May 2023: ಮೇ 1 ರಿಂದ ಬದಲಾಗಲಿದೆ ಹಲವು ನಿಯಮಗಳು, ಜನರ ಜೇಬಿಗೆ ಬೀಳಲಿದೆ ಕತ್ತರಿ.

ಮೇ ತಿಂಗಳಲ್ಲಿ ಹಲವು ನಿಯಮಗಳು ಬದಲಾಗಲಿದ್ದು ಜನರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.

New Rule From May 1: ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ (New Financial Year) ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿವೆ. ಈ ಬಾರಿಯ ಹಣಕಾಸು ವರ್ಷವೂ ಬಾರಿ ಹಣದುಬ್ಬರದ ಪರಿಸ್ಥಿಯನ್ನು ನೀಡಿದೆ.

ಇನ್ನು ಹಣಕಾಸು ವರ್ಷದ ಆರಂಭದ ಕಾರಣ ಹಣಕಾಸು ವ್ಯವಹಾರಗಳು ಸಾಕಷ್ಟು ಬದಲಾಗಿವೆ. ಇನ್ನು ಮೇ 1 ರಿಂದ ಕೂಡ ಅನೇಕ ನಿಯಮಗಳು ಬದಲಾಗಲಿವೆ. ಮೇ ಆರಂಭದಿಂದ ಯಾವ ಯಾವ ನಿಯಮಗಳಲ್ಲಿ ಬದಲಾವಣೆ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

There will be many changes in the financial sector in May.
Image Credit: freepik

ಮೇ 1 ರಿಂದ ಬದಲಾಗಲಿದೆ ಹಲವು ನಿಯಮಗಳು
*ಮೇ 1 ರಿಂದ GST ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಇನ್ನು ವ್ಯವಹಾರಗಳು ಹೊಸ ನಿಯಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಯಾವುದೇ ವಹಿವಾಟಿನ ಸ್ವೀಕೃತಿಯನ್ನು ಇನ್ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ 7 ದಿನದೊಳಗೆ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ.

*ಇನ್ನು ಬ್ಯಾಟರಿ ಚಾಲಿತ ಪ್ರವಾಸಿ ವಾಹನಗಳಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ನಿಯಮಗಳನ್ನು ಬದಲಾಯಿಸಿದೆ. ಬ್ಯಾಟರಿ ವಾಹನಗಳಿಗೆ ಯಾವುದೇ ಪರವಾನಗಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಈ ನಿಯಮದ ಪ್ರಕಾರ, ಎಲೆಕ್ಟ್ರಿಕ್, ಎಥೆನಾಲ್ ಮತ್ತು ಮೆಥನಾಲ್ ನಲ್ಲಿ ಚಲಿಸುವ ಪ್ರವಾಸಿ ವಾಹನಗಳಿಗೆ ವಿನಾಯಿತಿ ಸಿಗುತ್ತದೆ.

There will be changes in many rules including GST in May and it is important for people to pay attention to the changed rules for doing business.
Image Credit: financialexpress

*ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇ 1 ರಿಂದ ಹೊಸ ನಿಯಮವನ್ನು ಜಾರಿಗೊಳಿಸಿದೆ. ಖಾತೆಯಲ್ಲಿ ಹಣವಿಲ್ಲದಿದ್ದರೆ, ಎಟಿಎಂ ವಹಿವಾಟಿನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ಶುಲ್ಕವನ್ನು ವಿಧಿಸಲಾಗುತ್ತದೆ. ನಗದು ವಹಿವಾಟುಗಳ ಮೇಲೆ 10 ರೂ. GST ವಿಧಿಸಲಾಗುತ್ತದೆ.

Join Nadunudi News WhatsApp Group

*ಮೇ 1 ರಿಂದ ಗ್ಯಾಸ್ ಬೆಲೆ ಹಾಗೂ ಕಚ್ಚಾ ತೈಲಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಸರ್ಕಾರೀ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆಗಳ ದರವನ್ನು ಹೆಚ್ಚಿಸಲಿದೆ.

Join Nadunudi News WhatsApp Group