Sachin Tendulkar: ನಿಜವಾಯಿತು 11 ವರ್ಷಗಳ ಹಿಂದೆ ಸಚಿನ್ ನುಡಿದ ಆ ಒಂದು ಭವಿಷ್ಯ, ಅಷ್ಟಕ್ಕೂ ಸಚಿನ್ ಹೇಳಿದ್ದೇನು…?
Sachin Tendulkar ಅವರು 11 ವರ್ಷದ ಹಿಂದೆ ನುಡಿದ ಭವಿಷ್ಯ ಈಗ ವೈರಲ್ ಆಗಿದೆ.
Sachin Tendulkar About Virat Kohli And Rohith Sharma: ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ (Indian National Cricket Team) ಖ್ಯಾತ ಆಟಗಾರ Sachin Tendulkar ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಭಾರತೀಯ ಕ್ರಿಕೆಟ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಅತ್ಯಂತ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಅವರು ತಮ್ಮ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಸದ್ಯ ಸಚಿನ್ ತೆಂಡೂಲ್ಕರ್ ಅವರ ಹಿಂದಿನ ಮಾತುಗಳ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ಸಚಿನ್ ಅವರು ನುಡಿದ ಭವಿಷ್ಯ ಇಂದು ನಿಜವಾಗಿದೆ ಎಂದು ನೆಟ್ಟಿಗರು ಸುದ್ದಿ ವೈರಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಚಿನ್ ತೆಂಡೂಲ್ಕರ್ ಅವರು ಯಾವ ರೀತಿ ಭವಿಷ್ಯ ನುಡಿದ್ದಿದ್ದರು ಎನ್ನುವ ಬಗ್ಗೆ ನಿಮಗೆ ಕುತೂಹಲವಿರಬಹುದು. ಇದೀಗ ಸಚಿನ್ ಅವರು ಆಡಿದ ಯಾವ ಮಾತು ನಿಜವಾಗಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಸಚಿನ್ ಅವರು ನುಡಿದ ಭವಿಷ್ಯ ಏನು.?
2012 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ವೇದಿಕೆಯ ಮೇಲೆ ನಿಂತು ನಿಮ್ಮ ದಾಖಲೆಗಳನ್ನು ಯಾರಾದರೂ ಮುರಿಯಲು ಸಾಧ್ಯವೇ ಎಂದು ಸಚಿನ್ ತೆಂಡೂಲ್ಕರ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಸಚಿನ್, ಈ ಕೊಠಡಿಯಲ್ಲಿ ಟೀಂ ಇಂಡಿಯಾದ ಹಲವು ಯುವ ಕ್ರಿಕೆಟಿಗರು ಕುಳಿತಿದ್ದಾರೆ ಎಂದ ತಕ್ಷಣ, ಇದು ಅಸಾಧ್ಯ ಎಂದು ಸಲ್ಮಾನ್ ಖಾನ್ ತಕ್ಷಣವೇ ಹೇಳಿದ್ದಾರೆ. ಆದರೆ, ಸಲ್ಮಾನ್ ಮಾತನ್ನು ಒಪ್ಪದ ಸಚಿನ್ ನನ್ನ ದಾಖಲೆಯನ್ನು ಮುರಿಯಬಲ್ಲ ಆಟಗಾರರು ಇಲ್ಲಿದ್ದಾರೆ ಎಂದಿದ್ದಾರೆ.
Sachin Tendulkar had predicted this way back in 2012 about #ViratKohli and #RohitSharma 🔥🏏
– God of Cricket for a reason 💙🙏🏻#INDvsSL #CWC23 pic.twitter.com/WGzCui4clN
— Ishan Joshi (@ishanjoshii) November 2, 2023
ಹಾಗಾದರೆ ಅದು ಯಾರು..? ಎಂದು ಸಲ್ಮಾನ್ ಮತ್ತೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿನ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎಂದಿದ್ದರು. ನಮ್ಮದೇ ದೇಶದ ಆಟಗಾರನೊಬ್ಬ ನನ್ನ ದಾಖಲೆ ಮುರಿದರೆ ಹೆಮ್ಮೆ ಎನಿಸುತ್ತದೆ ಎಂದೂ ಅವರು ಹೇಳಿದ್ದಾರೆ. ಅದೇ ಸಮಾರಂಭದಲ್ಲಿ ಕುಳಿತಿದ್ದ ಕೊಹ್ಲಿ ಅವರು ಸಚಿನ್ ಭಾಷಣ ಕೇಳಿ ನಕ್ಕಿದ್ದರು.
ಸಚಿನ್ ಅವರ 11 ವರ್ಷದ ಹಿಂದಿನ ಭವಿಷ್ಯ ಇಂದು ನಿಜವಾಗಿದೆ
ಆಗ ಸಚಿನ್ ಹೇಳಿದಂತೆ ವಿರಾಟ್ ಮತ್ತು ರೋಹಿತ್ ಶರ್ಮಾ ಈಗಾಗಲೇ ಸಚಿನ್ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಸಚಿನ್ ಅವರ ಸಾರ್ವಕಾಲಿಕ ಏಕದಿನ ಶತಕದ ದಾಖಲೆಯನ್ನು ವಿರಾಟ್ ಸರಿಗಟ್ಟುತ್ತಿದ್ದಂತೆ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ವಿರಾಟ್ ಮತ್ತೊಂದು ಶತಕ ಬಾರಿಸಿದರೆ ಸಚಿನ್ ದಾಖಲೆ ಪತನವಾಗಲಿದೆ. ತಮ್ಮ ದಾಖಲೆಯ ಶತಕವನ್ನು ಸರಿಗಟ್ಟುವ ಸಂದರ್ಭದಲ್ಲಿ ಸಚಿನ್ ನಿಷ್ಕಳಂಕ ಮನಸ್ಸಿನಿಂದ ಅಭಿನಂದನೆಗಳನ್ನು ಟ್ವೀಟ್ ಮಾಡಿದ್ದಾರೆ. ಮುಂದಿನ ಐದು ದಿನಗಳಲ್ಲಿ 50ನೇ ಶತಕ ಸಿಡಿಸಲಿ ಎಂದು ಹಾರೈಸಿದರು.