2011 World Cup: ವಿಶ್ವಕಪ್ ಫೈನಲ್ ನಲ್ಲಿ ಔಟ್ ಆಗಿ ಬಂದಾಗ ಕೊಹ್ಲಿ ಬಳಿ ಹೀಗೆ ಹೇಳಿದ್ದರಂತೆ ಸಚಿನ್.

ವರ್ಲ್ಡ್ ಕಪ್ ಫೈನಲ್ ನಲ್ಲಿ ಸಚಿನ್ ಔಟ್ ಆದ ಸಮಯದಲ್ಲಿ ಕೊಹ್ಲಿ ಬಳಿ ಈ ರೀತಿಯಾಗಿ ಹೇಳಿದ್ದರಂತೆ.

2011 World Cup Final Match: 2011 ರಲ್ಲಿ ಭಾರತದ ಕ್ರಿಕೆಟ್ ತಂಡವು ಫೈನಲ್ ಗೆ ತಲುಪಿತ್ತು. ಟೀಮ್ ಇಂಡಿಯಾಗೆ (Team India) ಶ್ರೀಲಂಕಾ ತಂಡವು ಎದುರಾಗಿತ್ತು. ಈ ಎರಡು ತಂಡಗಳ ನಡುವೆ 2011 ರ ಏಪ್ರಿಲ್ 2 ರಂದು ಮುಂಬೈ ನ ವಾಂಖೆಡೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು.

ಈ ಪಂದ್ಯ ನಡೆಯುತ್ತಿದ್ದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಸಚಿನ್ ತೆಂಡೂಲ್ಕರ್ ಔಟ್ ಆಗಿ ಬಂದಾಗ ಕೊಹ್ಲಿ ಅವರು ಬ್ಯಾಟಿಂಗ್ ಮಾಡಲು ಹೋಗುವ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಕೊಹ್ಲಿ ಅವರ ಬಳಿ ಕಿವಿ ಮಾತು ಹೇಳಿದ್ದರು. ಇದೀಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ವಿರಾಟ್ ಕೊಹ್ಲಿ (Virat Kohli) ಅವರ ಬಳಿ ಹೇಳಿದ ಕಿವಿ ಮಾತನ್ನು ರಿವೀಲ್ ಮಾಡಿದ್ದಾರೆ.

As Sachin Kot said to Virat Kohli during the 2011 World Cup.
Image Credit: cricfit

ವಿಶ್ವಕಪ್ ಫೈನಲ್ ನಲ್ಲಿ ಔಟ್ ಆದಾಗ ಕೊಹ್ಲಿ ಬಳಿ ಕಿವಿಮಾತು ಹೇಳಿದ ಸಚಿನ್
ಶ್ರೀಲಂಕೆ ತಂಡದಿಂದ ಜಯವರ್ಧನ್ ಮೊದಲು ಬ್ಯಾಟಿಂಗ್ ಮಾಡಿದ್ದರು. ಟೀಮ್ ಇಂಡಿಯಾಗೆ ಗೆಲ್ಲಲು ಶ್ರೀಲಂಕಾ ತಂಡವು 275 ರನ್ ಗಳನ್ನೂ ಗುರಿಯಾಗಿ ನೀಡಿತ್ತು. ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಭಾರತದ ಪರ ಆಟಗಾರರಾಗಿ ಕಣಕ್ಕಿಳಿದಿದ್ದರು. ನಂತರ ಸಚಿನ್ ತೆಂಡೂಲ್ಕರ್ ಔಟ್ ಆಗಿ ಹೊರಹೋಗುವ ಸಮಯದಲ್ಲಿ ವಿರಾಟ್ ಕೊಹ್ಲಿ ಮೈದಾನ ಪ್ರವೇಶಿಸಿದ್ದರು.

ಈ ವೇಳೆ ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಅವರ ಬಳಿ ಏನೋ ಸಂದೇಶ ಹೇಳಿದ್ದರು. ಇನ್ನು ಕೊಹ್ಲಿ ಗೆ ಸಚಿನ್ ಹೇಳಿದ ಮಾತುಗಳ ಬಗ್ಗೆ ನೋಡುಗರು ಕುತೂಹಲರಾಗಿದ್ದರು. ಇದೀಗ ಏಪ್ರಿಲ್ 21 ರಂದು ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಭಿಮಾನಿಗಳ ಜೊತೆ ಟ್ವಿಟ್ಟರ್ ನ ಮೂಲಕ ಸಂವಾದ ನಡೆಸಿದ್ದಾರೆ.

As Sachin told Virat Kohli when he got out in the 2011 World Cup, the ball is still swinging.
Image Credit: india

ಈ ವೇಳೆ ನೆಟ್ಟಿಗನೋರ್ವ ಸಚಿನ್ ಅವರ ಬಳಿ 2011 ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಔಟ್ ಆದ ಸಮಯದಲ್ಲಿ ಕೊಹ್ಲಿ ಅವರಿಗೆ ಎಂದು ಹೇಳಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸಚಿನ್ ಉತ್ತರ ನೀಡಿದ್ದಾರೆ.

Join Nadunudi News WhatsApp Group

ಸಚಿನ್ ಕೊಹ್ಲಿಗೆ ನೀಡಿದ ಸಂದೇಶ ಏನು
ಟ್ವೀಟ್ ನ ಮೂಲಕ ಸಚಿನ್ ತೆಂಡೂಲ್ಕರ್ ಪ್ರಶ್ನೆಗೆ ಉತ್ತರ ನೀಡಿದ್ದಾರೆ. “ಇನ್ನೂ ಸಹ ಬಾಲ್ ಸ್ವಿಂಗ್ ಆಗುತ್ತಿದೆ” ಎಂದು ಹೇಳಿದ್ದರಂತೆ. ಬಾಲ್ ಸ್ವಿಂಗ್ ಆಗುತ್ತಿದೆ ನೋಡಿಕೊಂಡು ಆಡು ಎಂದು ಸಚಿನ್ ಅವರು ಕೊಹ್ಲಿ ಅವರಿಗೆ ಸಂದೇಶ ನೀಡಿದ್ದಾರೆ. ಬಾಲ್ ಸ್ವಿಂಗ್ ಆಗಿ ಸಚಿನ್ ಆದಕಾರಣ ನಂತರ ಬ್ಯಾಟಿಂಗ್ ಮಾಡಲು ಬರುವ ವಿರಾಟ್ ಕೊಹ್ಲಿ ಅವರ ಬಳಿ ಸಚಿನ್ ಇನ್ನೂ ಕೂಡ ಬಳ್ಳಾವೆಯಿಂಗ್ ಆಗುತ್ತಿದೆ ಮೆಲ್ಲಗೆ ಆಡು ಎಂದು ಹೇಳಿದ್ದರಂತೆ.

Join Nadunudi News WhatsApp Group