July Rules: ಜುಲೈ 1 ರಿಂದ ಬದಲಾಗಲಿದೆ ಈ 5 ನಿಯಮಗಳು

ಜೂಲೈ ತಿಂಗಳಲ್ಲಿ ಹಲವು ನಿಯಮಗಳು ಬದಲಾಗಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ.

New Rule From July: ಇದೀಗ 2023 ರ ಜೂನ್ ತಿಂಗಳು ಅಂತ್ಯದಲ್ಲಿದೆ. ಇನ್ನು ಕೇವಲ ಎರಡು ದಿನಗಳಲ್ಲಿ ಜುಲೈ (July) ತಿಂಗಳು ಆರಂಭಗೊಳ್ಳಲಿದೆ. ಜುಲೈ ತಿಂಗಳ ಆರಂಭಕ್ಕೂ ಮುನ್ನ ಜುಲೈ ತಿಂಗಳಿನಲ್ಲಿ ಆಗುವ ನಿಯಮಗಳ ಬಗ್ಗೆ ಸಾಕಷ್ಟು ಸೂಚನೆಗಳನ್ನು ನೀಡಲಾಗಿತ್ತು. ಇನ್ನು ಏಪ್ರಿಲ್, ಮೇ, ಜೂನ್ ನಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ.

ಜುಲೈ 1 ರಿಂದ ಬದಲಾಗಲಿದೆ ನಿಯಮಗಳು
ಇನ್ನು ಜುಲೈ ತಿಂಗಳ ಆರಂಭದಲ್ಲಿಯೇ ಸಾಕಷ್ಟು ನಿಯಮಗಳು ಬದಲಾಗಲಿವೆ. ಕಚ್ಚಾ ತೈಲಗಳ ಬೆಲೆಯಿಂದ ಹಿಡಿದು ತೆರಿಗೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗಲಿವೆ. ಇನ್ನು ಜುಲೈ 1 ರಿಂದ ಈ ಐದು ನಿಯಮಗಳು ಬದಲಾಗಲಿವೆ. ಇದೀಗ ಜುಲೈ ಆರಂಭದಲ್ಲಿ ಯಾವ ಯಾವ ನಿಯಮಗಳು ಬದಲಾಗಲಿವೆ ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

*ಕಚ್ಚಾ ತೈಲಗಳು ಹಾಗೂ ಗ್ಯಾಸ್ ಬೆಲೆಯಲ್ಲಿ ಬದಲಾವಣೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಇನ್ನು ಸರ್ಕಾರೀ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪರಿಷ್ಕರಿಸುತ್ತವೆ. ಇನ್ನು ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಆಗುವುದು ಕಡ್ಡಾಯವಾಗಿದೆ.

New Rule From July
Image Source: India Today

ಕಳೆದ ಎರಡು ತಿಂಗಳಿನಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಕಾರಣಕ್ಕೆ ಜುಲೈ ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

*ಬ್ಯಾಂಕ್ ರಾಜ ದಿನಗಳ ವಿವರ
ಇನ್ನು ಜುಲೈನಲ್ಲಿ 15 ದಿನಗಳು ಬ್ಯಾಂಕ್ ಗಳಿಗೆ ರಜಾ ಇರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ತಿಂಗಳ ಪ್ರತಿ ಭಾನುವಾರ ಸೇರಿದಂತೆ ಹದಿನೈದು ದಿನಗಳ ಕಾಲ ಗ್ರಾಹಕರು ಬ್ಯಾಂಕ್ ಸೇವೆಯಿಂದ ವಂಚಿತರಾಗಬೇಕಾಗಿದೆ. ಇನ್ನು ಬ್ಯಾಂಕ್ ರಜಾ ದಿನದಂದು ಆನ್ಲೈನ್ ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಲಭ್ಯವಿರುತ್ತದೆ.

Join Nadunudi News WhatsApp Group

New Rule From July
Image Source: News18

*ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ
ಇನ್ನು ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಲು TCS ಅನ್ನು ಅನ್ವಯಿಸಲಾಗಿದೆ. ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಗಳ ಮೇಲೆ TCS ಅನ್ವಯಿಸುತ್ತದೆ.ಈ ಹೊಸ ನಿಯಮದಡಿ 7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಮೇಲೆ 20 ಪ್ರತಿಶತದವರೆಗೆ TCS ಶುಲ್ಕವನ್ನು ವಿಧಿಸಲಾಗುತ್ತದೆ. ಶಿಕ್ಷಣ ಮತ್ತು ವೈದ್ಯಕೀಯಕ್ಕಾಗಿ ಈ ಶುಲ್ಕವನ್ನು 5 ಪ್ರತಿಶತಕ್ಕೆ ಇಳಿಸಲಾಗುತ್ತದೆ.

*ತೆರಿಗೆ ಪಾವತಿದಾರರಿಗೆ ಈ ನಿಯಮ ಅನ್ವಯ
ಜುಲೈ ನಲ್ಲಿ ಐಟಿ ರಿಟರ್ನ್ ಸಲ್ಲಿಕೆಯಲ್ಲಿ ಕೂಡ ಅನೇಕ ನಿಯಮಗಳು ಬದಲಾಗಿವೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು.

New Rule From July
Image Source: India Today

*ಪಾದರಕ್ಷೆ ಕಂಪನಿಗಳಿಗೆ QCO ಕಡ್ಡಾಯ
ಕಳಪೆ ಗುಣಮಟ್ಟದ ಪಾದರಕ್ಷೆ ಮಾರಾಟವನ್ನು ನಿಷೇಧಿಸಲು ಸರ್ಕಾರ ಪಾದರಕ್ಷೆ ಕಂಪನಿಗಳಿಗೆ QCO ಅನ್ನು ಕಡ್ಡಾಯಗೊಳಿಸಿದೆ. ಪಾದರಕ್ಷೆ ಕಂಪನಿಗೂ ಈ ನಿಯಮದ ಪ್ರಕಾರ ಇನ್ನುಮುಂದೆ ಶೂ ಮತ್ತು ಚಪ್ಪಲಿಗಳನ್ನು ತಯಾರಿಸಬೇಕಾಗುತ್ತದೆ. ಜುಲೈ 1 ರಿಂದ ಪಾದರಕ್ಷೆ ಕಂಪನಿಗಳಿಗೆ QCO ಅನ್ವಯವಾಗಲಿದೆ.

Join Nadunudi News WhatsApp Group