Rules End: ಈ ನಾಲ್ಕು ಕೆಲಸ ಮಾಡಲು ಸೆ 30 ಕೊನೆಯ ದಿನಾಂಕ, ಮಾಡದಿದ್ದರೆ ನಿಮ್ಮ ವ್ಯವಹಾರ ಸಂಪೂರ್ಣ ಸ್ಥಗಿತ.
ಸೆ 30 ರ ಒಳಗೆ ಈ ಕೆಲಸಗಳನ್ನ ಮಾಡದೆ ಇದ್ದರೆ ಹಣಕಾಸು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ.
September 30 Last Date: ದಿನಗಳು ಉರುಳಿದಂತೆ ದೇಶದಲ್ಲಿ ಅನೇಕ ಯೋಜನೆಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಕೆಲವು ಮೇಜರ್ ಸರ್ಜರಿಯನ್ನ ಮಾಡಲಾಗುತ್ತಿದೆ ಎಂದು ಹೇಳಬಹುದು. ಕೆಲಸ ಇನ್ನಷ್ಟು ಸುಲಭ ಆಗಲಿ ಅನ್ನುವ ಉದ್ದೇಶದಿಂದ ದೇಶದಲ್ಲಿ ಅನೇಕ ನಿಯಮಗಳಲ್ಲಿ ಮತ್ತು ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಸದ್ಯ ಆಗಸ್ಟ್ ಕಳೆದು ಸೆಪ್ಟೆಂಬರ್ ತಿಂಗಳು ನಾವು ಇದ್ದಿವಿ, ಇದರ ನಡುವೆ ಈಗ ಸೆಪ್ಟೆಂಬರ್ ತಿಂಗಳ ಅಂತ್ಯದ ಒಳಗ ನಾವು ಈ ಕೆಲಸಗಳನ್ನ ಅಗತ್ಯವಾಗಿ ಕಾಡುವುದು ಅನಿವಾರ್ಯ ಆಗಿದೆ ಎಂದು ಹೇಳಬಹುದು. ಸೆಪ್ಟೆಂಬರ್ 30 ರ ಒಳಗೆ ನಾವು ಈ ಕೆಲವು ಕೆಲಸಗಳನ್ನ ಮಾಡದೆ ಇದ್ದರೆ ಹಣಕಾಸು ಮತ್ತು ವ್ಯವಹಾರಿಕವಾಗಿ ಸಮಸ್ಯೆಯನ್ನ ಅನುಭವಿಸಬೇಕಾಗುತ್ತದೆ.
ಉಳಿತಾಯ ಯೋಜನೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ
ಇತ್ತೀಚಿನ ದಿನಗಳಲ್ಲಿ ಜನರು ಉಳಿತಾಯವನ್ನ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಅಂಚೆ ಕಚೇರಿ ಮತ್ತು ಇತರೆ ಹಣಕಾಸು ಕ್ಷೇತ್ರದಲ್ಲಿ ಜನರು ಹೆಚ್ಚು ಹೆಚ್ಚು ಉಳಿತಾಯ ಮಾಡುವುದನ್ನು ನಾವು ಗಮನಿಸಬಹುದು. ಇದರ ನಡುವೆ ಈಗ ಕೇಂದ್ರ ಸರ್ಕಾರ ಅಂಚೆ ಕಚೇರಿ ಮತ್ತು ಇತರೆ ಬ್ಯಾಂಕುಗಳಲ್ಲಿ ಸಣ್ಣ ಉಳಿತಾಯ ಮಾಡುವವರಿಗೆ ಆದೇಶವನ್ನ ಹೊರಡಿಸಿದ್ದು ಸೆಪ್ಟೆಂಬರ್ 30 ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಳಿತಾಯ ಖಾತೆಗೆ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. (Aadhar Card Link To Saving Account)
