April 2024 Rule: ನಾಳೆಯಿಂದ ಬದಲಾಗಲಿದೆ ಈ 8 ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ.

ಏಪ್ರಿಲ್ 1 ದೇಶದಲ್ಲಿ ಬದಲಾಗಲಿದೆ ಈ 8 ನಿಯಮಗಳು

April 2024 Rule New Update: ಪ್ರಸ್ತುತ ದೇಶದಲ್ಲಿ 2024 ರ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ. ಜನವರಿ 1 ರಿಂದಲೇ ದೇಶದಲ್ಲಿ ಅನೇಕ ಹೊಸ ಹೊಸ ನಿಯಮ ಪರಿಚಯವಾಗಿದೆ. ಇನ್ನು 2024 ರ ಏಪ್ರಿಲ್ ನಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿವೆ. ಇನ್ನು ಎರಡು ದಿಂದ ಬಳಿಕ 2023-24 ರ ಹಣಕಾಸು ವರ್ಷ ಮುಗಿದು 2024 -25 ರ ಹಣಕಾಸು ವರ್ಷ ಆರಂಭವಾಗಲಿದೆ.

ಈ ಹೊಸ ಹಣಕಾಸು ವರ್ಷದ ಆರಂಭದಲ್ಲಿ ಅನೇಕ ಹಣಕಾಸೇತರ ನಿಯಮಗಳು ಬದಲಾಗಲಿವೆ. ಇದೀಗ ನಾವು ಏಪ್ರಿಲ್ 1 ರಿನಿಂದ ಬದಲಾಗುವ 8 ಪ್ರಮುಖ ನಿಯಮಗಳ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಈ ಹೊಸ ನಿಯಮಗಳು ನಿಮ್ಮ ಹಣಕಾಸು ವಹಿವಾಟಿನ ಮೇಲೆ ಪರಿಣಾಮ ಬೀರಲಿವೆ.

NPS Login New Rule
Image Credit: Informal Newz

ಏಪ್ರಿಲ್ 1 ರಿಂದ ಬದಲಾಗಲಿದೆ ಈ 8 ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ
1. NPS ಲಾಗಿನ್ ಗೆ ಹೊಸ ನಿಯಮ
ಪಿಂಚಣಿ ನಿಯಂತ್ರಣ ಸಂಸ್ಥೆNPS ಖಾತೆಗೆ ಲಾಗಿನ್ ಮಾಡುವ ನಿಯಮಗಳನ್ನು ಬದಲಾಯಿಸಿದೆ. ಇನ್ನುಮುಂದೆ NPS ಖಾತೆಗೆ ಲಾಗಿನ್ ಮಾಡಲು ಬಳಕೆದಾರರ ಐಡಿ ಮತ್ತು ಪಾಸ್‌ ವರ್ಡ್ ಜೊತೆಗೆ ಆಧಾರ್‌ ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಅಗತ್ಯವಿದೆ. ನಿಮ್ಮ ಆಧಾರ್‌ ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಇದನ್ನು ನಮೂದಿಸಿದ ನಂತರ ನೀವು NPS ಖಾತೆಗೆ ಲಾಗಿನ್ ಮಾಡಬಹುದು. ಈ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

2. SBI ಡೆಬಿಟ್ ಕಾರ್ಡ್ ಶುಲ್ಕ ಹೆಚ್ಚಳ
SBI ತನ್ನ ಡೆಬಿಟ್ ಕಾರ್ಡ್‌ ಗಳ ವಾರ್ಷಿಕ ನಿರ್ವಹಣೆ ಶುಲ್ಕವನ್ನು ಹೆಚ್ಚಿಸಿದೆ. ಈ ಶುಲ್ಕಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಏಪ್ರಿಲ್ 1 ರ ನಂತರ ಬಾಡಿಗೆ ಪಾವತಿಗೆ ರಿವಾರ್ಡ್ ಪಾಯಿಂಟ್‌ ಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್ ನೀಡಿದೆ. ಇದು ಔರಂ, ಎಸ್‌ಬಿಐ ಕಾರ್ಡ್ ಎಲೈಟ್, ಎಸ್‌ಬಿಐ ಕಾರ್ಡ್ ಪಲ್ಸ್, ಎಸ್‌ಬಿಐ ಎಲೈಟ್ ಅಡ್ವಾಂಟೇಜ್ ಮತ್ತು ಸಿಂಪ್ಲಿ SBI ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.

