Safest Banks: ಹೆಚ್ಚಿನ ಹಣ ಇಡಲು ಯಾವ ಮೂರೂ ಬ್ಯಾಂಕುಗಳು ಸೇಫ್, ಹಣ ಇಟ್ಟವರ ಗಮನಕ್ಕೆ.
ಹಣವನ್ನ ಸೇವ್ ಮಾಡಲು ಯಾವ ಬ್ಯಾಂಕುಗಳು ಉತ್ತಮ ಅನ್ನುವುದರ ಬಗ್ಗೆ ಮಾಹಿತಿಯನ್ನ ಈಗ RBI ತಿಳಿಸಿದೆ.
Safest Bank Of India: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನಿಂದ ಮಹತ್ವದ ಮಾಹಿತಿ ಒಂದು ಹೊರ ಬಿದ್ದಿದೆ. ಜನ ಸಾಮಾನ್ಯರು ದಿನನಿತ್ಯ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುತ್ತಾರೆ.
ತಮ್ಮ ಕಷ್ಟ ಕಾಲದಲ್ಲಿ ಈ ಹಣ ನೆರವಿಗೆ ಬರಲಿ ಎನ್ನುವ ಉದ್ದೇಶದಿಂದ ಬ್ಯಾಂಕ್ ನಲ್ಲಿ ಜನರು ತಮ್ಮ ಹಣವನ್ನು ಇಡುತ್ತಾರೆ. ಬ್ಯಾಂಕ್ ನಲ್ಲಿ ಹಣ ಇಟ್ಟರೆ ಅದು ಸುರಕ್ಷಿತವಾಗಿರುತ್ತದೆ ಎಂಬುದು ಜನರ ನಂಬಿಕೆ. ಆದರೆ ಕೆಲವು ಬ್ಯಾಂಕಿನಲ್ಲಿ ನಿಮ್ಮ ಹಣವನ್ನು ಠೇವಣಿ ಮಾಡಲು ನೀವು ಯೋಚಿಸಬೇಕಾಗುತ್ತದೆ.
ರಿಸರ್ವ್ ಬ್ಯಾಂಕ್ ನಿಂದ ಹೊಸ ಮಾಹಿತಿ
ನೀವು ಯಾವುದೇ ಬ್ಯಾಂಕಿನಲ್ಲಿ ಹಣ ಠೇವಣಿ ಮಾಡುವ ಮುನ್ನ ನಿಮ್ಮ ಹಣ ಎಷ್ಟು ಸೇಫ್ ಆಗಿ ಇರಲಿದೆ ಎನ್ನುವ ಮಾಹಿತಿ ನಿಮಗೂ ಸಹ ಇರಬೇಕು. ರಿಸರ್ವ್ ಬ್ಯಾಂಕ್ ಈ ವರ್ಷದ ಆರಂಭದಲ್ಲಿ ದೇಶದ ಅತ್ಯಂತ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜನರು ಈ ಮಾಹಿತಿಯ ಪ್ರಕಾರ ತಮ್ಮ ಹಣವನ್ನು ಇಂತಹ ಬ್ಯಾಂಕಿನಲ್ಲಿ ಇಡುವುದು ಉತ್ತಮ.
ಜನರು ತಮ್ಮ ಹಣ ಇಡಲು ಸೇಫ್ ಆಗಿರುವ ಬ್ಯಾಂಕ್ ಗಳು
ಜನರು ತಮ್ಮ ಹಣವನ್ನು ಸೇಫ್ ಆಗಿ ಇಡಲು ಸುರಕ್ಷಿತವಾಗಿರುವ ಬ್ಯಾಂಕಿನ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಸುರಕ್ಷಿತ್ ಬ್ಯಾಂಕ್ ಗಳ ಪಟ್ಟಿಯಲ್ಲಿ ಒಂದು ಸರ್ಕಾರೀ ಬ್ಯಾಂಕ್ ಮತ್ತು 2 ಖಾಸಗಿ ಬ್ಯಾಂಕ್ ಗಳ ಹೆಸರು ಸೇರಿದೆ.
ಸರ್ಕಾರೀ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದರ ಅರ್ಥ ನಿಮ್ಮ ಖಾತೆಯು ಎಸ್ ಬಿ ಐ, ಎಚ್ ಡಿ ಎಫ್ ಸಿ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್ ನಲ್ಲಿ ಇಟ್ಟರೆ ಜನರು ಯಾವುದೇ ರೀತಿಯಲ್ಲಿಯೂ ಚಿಂತಿಸುವ ಅಗತ್ಯವಿಲ್ಲ.