SBI ನಲ್ಲಿ FD ಹೂಡಿಕೆ ಮಾಡಿದರೆ ಕೊನೆಯ ಅವಕಾಶ
ದೇಶದ ಹಿರಿಯ ನಾಗರೀಕರಿಗಾಗಿ SBI ಹೊಸದಾದ FD ಯೋಜನೆಯನ್ನ ಜಾರಿಗೆ ತಂದಿದೆ, SBI Wecare FD Scheme ನಲ್ಲಿ ಹೂಡಿಕೆ ಮಾಡಲು ಸೆಪ್ಟೆಂಬರ್ 30 ದಿನಾಂಕ ಆಗಿದ್ದು ಜನರು ಈ ದಿನಾಂಕದ ಒಳಗೆ ಹೂಡಿಕೆ ಮಾಡುವುದು ಅತ್ಯವಶ್ಯಕ ಕೂಡ ಆಗಿದೆ. ಈ ಯೋಜನೆ ದೇಶದ ಹಿರಿಯ ನಾಗರೀಕರಿಗಾಗಿ ಜಾರಿಗೆ ತಂದ ಯೋಜನೆ ಆಗಿದ್ದು ಸೆಪ್ಟೆಂಬರ್ 30 ರ ಒಳಗಾಗಿ ದೇಶದ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
2000 ರೂ ಬ್ಯಾಂಕಿಗೆ ಸಲ್ಲಿಸಲು ಕೊನೆಯ ಗಡುವು
ಹೌದು ದೇಶದಲ್ಲಿ RBI 200 ರೂಪಾಯಿ ನೋಟುಗಳನ್ನ ಅಮಾನ್ಯ ಮಾಡಿದ್ದು ಜನರು ಸೆಪ್ಟೆಂಬರ್ 30 ರ ಒಳಗಾಗಿ ತಮ್ಮ ಬಳಿ ಇರುವ ಎಲ್ಲಾ 2000 ರೂಪಾಯಿ ನೋಟುಗಳನ್ನ ಬ್ಯಾಂಕಿಗೆ ಮರಳಿ ನೀಡುವಂದೆ ಆದೇಶವನ್ನ ಹೊರಡಿಸಿದೆ. ಸೆಪ್ಟೆಂಬರ್ 30 ರ ನಂತರ ನೀವು ಬ್ಯಾಂಕಿಗೆ ಹಣವನ್ನ ಮರಳಿ ನೀಡದೆ ಇದ್ದರೆ ನಿಮ್ಮ 2000 ರೂಪಾಯಿ ನೋಟಿಗೆ ಯಾವುದೇ ಬೆಲೆ ಇರುವುದಿಲ್ಲ. ಸದ್ಯ ನೋಟುಗಳನ್ನ ವಿನಿಮಯ ಮಾಡಲು ಸೆಪ್ಟೆಂಬರ್ 30 ಕೊನೆಯ ಗಡುವು ಆಗಿದೆ.
ಡಿಮ್ಯಾಟ್ ಮತ್ತು ಮ್ಯೂಚುಯಲ್ ಫಂಡ್ ನಾಮನಿರ್ದೇಶನ
ಹೌದು ಡಿಮ್ಯಾಟ್ ಮತ್ತು ಮ್ಯೂಚುಯಲ್ ಫಂಡ್ ಹೂಡಿಕೆದಾದರೂ ತಮ್ಮ ಖಾತೆಯ ನಾಮನಿರ್ದೇಶನ ಮಾಡಲು ಅಥವಾ ನಾಮನಿರ್ದೇಶನದಿಂದ ಹೊರಗೆ ಉಳಿಯಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ಆಗಿದೆ. ನೀವು ಇನ್ನು ತಮ್ಮ ಖಾತೆಯಲ್ಲಿ ನಾಮನಿರ್ದೇಶನವನ್ನ ಮಾಡದೆ ಇದ್ದರೆ ಈಗಲೇ ಮಾಡಿಕೊಳ್ಳುವುದು ಅತ್ಯವಶ್ಯಕ ಕೂಡ ಆಗಿರುತ್ತದೆ.