Yes Bank, ICICI Credit Card Rules Change
Image Credit: ABP Live

3. Yes Bank, ICICI Credit Card ನಿಯಮದಲ್ಲೂ ಬದಲಾವಣೆ
ಯೆಸ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದೆ. ತ್ರೈಮಾಸಿಕದಲ್ಲಿ ಕನಿಷ್ಠ 10,000 ರೂ. ಖರ್ಚು ಮಾಡಿದರೆ ಕ್ರೆಡಿಟ್ ಕಾರ್ಡ್ ಬಳಕೆದಾರರು ದೇಶೀಯ ವಿಮಾನ ನಿಲ್ದಾಣದ ಲಾಂಜ್ ಪ್ರವೇಶವನ್ನು ಪಡೆಯುತ್ತಾರೆ. ಈ ಸೌಲಭ್ಯವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಇನ್ನು ದೇಶದ ಪ್ರಮುಖ ಖಾಸಗಿ ಬ್ಯಾಂಕ್ ICICI ತನ್ನ ಗ್ರಾಹಕರಿಗೆ ಒಂದು ತ್ರೈಮಾಸಿಕದಲ್ಲಿ 35,000 ರೂ. ವರೆಗೆ ವೆಚ್ಚದಲ್ಲಿ ಕಾಂಪ್ಲಿಮೆಂಟರಿ ಏರ್ಪೋರ್ಟ್ ಲಾಂಜ್ ಪ್ರವೇಶವನ್ನು ನೀಡುತ್ತಿದೆ. ಈ ಎರಡೂ ಬದಲಾವಣೆಗಳು ಏಪ್ರಿಲ್ 1 ಜಾರಿಗೆ ಬರಲಿವೆ.

Join Nadunudi News WhatsApp Group

4. EPFO ನಿಯಮದಲ್ಲಿ ಬದಲಾವಣೆ
ಹೊಸ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿಯು ಏಪ್ರಿಲ್ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ, ನೀವು ಉದ್ಯೋಗವನ್ನು ಬದಲಾಯಿಸಿದರೆ ನಿಮ್ಮ ಹಳೆಯ ಪಿಎಫ್ ಅನ್ನು ಆಟೋ ಮೋಡ್‌ ಗೆ ವರ್ಗಾಯಿಸಲಾಗುತ್ತದೆ. ಅಂದರೆ, ಉದ್ಯೋಗವನ್ನು ಬದಲಾಯಿಸುವಾಗ ನೀವು ಪಿಎಫ್ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಅಗತ್ಯವಿಲ್ಲ. ಹೊಸ ಆರ್ಥಿಕ ವರ್ಷದಿಂದ ಈ ಅವ್ಯವಸ್ಥೆ ಕೊನೆಗೊಳ್ಳಲಿದೆ.

ITR Update
Image Credit: Indiafilings

5. ಐಟಿಆರ್ ನವೀಕರಣ
ನಿಮ್ಮ ಐಟಿಆರ್‌ ನಲ್ಲಿ ಯಾವುದೇ ವಿವರಗಳನ್ನು ನವೀಕರಿಸಲು ನೀವು ತೆರಿಗೆದಾರರಾಗಿದ್ದರೆ, ಆದಾಯ ತೆರಿಗೆ ರಿಟರ್ನ್ (ಐಟಿಆರ್ ಅಪ್‌ಡೇಟ್) ಅನ್ನು ಮಾರ್ಚ್ 31 ರೊಳಗೆ ಸಲ್ಲಿಸಬೇಕು. ನೀವು 2020-21 ಹಣಕಾಸು ವರ್ಷಕ್ಕೆ (AY 2021-22) ಇದರ ಮೂಲಕ ನವೀಕರಿಸಿದ ರಿಟರ್ನ್‌ ಗಳನ್ನು ಸಲ್ಲಿಸಬಹುದು.

