Rupay Card Insurance: ಎಟಿಎಂ ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ ವಿಮೆ, ವಿಮೆಯ ಲಾಭ ಪಡೆದುಕೊಳ್ಳಿ.

RuPay Select Credit Card Insurance: ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಸೌಲಭ್ಯಗಳನ್ನು ಒದಗಿಸುತ್ತಲೇ ಇದೆ. ಇನ್ನು ಅನೇಕ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗಾಗಿ ಡೆಬಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುತ್ತದೆ.

ಇದೀಗ ಡೆಬಿಟ್ ಕಾರ್ಡ್ ಗಳಲ್ಲಿ ರೂಪೇ ಡೆಬಿಟ್ ಕಾರ್ಡ್, ವೀಸಾ, ಮಾಸ್ಟರ್ ಕಾರ್ಡ್, ಟೈಟಾನಿಯಂ ಕಾರ್ಡ್ ಅನ್ನು ನೋಡುತ್ತೇವೆ. ಹೆಚ್ಚಾಗಿ ಎಲ್ಲರು ರೂಪೇ ಡೆಬಿಟ್ ಕಾರ್ಡ್ ಅನ್ನು ಬಳಸುತ್ತಾರೆ. ರೂಪೇ ಡೆಬಿಟ್ ಕಾರ್ಡ್ ನ ಬಳಕೆದಾರರು ಇದೀಗ 10 ಲಕ್ಷದವರೆಗೆ ಉಚಿತ ವಿಮೆ ಪಡೆಯಲು ಅವಾಶವಿದೆ.

Insurance can also be availed through Rupay ATM card.
Image Credit: paytm

ರೂಪೇ ಡೆಬಿಟ್ ಕಾರ್ಡ್ (RuPay Debit Card) 
NPCI ಭಾರತದಲ್ಲಿ ಈ ಕಾರ್ಡ್ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಗ್ರಾಹಕರು ಈ ರೂಪೇ ಡೆಬಿಟ್ ಕಾರ್ಡ್ ಅನ್ನು ವಿದೇಶದಲ್ಲೂ ಬಳಸಬಹುದು. ಇದಕ್ಕಾಗಿ ಏನ್ ಪಿಸಿಐ ಡಿಸ್ಕವರ್ ನೆಟ್ವರ್ಕಿಂಗ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ರೂಪೇ ಗ್ಲೋಬಲ್ ಕಾರ್ಡ್ ಐದು ವಿಧದಲ್ಲಿ ಲಭ್ಯವಿದೆ.

With Rupay Select Credit Card you can avail insurance of up to ten lakh rupees
Image Credit: instagram

ರೂಪೇ ಡೆಬಿಟ್ ಕಾರ್ಡ್ ನ ವಿಧಗಳು
ರೂಪೇ ಡೆಬಿಟ್ ಕಾರ್ಡ್ ಐದು ವಿಧದಲ್ಲಿ ಲಭ್ಯವಿದೆ. ರೂಪೇ ಕ್ಲಾಸಿಕ್ ಡೆಬಿಟ್ ಕಾರ್ಡ್, ರೂಪೇ ಕ್ಲಾಸಿಕ್ ಕ್ರೆಡಿಟ್ ಕಾರ್ಡ್, ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್, ರೂಪೇ ಪ್ಲಾಟಿನಂ ಕ್ರೆಡಿಟ್ ಕಾರ್ಡ್, ರೂಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ಎನ್ನುವ ಐದು ವಿಧಗಳಲ್ಲಿ ರೂಪೇ ಡೆಬಿಟ್ ಕಾರ್ಡ್ ಗಳು ಲಭ್ಯವಿದೆ.

Accident insurance can be availed through Rupay Select credit card.
Image Credit: instagram

ರೂಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ (RuPay Select Credit Card) 
ರೂಪೇ ಡೆಬಿಟ್ ಕಾರ್ಡ್ ನ ಐದು ವಿಧಗಳಲ್ಲಿ ರೂಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಐದು ಕಾರ್ಡ್ ಗಳಲ್ಲಿ ರೂಪೇ ಸೆಲೆಕ್ಟ್ ಕ್ರೆಡಿಟ್ ಕಾರ್ಡ್ ತೆಗೆದುಕೊಂಡವರು ರೂ. 10 ಲಕ್ಷದ ವರೆಗೆ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯುತ್ತಾರೆ.

Join Nadunudi News WhatsApp Group

Join Nadunudi News WhatsApp Group