RuPay Card: Rupay ಏಟಿಎಂ ಕಾರ್ಡ್ ಬಳಸುವವರಿಗೆ ಹೊಸ ನಿಯಮ, ದಿನಕ್ಕೆ ಇಷ್ಟು ಮಾತ್ರ ಹಣ ತಗೆಯಬಹುದು.

ರುಪೇ ಡೆಬಿಟ್ ಕಾರ್ಡ್ ನ ದೈನಂದಿನ ವಹಿವಾಟಿನ ಮಿತಿ ಬಗ್ಗೆ ತಿಳಿಯಿರಿ.

RuPay Card Withdrawal Limit: ಬ್ಯಾಂಕ್ ಖಾತೆ ಹೊಂದಿರುವವರು ಪ್ರತಿಯೊಬ್ಬರೂ ಸಹ ಡೆಬಿಟ್ ಕಾರ್ಡ್(Debit Card) ಅನ್ನು ಹೊಂದಿದ್ದಾರೆ. ಇದನ್ನು ಎಟಿಎಂ ಕಾರ್ಡ್ ಎಂದು ಕರೆಯುತ್ತಾರೆ. ಹೆಚ್ಚಿನ ಜನರು ಎಟಿಎಂ ಕಾರ್ಡ್ ಮೂಲಕ ವಹಿವಾಟು ನಡೆಸುತ್ತಾರೆ.

ಈ ಎಟಿಎಂ ಕಾರ್ಡ್ ನೊಂದಿಗೆ ನೀವು ಎಟಿಎಂ ನಿಂದ ಹಣವನ್ನು ಹಿಂಪಡೆಯಬಹುದು. ಆನ್ ಲೈನ್ ಮತ್ತು ಆಫ್ ಲೈನ್ ವಹಿವಾಟುಗಳಿಗೆ ಇದನ್ನು ಡೆಬಿಟ್ ಕಾರ್ಡ್ ನಂತೆ ಬಳಸಬಹುದು. ಹಣಕಾಸಿನ ವಹಿವಾಟುಗಳಿಗೆ ಡೆಬಿಟ್ ಕಾರ್ಡ್ ಗಳು ಅಗತ್ಯವಾಗಿವೆ.

RuPay Card Withdrawal Limit
Image Credit: Cardexpert

ರುಪೇ ಡೆಬಿಟ್ ಕಾರ್ಡ್
ಡೆಬಿಟ್ ಕಾರ್ಡ್ ನೊಂದಿಗೆ ಹಿಂಪಡೆಯುವ ಮಿತಿ ಇರುತ್ತದೆ. ಅಂದರೆ ಎಟಿಎಂ ನಿಂದ ಎಷ್ಟು ಹಣ ತೆಗೆಯಬಹುದು ಎಂಬುವುದಕ್ಕೆ ಮಿತಿ ಇದೆ. ಡೆಟ್ ಕಾರ್ಡ್ ನಂತೆ ರುಪೇ ಡೆಬಿಟ್ ಕಾರ್ಡ್ ಗಳು ಸಹ ಮಿತಿಯನ್ನು ಹೊಂದಿದೆ. ಈ ಮಿತಿಯನ್ನು ಮೀರಿದರೆ ನಿಮ್ಮ ವಹಿವಾಟನ್ನು ತಿರಸ್ಕರಿಸಬಹುದು, ಅಥವಾ ಶುಲ್ಕವನ್ನು ಪಾವತಿಸಬೇಕಾಗಬಹುದು.

ಬ್ಯಾಂಕ್ ಎಟಿಎಂ ಮತ್ತು ಪಿ ಒ ಎಸ್ ಯಂತ್ರದ ವಹಿವಾಟುಗಳಿಗೆ ದೈನಂದಿನ ವಹಿವಾಟಿನ ಮಿತಿ ಇದೆ. ಕಾರ್ಡ್ ಪ್ರಕಾರವನ್ನು ಅವಲಂಬಿಸಿ ಈ ಮಿತಿ ಬದಲಾಗುತ್ತದೆ. ಪ್ರಸ್ತುತ ನಾಲ್ಕು ವಿಧದ ರುಪೇ ಡೆಬಿಟ್ ಕಾರ್ಡ್‌ಗಳು ಲಭ್ಯವಿದೆ. ರುಪೇ ಡೆಬಿಟ್ ಕಾರ್ಡ್‌ಗಳು ಸರ್ಕಾರಿ ಯೋಜನೆಗಳು, ಕ್ಲಾಸಿಕ್, ಪ್ಲಾಟಿನಂ, ಸೆಲೆಕ್ಟ್ ಎಂಬ ಹೆಸರಿನಲ್ಲಿ ಲಭ್ಯವಿದೆ. ಆದರೆ ಎಟಿಎಂಗಳು, ಪಿಒಎಸ್ ಟರ್ಮಿನಲ್‌ಗಳು ದೈನಂದಿನ ವಹಿವಾಟಿನ ಮಿತಿಯನ್ನು ನಿಮ್ಮ ಕಾರ್ಡ್ ಪ್ರಕಾರವನ್ನು ಅವಲಂಬಿಸಿ ಬ್ಯಾಂಕ್‌ ಗಳು ನಿರ್ಧರಿಸುತ್ತವೆ.

RuPay Card Withdrawal Limit
Image Credit: Twitter

HDFC ಬ್ಯಾಂಕ್ ರುಪೇ ಪ್ರೀಮಿಯಂ

Join Nadunudi News WhatsApp Group

HDFC ಬ್ಯಾಂಕ್ ರುಪೇ ಪ್ರೀಮಿಯಂ ಡೆಟ್ ಕಾರ್ಡ್ ನೊಂದಿಗೆ, ನೀವು ಮರಹಿತ್ ಔಟ್ ಲೇಟ ಗಳಲ್ಲಿ ದಿನದಿಂದ ದಿನಕ್ಕೆ ರೂಪಾಯಿ 2,000 ಮತ್ತು ತಿಂಗಳಿಗೆ 10,000 ರೂಪಾಯಿಯವರೆಗೆ ಹಿಂಪಡೆಯಬಹುದು. ದೈನಂದಿನ ಖರೀದಿ ಮಿತಿ 2 .75 ಲಕ್ಷ ರೂಪಾಯಿ ಮತ್ತು ಎಟಿಎಂ ವಿತ್ ಡ್ರಾ ಮಿತಿ 25,000 ರೂಪಾಯಿ ಆಗಿದೆ.

PNB ಬ್ಯಾಂಕ್
ಈ ಬ್ಯಾಂಕ್ ನ ರುಪೇ ಕಾರ್ಡ್ ನೊಂದಿಗೆ ದೈನಂದಿನ ATM ಮಿತಿಯು 10,00,000 ರೂಪಾಯಿಯವರೆಗೆ ಆಗಿರುತ್ತದೆ.

RuPay Card Withdrawal Limit
Image Credit: Cardinfo

ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್ ರುಪೇ ಪ್ಲಾಟಿನಂ ಕಾರ್ಡ್ ದೈನಂದಿನ ವಿತ್ ಡ್ರಾ ಮತ್ತು ಖರೀದಿ ಮಿತಿ 25,000 ರೂಪಾಯಿ, ಆದರೆ ಎಟಿಎಂ ಮತ್ತು ಪಿಒಎಸ್ ವಹಿವಾಟಿನ ಮಿತಿ 75,000 ರೂಪಾಯಿ.

Join Nadunudi News WhatsApp Group