ಈ ಹಣಕಾಸು ವರ್ಷದಲ್ಲಿ ರಿಟರ್ನ್ಸ್ ಸಲ್ಲಿಸದ ಅಥವಾ ತಮ್ಮ ಆದಾಯದ ಭಾಗವನ್ನು ತೋರಿಸಲು ಸಾಧ್ಯವಾಗದ ಅಥವಾ ತಮ್ಮ ಆದಾಯ ತೆರಿಗೆ ರಿಟರ್ನ್‌ನಲ್ಲಿ ಕೆಲವು ತಪ್ಪು ವಿವರಗಳನ್ನು ಸಲ್ಲಿಸಿದ ತೆರಿಗೆದಾರರು ಮಾರ್ಚ್ 31 ರ ಮೊದಲು ಆದಾಯ ತೆರಿಗೆ ಪೋರ್ಟಲ್‌ ಗೆ ಭೇಟಿ ನೀಡಬೇಕು ಮತ್ತು ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸಬೇಕು.

6. FASTag KYC
ನೀವು ಬ್ಯಾಂಕ್‌ ನಿಂದ ನಿಮ್ಮ ಕಾರಿನ ಫಾಸ್ಟ್‌ ಟ್ಯಾಗ್‌ ನ KYC ಅನ್ನು ನವೀಕರಿಸದಿದ್ದರೆ ಏಪ್ರಿಲ್ 1 ರಿಂದ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ FASTag ನ KYC ಅನ್ನು ನೀವು ಮಾಡದಿದ್ದರೆ ಇಂದೇ ಮಾಡಿ. ಏಕೆಂದರೆ ಮಾರ್ಚ್ 31 ರ ನಂತರ ಬ್ಯಾಂಕ್ FASTag ಅನ್ನು ನಿಷ್ಕ್ರಿಯಗೊಳಿಸುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದಾದ ನಂತರ ಫಾಸ್ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇದ್ದರೂ ಹಣ ಪಾವತಿಯಾಗುವುದಿಲ್ಲ.

Fastag New Rules
Image Credit: Aajtak

7. ಔಷಧಿಗಳ ಬೆಲೆಯಲ್ಲಿ ಹೆಚ್ಚಳ
ಭಾರತೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ (NLEM) ಅಡಿಯಲ್ಲಿ ಕೆಲವು ಅಗತ್ಯ ಔಷಧಿಗಳ ಬೆಲೆಯಲ್ಲಿ ವಾರ್ಷಿಕ ಶೇಕಡಾವಾರು 0.0055 ರಷ್ಟು ಹೆಚ್ಚಳ ಘೋಷಿಸಲಾಗಿದೆ. ಈ ಕಾರಣದಿಂದಾಗಿ ನೋವು ನಿವಾರಕಗಳು, ಇಮ್ಯುನಿಟಿ ಬೂಸ್ಟರ್‌ ಗಳು ಮತ್ತು ಸೋಂಕು ನಿವಾರಕಗಳು ಸೇರಿದಂತೆ ಹಲವು ಅಗತ್ಯ ಔಷಧಿಗಳ ಬೆಲೆಗಳು ಏಪ್ರಿಲ್ 1 2024 ರಿಂದ ಹೆಚ್ಚಾಗಲಿವೆ.

8. ವಿಮಾ ನಿಯಮದಲ್ಲಿ ಬದಲಾವಣೆ
ಏಪ್ರಿಲ್ 1ರಿಂದ ವಿಮಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ. IRDAI ನಿಯಮಗಳನ್ನು ಬದಲಾಯಿಸುವ ಮೂಲಕ ಸರೆಂಡರ್ ಮೌಲ್ಯದ ನಿಯಮಗಳನ್ನು ಬದಲಾಯಿಸಿದೆ. ಇನ್ನು ಮುಂದೆ ಗ್ರಾಹಕರು ಪಾಲಿಸಿಯನ್ನು ಎಷ್ಟು ತಡವಾಗಿ ಸರೆಂಡರ್ ಮಾಡುತ್ತಾರೋ ಅಷ್ಟು ಸರೆಂಡರ್ ಮೌಲ್ಯವು ಹೆಚ್ಚಾಗುತ್ತದೆ.

Medicine Price Hike
Image Credit: Scroll

Join Nadunudi News WhatsApp Group