Employees Marriage: ಸರ್ಕಾರೀ ನೌಕರರ ಮದುವೆಯ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಸರ್ಕಾರದ ಅನುಮತಿ ಕಡ್ಡಾಯ.

ಸರ್ಕಾರೀ ನೌಕರರ ಮದುವೆಗೆ ಸಂಬಂಧಿಸಿದ ಹೊಸ ನಿಯಮ ಜಾರಿಗೆ ತಂದ ಈ ಸರ್ಕಾರ.

Govt Employees Marriage Rule: ಇನ್ನು ದೇಶದಲ್ಲಿ ಸರ್ಕಾರೀ ನೌಕರರಿಗೆ ಸರ್ಕಾರ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಸರಕಾರಿ ನೌಕರರು ಸರ್ಕಾರದ ಪ್ರತಿ ನಿಯಮವನ್ನು ಕೂಡ ಪಾಲಿಸಬೇಕು.

ಸರ್ಕಾರದ ಯಾವುದೇ ನಿಯಮವನ್ನು ನೌಕರರು ಉಲ್ಲಂಘಿಸಿದರು ಕೂಡ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ನಿಯಮ ಉಲ್ಲಂಘನೆಯ ಆಧಾರದ ಮೇಲೆ ಸರ್ಕಾರ ನೌಕರರ ಉದ್ಯೋಗವನ್ನು ಕಸಿದುಕೊಳ್ಳುವ ಸಾಧ್ಯತೆ ಕೂಡ ಇದೆ ಎಂದು ಹೇಳಬಹುದು. ಹೀಗಾಗಿ ಸರ್ಕಾರದ ಪ್ರತಿ ನಿಯಮವನ್ನು ನೌಕರರು ಪಾಲಿಸುವುದು ಅಗತ್ಯವಾಗಿದೆ.

assam government emplpyees marriage rules
Image Credit: Original Source

ಸರ್ಕಾರೀ ನೌಕರರಿಗೆ ಮಹತ್ವದ ಮಾಹಿತಿ
ಸದ್ಯ ಅಸ್ಸಾಂ ಸರ್ಕಾರ (Assam Govt) ಸರ್ಕಾರೀ ನೌಕರರಿಗೆ ಮಹತವಾದ ಮಾಹಿತಿಯನ್ನು ಹೊರಡಿಸಿದೆ. ಸರ್ಕಾರೀ ನೌಕರರ ಮದುವೆಗೆ ಸಂಬಂಧಿಸಿದಂತೆ ಅಸ್ಸಾಂ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ನುಮುಂದೆ ಈ ರಾಜ್ಯದ ಸರ್ಕಾರೀ ನೌಕರರು ಮದುವೆಯ ಸಮಯದಲ್ಲಿ ಈ ಹೊಸ ನಿಯಮವನ್ನು ಪಾಲಿಸಬೇಕಿದೆ. ಇದೀಗ ಅಸ್ಸಾಂ ಸರ್ಕಾರ ನೌಕರರಿಗೆ ಮದುವೆಗೆ ಸಂಬಂಧಿಸಿದಂತೆ ಯಾವ ನಿಯಮವನ್ನು ಪರಿಚಯಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಸರ್ಕಾರೀ ನೌಕರರ ಮದುವೆಯ ನಿಯಮದಲ್ಲಿ ಬಹುದೊಡ್ಡ ಬದಲಾವಣೆ
ಇದೀಗ ಅಸ್ಸಾಂ ಸರ್ಕಾರ ಸರ್ಕಾರೀ ನೌಕರರು ಎರಡನೇ ಮದುವೆ ಆಗುವ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಪತ್ನಿ ಅಥವಾ ಪತಿ ಜೀವಂತವಾಗಿದ್ದರೆ ಸರ್ಕಾರಿ ನೌಕರರು ಬೇರೆ ವ್ಯಕ್ತಿಯನ್ನು ಮದುವೆಯಾಗುವ ಮೊದಲು ಸರ್ಕಾರದ ಅನುಮತಿಯನ್ನು ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಗಂಡ ಅಥವಾ ಹೆಂಡತಿ ಜೀವಂತವಾಗಿರುವಾಗ ಎರಡನೇ ಮದುವೆಯನ್ನು ನಿಷೇಧಿಸಲು ಈ ನಿಬಂಧನೆಯನ್ನು ಅಸ್ಸಾಂ ಸರ್ಕಾರ ತನ್ನ ಉದ್ಯೋಗಿಗಳಿಗೆ ಜಾರಿಗೊಳಿಸಿದೆ.

government employees second marriage rules in assam
Image Credit: vshoot

ವೈಯಕ್ತಿಕ ಕಾನೂನಿನ ಅಡಿಯಲ್ಲಿ ವ್ಯಕ್ತಿಗೆ ಎರಡನೇ ಮದುವೆಯಾಗಲು ಅನುಮತಿ ಇದ್ದರೂ ಸಹ, ಎರಡನೇ ಮದುವೆಯಾಗುವ ಮುನ್ನ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಈ ನಿಯಮ ವಿಚ್ಛೇಧನದ ಮಾನದಂಡಗಳ ಬಗ್ಗೆ ಏನನ್ನೂ ಉಲ್ಲೇಖಿಸುವುದಿಲ್ಲ. ಈ ಹೊಸ ನಿಯಮದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕೃತ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

ಈ ನಿಯಮ ಉಲ್ಲಂಘಿಸಿದರೆ ಬಾರಿ ದಂಡ
ಈ ಬಗ್ಗೆ ಅಸ್ಸಾಂ ಸಿಬ್ಬಂದಿ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಅಸ್ಸಾಂ ನಾಗರಿಕ ಸೇವಾ ನಿಯಮಗಳು 1965 ರ ನಿಯಮ 26 ರ ನಿಬಂಧನೆಯ ಪ್ರಕಾರ ಅವುಗಳನ್ನು ಹೊರಡಿಸಲಾಗಿದೆ ಎಂದು ಮಾರ್ಗಸೂಚಿಗಳನ್ನು ತಿಳಿಸಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಶಿಸ್ತು ಪ್ರಾಧಿಕಾರವು ಸರ್ಕಾರಿ ನೌಕರನ ವಿರುದ್ಧ ಇಲಾಖಾ ಕ್ರಮವನ್ನು ಕೈಗೊಳ್ಳಲಿದೆ. ಆದಾಗ್ಯೂ ಅಸ್ಸಾಂ ರಾಜ್ಯ ನೌಕರರು ಈ ನಿಯಮವನ್ನು ಉಲ್ಲಂಘಿಸಿದರೆ, ಅವರಿಗೆ ದೊಡ್ಡ ದಂಡವನ್ನು ವಿಧಿಸುತ್ತದೆ. ಸದ್ಯ ಈ ನಿಯಮ ಅಸ್ಸಾಂ ನಲ್ಲಿ ಜಾರಿಗೆ ಬಂದಿದ್ದು ಕರ್ನಾಟಕ ನೌಕರರಿಗೆ ಅನ್ವಯ ಆಗುವುದಿಲ್ಲ ಎಂದು ಹೇಳಬಹುದು.

Join Nadunudi News WhatsApp Group