RTO Rules: ಇನ್ನುಮುಂದೆ ಇಂತಹ ವಾಹನಗಳನ್ನ ರಸ್ತೆಗೆ ತಂದರೆ ಸೀಜ್, ಜಾರಿಗೆ ಬಂತು ಹೊಸ RTO ರೂಲ್ಸ್.
ವಾಹನ ಸವಾರರಿಗೆ ಮುಖ್ಯ ಮಾಹಿತಿ, ದಾಖಲೆ ಇಲ್ಲದೆ ರೋಡಿಗಿಳಿದರೆ ದಂಡ ಖಚಿತ.
RTO Rules Changes: ವಾಹನ ಸವಾರರಿಗೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಸರ್ಕಾರದ ಹೊಸ ಹೊಸ ನಿಯಮದ ಬಗ್ಗೆ ಜನರು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸಂಚಾರ ನಿಯಮದಲ್ಲಿ ಇತ್ತೀಚಿಗೆ ಸಾರಿಗೆ ಇಲಾಖೆಯವರು ಬದಲಾವಣೆಯನ್ನು ಮಾಡಿದ್ದಾರೆ.
ಆದ್ದರಿಂದ ವಾಹನ ಸವಾರರು ಸಂಚಾರ ನಿಯಮದ ಬಗ್ಗೆ ನಿಗಾ ವಹಿಸುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ದಂಡದ ಜೊತೆ ಶಿಕ್ಷೆಯನ್ನು ಸಹ ಅನುಭವಿಸಬೇಕಾಗುತ್ತದೆ ಎಂಬ ಸೂಚನೆ ಈಗಾಗಲೇ ನೀಡಿದ್ದಾರೆ.
ವಾಹನ ಸವಾರರಿಗೆ ಹೊಸ ಮಾಹಿತಿ
ವಾಹನ ಸವಾರರಿಗೆ ಇದೀಗ ಮುಖ್ಯ ಮಾಹಿತಿಯೊಂದು ಹೊರ ಬಿದ್ದಿದೆ. ಮನೆಯಿಂದ ಗಾಡಿ ಹೊರಗೆ ತೆಗೆಯುವ ಮುನ್ನ ನಿಮ್ಮ ಡಾಕ್ಯುಮೆಂಟ್ ಚೆಕ್ ಮಾಡಿಕೊಳ್ಳುವುದು ಉತ್ತಮ. ಎಲ್ಲ ದಾಖಲೆ ಸರಿಯಿದೆ ಎನಿಸಿದರೆ ನೀವು ಹೊರಗಡೆ ನಿಮ್ಮ ವಾಹನವನ್ನು ಚಲಾಯಿಸಬಹುದು. ದಾಖಲೆ ಇಲ್ಲದೆ ರೋಡಿಗಿಳಿದರೆ ನಿಮ್ಮ ವಾಹನ ಸೀಜ್ ಆಗಬಹುದು.
ಗ್ಯಾರೆಂಟಿ ಯೋಜನೆ ಅನುಷ್ಠಾನ ಎಫೆಕ್ಟ್ ಈಗ ವಾಹನ ಸವಾರರ ಮೇಲೆ ಬಿದ್ದಿದೆ. ಸರ್ಕಾರದಿಂದ ಸಾರಿಗೆ ಇಲಾಖೆಗೆ ಬಿಗ್ ಟಾಸ್ಕ್ ನೀಡಲಾಗಿದೆ. ಆದಾಯ ಕ್ರೂಡೀಕರಣಕ್ಕೆ ಹೆಚ್ಚು ಒತ್ತು ನೀಡಿರುವ ಸರ್ಕಾರ RTO ಮೇಲೆ ಒತ್ತಡ ಹೇರಿದೆ. ಹೀಗಾಗಿ ದಂಡಂ ದಶಗುಣಂ ಸೂತ್ರಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ನಿಯಮಿತ ದಾಖಲೆ ಇಲ್ಲದೆ ರೋಡಿಗಿಳಿದರೆ ದಂಡ ಬೀಳುವುದು ಖಂಡಿತವಾಗಿದೆ.
ದಾಖಲೆ ಇಲ್ಲದೆ ರೋಡಿಗಿಳಿದರೆ ದಂಡ ಬೀಳುವುದು ಖಚಿತ
ಸಣ್ಣಪುಟ್ಟ ದಾಖಲೆಗಳು ಇಲ್ಲದೆ ಇದ್ದರು ಸಹ ದಂಡ ಹಾಕಲಿದ್ದಾರೆ. ಪ್ರತಿ ವರ್ಷ 10,500 ಕೋಟಿ ಆದಾಯ ಟಾರ್ಗೆಟ್ ಇತ್ತು. ಇದೀಗ ಗ್ಯಾರೆಂಟಿ ಎಫೆಕ್ಟ್ ನಿಂದಾಗಿ 11,500 ಕೋಟಿಗೆ ಏರಿಕೆಯಾಗಿದೆ.
ಹೆಚ್ಚುವರಿ 10,000 ಕೋಟಿ ಆದಾಯ ಸಂಗ್ರಹ ಮಾಡುವ ಟೆಂಕ್ಷನ್ ಅಧಿಕಾರಿಗಳಿಗೆ ಶುರುವಾಗಿದೆ. ಆದಾಯ ಸಂಗ್ರಹಕ್ಕೆ RTO ಇಲಾಖೆ ಬಿಗ್ ಆಪರೇಷನ್ ಮಾಡುತ್ತಿದೆ. ವರ್ಷಕ್ಕೆ 4.35 ಲಕ್ಷ ವಾಹನ ತಪಾಸಣೆ ಟಾರ್ಗೆಟ್ ಹಾಕಿಕೊಂಡಿದೆ. ಈ ಹಿಂದೆ ಸಾರಿಗೆ ಅಧಿಕಾರಿಗಳು ಪ್ರತಿ ವರ್ಷ 2.50 ಲಕ್ಷ ವಾಹನ ತಪಾಸಣೆ ಮಾಡುತ್ತಿದ್ದರು.