RunR HS: ಒಂದು ಚಾರ್ಜ್ ಗೆ 100 Km ಮೈಲೇಜ್, ಬಿಡುಗಡೆಯಾದ ಕೆಲವೇ ದಿನದಲ್ಲಿ 25000 ಕ್ಕೂ ಅಧಿಕ ಬುಕಿಂಗ್.
ರನ್ ಆರ್ ಎಚ್ ಎಸ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ವಿಶೇಷತೆ ಬಗ್ಗೆ ತಿಳಿಯಿರಿ.
RunR HS Electric Scooter: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಏಕೆಂದರೆ ಪೆಟ್ರೋಲ್ ಹಾಗು ಡೀಸೆಲ್ ಗಳ ಬೆಲೆಯಲ್ಲಿ ದಿನೇ ದಿನೇ ಏರಿಕೆ ಆಗುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ.
ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಹೆಚ್ಚು ಬೇಡಿಕೆಯಲ್ಲಿವೆ ಎನ್ನಬಹುದು. ಇದೀಗ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ರನ್ ಆರ್ ಎಚ್ ಎಸ್ ಎಲೆಕ್ಟ್ರಿಕ್ ಸ್ಕೂಟರ್
ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಬಿಡುಗಡೆಯಾಗುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ರನ್ ಆರ್ ಎಚ್ ಎಸ್ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಸದ್ದು ಮಾಡುತ್ತಿದೆ. ಈ ಸ್ಕೂಟರ್ ನ ಬೆಲೆ ಮತ್ತು ವಿಶೇಷತೆ ಬಗ್ಗೆ ಮಾಹಿತಿ ತಿಳಿಯೋಣ.
ರನ್ ಆರ್ ಎಚ್ ಎಸ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ವಿಶೇಷತೆ
ರನ್ ಆರ್ ಎಚ್ ಎಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂಪಾಯಿ 1.25 ಲಕ್ಷಕ್ಕೆ ಕಂಪನಿ ಬಿಡುಗಡೆ ಮಾಡಿದೆ. ಆದರೆ ಸಬ್ಸಿಡಿ ಇಲ್ಲದೆ ಬಿಡುಗಡೆ ಮಾಡಲಾಗಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 60V 40AH ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನೊಂದಿಗೆ ಸಜ್ಜುಗೊಳಿಸಿದೆ.
ರನ್ ಆರ್ ಎಚ್ ಎಸ್ ಸ್ಕೂಟರ್ ಒಂದೇ ಚಾರ್ಜ್ ನಲ್ಲಿ 100 ಕೀ.ಮೀ ದೂರವನ್ನು ಚಲಿಸುತ್ತದೆ. ಈ ಸ್ಕೂಟರ್ ಗಂಟೆಗೆ 70 ಕಿಲೋಮೀಟರ್ ದೂರವನ್ನು ಚಲಿಸುತ್ತದೆ. ಇದು ತೆಗೆಯಬಹುದಾದ ಬ್ಯಾಟರಿ ಮತ್ತು CN ಆಧಾರಿತ BMS ಹೊಂದಿದೆ.
ಹೊಸ HS ಎಲೆಕ್ಟ್ರಿಕ್ ಸ್ಕೂಟರ್ 5 ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸ್ಕೂಟರ್ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಇದು ಹೊಳೆಯುವ ಎಲ್ ಇ ಡಿ ಟೈಲ್ ಲೈಟ್ ಗಳು. ಆಂಟಿ ಥೆಫ್ಟ್ ಅಲಾರ್ಮ್, ಡಿವೈಸ್ ಲೋಕೇಟರ್ ಮತ್ತು ಡಿಜಿಟಲ್ ಕ್ಲಸ್ಟರ್ ಅನ್ನು ಪಡೆಯುತ್ತದೆ.