SAIC Car: ಮಾರುಕಟ್ಟೆಗೆ ಬಂತು ಇನ್ನೊಂದು ಚಿಕ್ಕ SUV ಕಡಿಮೆ ಬೆಲೆ 303 Km ಮೈಲೇಜ್, ಕಾರಿಗೆ ಜನರು ಫಿದಾ.
MG ಕಾಮೆಟ್ ಠಕ್ಕರ್ ಕೊಡಲು ಮಾರುಕಟ್ಟೆಗೆ ಇನ್ನೊಂದು ಮಿನಿ SUV ಬಿಡುಗಡೆ ಆಗಿದೆ.
SAIC New Electric SUV: ಈಗಾಗಲೇ ಮಾರುಕಟ್ಟೆಗೆ ವಾಹನ ಪ್ರಿಯರನ್ನು ಆಕರ್ಷಿಸಲು ಅತಿ ಸಣ್ಣ MG ಎಲೆಕ್ಟ್ರಿಕ್ (MG Electric) ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಎಂಜಿ ಮೋಟಾರ್ (MG Motor) ನ ಸಣ್ಣ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಹೊಸ ರೀತಿಯ ಸಂಚಲನ ಸ್ರಷ್ಟಿಸಿದೆ.
ಇದೀಗ ಎಂಜಿ ಮೋಟಾರ್ ನ ಎಲೆಕ್ಟ್ರಿಕ್ ಕಾರ್ ಗೆ ಪೈಪೋಟಿ ನೀಡಲು ಎಂಜಿ ಕಂಪನಿಯ ಮಾತೃ ಸಂಸ್ಥೆ ಸೈಕ್ (SAIC) ಹೊಚ್ಚ ಹೊಸ ಸಣ್ಣ ಎಸ್ ಯುವಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಸೈಕ್ ಕಂಪನಿಯ ಎಲೆಕ್ಟ್ರಿಕ್ ವಾಹನದ ಬಿಡುಗಡೆಯ ಸುದ್ದಿಗಳು ಸ್ಪಿಸಿಎಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಹೊಚ್ಚ ಹೊಸ ಎಲೆಕ್ಟ್ರಿಕ್ SUV
ಎಂಜಿ ಮೋಟಾರ್ಸ್ ತನ್ನ ಬ್ಯಾಡ್ಜ್ ಅಡಿಯಲ್ಲಿ ಬಾಜುನ್ ಯೆಪ್ ಎಲೆಕ್ಟ್ರಿಕ್ ಎಸ್ ಯುವಿ (Baojun Yep Electric SUV) ಆಧಾರಿತ ಹೊಸ ಎಸ್ ಯುವಿಯನ್ನು ಭಾರತದಲ್ಲಿ ಉತ್ಪಾದಿಸಿ ಮಾರಾಟ ಮಾಡಲು ಕಂಪನಿ ಸಜ್ಜಾಗಿದೆ. ಬಾಜುನ್ ಯೆಪ್ ಎಲೆಕ್ಟ್ರಿಕ್ ಎಸ್ ಯುವಿ ಡಿಸೈನ್ ಪೇಟೆಂಟ್ ಅನ್ನು ಕಂಪನಿ ಸಲ್ಲಿಸಿದೆ. ಈ ಎಲೆಕ್ಟ್ರಿಕ್ ಎಸ್ ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
ಎಲೆಕ್ಟ್ರಿಕ್ SUV ಬಿಡುಗಡೆ
ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಾಜುನ್ ಯೆಪ್ ಎಲೆಕ್ಟ್ರಿಕ್ ಎಸ್ ಯುವಿ ಮಾದರಿಯನ್ನೇ ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಎಸ್ ಯುವಿ ಹೊಲಲಿದೆ. ಅತಿ ಸಣ್ಣ ಎಲೆಕ್ಟ್ರಿಕ್ ಕಾರ್ ಗಳಿಗೆ ಪೈಪೋಟಿ ನೀಡಲು ರೂಪುಗೊಳ್ಳುತ್ತಿರುವ ಈ ಎಲೆಕ್ಟ್ರಿಕ್ ಕಾರ್ ಗೆ ಇನ್ನು ಹೆಸರಿಡಲಿಲ್ಲ. ಗುಜರಾತ್ ನ ಹಲೋಲ್ ಕಂಪನಿಯ ಫ್ಯಾಕ್ಟರಿಯಲ್ಲಿ ಈ ಹೊಸ ಕಾರ್ಯ ತಯಾರಾಗುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಖರೀದಿಗೆ ಲಭ್ಯವಾಗಬಹುದು. ಇನ್ನು ಇದರ ಬೆಲೆಯ ಬಗ್ಗೆ ಹೇಳುವುದಾದರೆ ಎಂಜಿ ಕಾಮೆಟ್ ಕಾರ್ ಬೆಲೆಗೆ ಸರಿಸಮಾನವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಾಜುನ್ ಯೆಪ್ ಎಲೆಕ್ಟ್ರಿಕ್ ಎಸ್ ಯುವಿ ಸಂಪೂರ್ಣ ಚಾರ್ಜ್ ನಲ್ಲಿ 303 km ಮೈಲೇಜ್ ನೀಡಲಿದೆ. ಹೀಗಾಗಿ ಮುಂಬರುವ ಹೊಸ ಎಲೆಕ್ಟ್ರಿಕ್ SUV ಯೆಪ್ ಎಲೆಕ್ಟ್ರಿಕ್ ಎಸ್ ಯುವಿಗಿಂತ ಸ್ವಲ್ಪ ಮಟ್ಟಿಗೆ ಗರಿಷ್ಠ ರೇಂಜ್ ನೀಡಲಿದೆ.