November Rule: ನವೆಂಬರ್ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬು ಖಾಲಿಯಾಗುವುದು ಖಚಿತ.
ನವೆಂಬರ್ 1 ರಿಂದ ಹಲವು ನಿಯಮಗಳು ಬದಲಾಗಲಿದ್ದು ಜನರ ಮೇಲೆ ನೇರ ಪರಿಣಾಮ ಬೀರಲಿದೆ.
New Rule From November 1st: ಸದ್ಯ ದೇಶದಲ್ಲಿ ಪ್ರತಿ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗುವುದು ಸಾಮಾನ್ಯ. ಸದ್ಯ ಇಂದು October 2023 ರ ಕೊನೆಯ ದಿನದಲ್ಲಿದ್ದೇವೆ. ನಾಳೆಯಿಂದ 2023 ರ November ತಿಂಗಳು ಆರಂಭವಾಗಲಿದೆ. ಈ ಹಿಂದೆ ಪ್ರತಿ ತಿಂಗಳು ಬದಲಾಗುತ್ತಿರುವ ನಿಯಮದ ಜೊತೆಗೆ November ತಿಂಗಳಿನಲ್ಲಿ ಕೂಡ ಅನೇಕ ನಿಯಮಗಳು ಬದಲಾಗುತ್ತದೆ.
ಬದಲಾವಣೆ ಆಗಿರುವ ಎಲ್ಲ ನಿಯಮಗಳನ್ನು ತಿಳಿದು ವ್ಯವಹಾರ ಮಾಡುವುದು ಉತ್ತಮ. ನಿಯಮದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ತಿಳಿದಿಲ್ಲದಿದ್ದರೆ ಗ್ರಾಹಕರು ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಬಹುದು. ಸದ್ಯ November 1 ರಿಂದ ಯಾವ ಯಾವ ನಿಯಮಗಳು ಬದಲಾಗಲಿವೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ನವೆಂಬರ್ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು
*Gas Cylinder Price
ಪ್ರತಿ ತಿಂಗಳ ಮೊದಲನೆಯ ದಿನ Gas Cylinder ಬೆಲೆ ಪರಿಷ್ಕರಣೆ ಆಗುತ್ತದೆ. ತಿಂಗಳ ಮೊದಲ ದಿನದಂದು ನಿಗದಿಪಡಿಸಲಾದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತಿಂಗಳು ಪೂರ್ತಿ ಅದೇ ಬೆಲೆಯಲ್ಲಿ ನಿಭಾಯಿಸಲಾಗುತ್ತದೆ. ಈ ತಿಂಗಳ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚು ಮಾಡಬಹುದು. October ನಲ್ಲಿ 209 ರೂ. ಗ್ಯಾಸ್ ಬೆಲೆಯಲ್ಲಿ ಹೆಚ್ಚಳವಾಗಿರುವ ಕಾರಣ ಈ ಬಾರಿ ಗ್ಯಾಸ್ ಬೆಲೆ ಇಳಿಕೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನಸಾಮಾನ್ಯರು ಕಾಯುತ್ತಿದ್ದಾರೆ ಎನ್ನಬಹುದು.
*GST Rule Change
National Informatics Center (NIC) ಪ್ರಕಾರ, Rs 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳು ನವೆಂಬರ್ 1 ರಿಂದ 30 ದಿನಗಳಲ್ಲಿ ಇ- ಚಲನ್ ಪೋರ್ಟಲ್ ನಲ್ಲಿ GST ಚಲನ್ ಅನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. GST ಪ್ರಾಧಿಕಾರವು ಸೆಪ್ಟೆಂಬರ್ ನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿತು.
*Importation Deadline
HSN 8741 ವರ್ಗದ ಅಡಿಯಲ್ಲಿ ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು, ಪರ್ಸನಲ್ ಕಂಪ್ಯೂಟರ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಆಮದುಗಳಿಗೆ ಅಕ್ಟೋಬರ್ 30 ರ ವರೆಗೆ ಸರ್ಕಾರ ವಿನಾಯಿತಿ ನೀಡಿತ್ತು. ಆದರೆ ನವೆಂಬರ್ 1 ರಿಂದ ಈ ನಿಯಮಗಳು ಬದಲಾಗಲಿವೆ.
*Transaction Fee
Bombay Stock Exchange ಅಂದರೆ BSE ಅಕ್ಟೋಬರ್ 20 ರಂದು ಈಕ್ವಿಟಿ ಡೆರಿವೇಟಿವ್ಸ್ ವಿಭಾಗದ ವಹಿವಾಟು ಶುಲ್ಕವನ್ನು ನವೆಂಬರ್ 1 ರಿಂದ ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಬದಲಾವಣೆಗಳನ್ನು S ಮತ್ತು P BSE ಸೆನೆಕ್ಸ್ ಆಯ್ಕೆಗಳಲ್ಲಿ ಅನ್ವಯಿಸಲಾಗುತ್ತದೆ. November 1 ರಿಂದ ವಹಿವಾಟುಗಳ ಮೇಲಿನ ಶುಲ್ಕದಲ್ಲಿ ಬದಲಾವಣೆ ಆಗಲಿದೆ.