Fake Notes: ಬ್ಯಾಂಕಿಗೆ 2000 ರೂ ನೋಟುಗಳನ್ನ ಕೊಡುವಾಗ ಎಚ್ಚರ, ನಿಮ್ಮ ಮೇಲೆ ಬೀಳಲಿದೆ ಕೇಸ್.
2000 ರೂಪಾಯಿ ನಕಲಿ ನೋಟುಗಳು ಹರಿದಾಡುತ್ತಿದ್ದು ಅಂತಹ ನೋಟುಗಳನ್ನ ನೀವು ಬ್ಯಾಂಕಿಗೆ ನೀಡಿದರೆ ನಿಮ್ಮ ಮೇಲೆ ದೂರು ದಾಖಲಾಗುತ್ತದೆ.
2000 Rupees Fake Note: ಇದೀಗ ದೇಶದಲ್ಲೆಡೆ 2,000 ಮುಖಬೆಲೆಯ ನೋಟ್ ಬ್ಯಾನ್ (2000 Note Ban) ಆದ ವಿಚಾರಗಳು ಸಾಕಷ್ಟು ವೈರಲ್ ಆಗುತ್ತಿದೆ. ಈ ಹಿಂದೆ ಮೋದಿ ಸರ್ಕಾರ 2016 ರಲ್ಲಿ ನೋಟ್ ಬ್ಯಾನ್ ಮಾಡಿದ್ದು ಈ ವೇಳೆ ಹೊಸ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರು. ಇದೀಗ ಮತ್ತೊಮೆ ನೋಟ್ ಬ್ಯಾನ್ ಆಗುವ ಬಗ್ಗೆ ಆರ್ ಬಿಐ (RBI) ಘೋಷಣೆ ಹೊರಡಿಸಿದೆ.
ಇಂದಿಂದ 2000 ರೂಪಾಯಿ ನೋಟುಗಳು ವಿನಿಮಯ
ಅಮಾನ್ಯಗೊಂಡ 2000 ರೂಪಾಯಿ ನೋಟುಗಳ ವಿನಿಮಯ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಲಿದೆ. ಆರ್ ಬಿ ಐ ಈಗಾಗಲೇ ಬದಲಾವಣೆ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ಸ್ಪಷ್ಟಪಡಿಸಿದೆ. ಈ 2,000 ರೂಪಾಯಿ ನೋಟುಗಳನ್ನು ಕಾನೂನುಬದ್ಧ ಟೆಂಡರ್ ಗಳಾಗಿ ಉಳಿಯುತ್ತದೆ. ಮತ್ತು ನೋಟುಗಳನ್ನು ನಿಲ್ಲಿಸಲಾಗಿಲ್ಲ ಆದರೆ ಚಲಾವಣೆಯಿಂದ ತೆಗೆದುಹಾಕಲಾಗುತ್ತಿದೆ ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
ನಕಲಿ ನೋಟನ್ನು ಬ್ಯಾಂಕಿಗೆ ಕೊಟ್ಟರೆ ಎಫ್ಐಆರ್ ದಾಖಲು
ಇಂದಿನಿಂದ ನೋಟುಗಳನ್ನು ಹಿಂತೆಗುಕೊಳ್ಳುವ ಕಾರ್ಯ ಪ್ರಾರಂಭವಾಗಿದ್ದು, ಯಾರು ನಕಲಿ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡದಂತೆ ಬ್ಯಾಂಕುಗಳು ಸಿದ್ಧತೆಗಳನ್ನು ಮಾಡಿದೆ. ಇದಕ್ಕಾಗಿ ನೋಟುಗಳನ್ನು ಪರಿಶೀಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ.
ಯಾವುದೇ ನಕಲಿ ನೋಟು ಬ್ಯಾಂಕಿನಲ್ಲಿ ಸಿಕ್ಕಿಬಿದ್ದರೆ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಲ್ಲದೆ ಒಬ್ಬ ವ್ಯಕ್ತಿಯಿಂದ ಐದಕ್ಕಿಂತ ಹೆಚ್ಚು ನಕಲಿ ನೋಟುಗಳು ಕಂಡುಬಂದರೆ ಈ ಸಂಬಂಧ ಎಫ್ಐಆರ್ ಸಹ ದಾಖಲಿಸಲಾಗುವುದು. ಇದರ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
2,000 ರೂ. ನೋಟುಗಳನ್ನು ಬ್ಯಾನ್ ಮಾಡಿದ RBI
2,000 ಮುಖಬೆಲೆಯ ನೋಟುಗಳ ಬಿಡುಗಡೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚನೆ ಹೊರಡಿಸಿದೆ. ಮಾರ್ಚ್ 2017 ಕ್ಕಿಂತ ಮೊದಲು ಹೆಚ್ಚಿನ 2,000 ನೋಟುಗಳು ಚಲಾವಣೆಗೆ ಬಂದಿದೆ.
ಈ ನೋಟುಗಳ ಜೀವಿತಾವಧಿ 4-5 ವರ್ಷಗಳ ಕೊನೆಯಲ್ಲಿದೆ. ಈ ಮುಖಬೆಲೆಯ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2,000 ನೋಟುಗಳನ್ನು ಮುದ್ರಣವನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.