗಿ ಬರುತ್ತದೆ ಎಂಬುದನ್ನು ಕೂಡ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಉತ್ತಮವಾದ ಹಾಗೂ ಕಡಿಮೆ ಬೆಲೆಯ ಮೈಲೇಜ್ ಹಾಗೂ ಹೋರಾಟಕ್ಕಾಗಿ ಖಂಡಿತವಾಗಿ ಇದು ಒಮ್ಮೆ ಹೂಡಿಕೆ ಮಾಡಿದ್ರು ಕೂಡ ನಿಮಗೆ ಸಾಕಷ್ಟು ವರ್ಷಗಳ ಕಾಲ ಅತ್ಯಂತ ಕಡಿಮೆ ಖರ್ಚಿನ ಪರಿಣಾಮವನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group