Salary Hike: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಸಂಬಳದಲ್ಲಿ 12 ಸಾವಿರ ಹೆಚ್ಚಳ.
Central Government Employees Salary Hike: ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಇದೀಗ ಸಿಹಿ ಸುದ್ದಿ ಲಭಿಸಿದೆ. ಡಿಎ (DA) ಭತ್ಯೆ ಮತ್ತು ವೇತನದ ಹೆಚ್ಚಳದ ನಿರೀಕ್ಷೆಯಲ್ಲಿರುವವರಿಗೆ ಇದೀಗ ಕೇಂದ್ರ ಸರ್ಕಾರದಿಂದ ಹೊಸ ಮಾಹಿತಿ ಹೊರಬಿದ್ದಿದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಸಂಬಳದಲ್ಲಿ ಏರಿಕೆ ಮಾಡುವ ನಿರ್ಧಾರ ಮಾಡಿದೆ.
ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದ ಕೇಂದ್ರ ಸರ್ಕಾರೀ ನೌಕರ ನಿರೀಕ್ಷೆ ಮುಂದಿನ 24 ಗಂಟೆಗಳಲ್ಲಿ ಪೂರಣಗೊಳ್ಳಲಿದೆ. ನಾಳೆ ನಡೆಯ್ಳಿರುವ ಮೋದಿ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳಕ್ಕೆ ಅನುಮೋದನೆ ದೊರೆಯಲಿದೆ.
ಮಾರ್ಚ್ 15 ರಂದು ಪ್ರಧಾನಿ ನರೇಂದ್ರ ಮೋದಿ (Pradhani Narendra Modi) ನೇತೃತ್ವದಲ್ಲಿ ಸಂಪುಟ ಸಭೆಯನ್ನು ಪ್ರಸ್ತಾಪಿಸಲಾಗಿದೆ. ಈ ಸಭೆಯ ನಂತರ ಕೇಂದ್ರ ಸರ್ಕಾರವು ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯನ್ನು ನೀಡಬಹುದು.
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
ಕಳೆದ ಆರು ತಿಂಗಳ AICPI ಆಧಾರದ ಮೇಲೆ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಡಿ ಎ ಶೇ. 38 ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಶೇ. 42 ಕ್ಕೆ ಏರಿಕೆಯಾಗಲಿದೆ. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ ಅವರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರ ನೌಕರರ ಡಿಎ ಶೇ. 38 ರಿಂದ 42 ಕ್ಕೆ ಏರಿಕೆಯಾಗಲಿದೆ. ಪೆ ಬ್ಯಾಂಡ್ 3 ರಲ್ಲಿನ ಒಟ್ಟು ಹೆಚ್ಚಳ ತಿಂಗಳಿಗೆ 720 ರೂ. ಆಗಲಿದೆ. ನಿಮ್ಮ ಮೊದಲ ವೇತನ 25000 ರೂಪಾಯಿ ಆಗಿದ್ದರೆ ಪ್ರಸ್ತುತ 9500 ರೂಪಾಯಿ ತುಟ್ಟಿಭತ್ಯೆ ಸಿಗಲಿದೆ. ಆದರೆ ಡಿಎ ಶೇ. 42 ಕ್ಕೆ ಹೆಚ್ಚಳವಾದಾಗ ಅದು 10500 ರೂ. ಆಗುತ್ತದೆ. ಅಂದರೆ ವಾರ್ಷಿಕವಾಗಿ ನಿಮ್ಮ ಸಂಬಳದಲ್ಲಿ 12000 ಹೆಚ್ಚಾಗಲಿದೆ.